ಪಶ್ಚಿಮ ಘಟ್ಟ ವಾಯ್ಸ್ ಯಲ್ಲಾಪುರ ವಿಭಾಗದ ಮಂಚಿಕೇರಿ ಉಪ ವಿಭಾಗದ ಇಡುಗುಂದಿ ವಲಯದಲ್ಲಿ ದಿನಾಂಕ:18/01/2024 ರಂದು ಇಡಗುಂದಿ ವಲಯದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ತೆರಳಿ ಸದರಿ ಗ್ರಾಮದ ಜನರಿಗೆ ಬೆಂಕಿಯಿಂದ ಅರಣ್ಯ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸದರಿ ಕಾರ್ಯಕ್ರಮವನ್ನು ಇಡಗುಂದಿ ವಲಯ ಕಚೇರಿಯಿಂದ ಚಾಲನೆ ಮಾಡಿ ಅರಬೈಲ್, ಕಳಾಸೆ, ಗುಳ್ಳಾಪುರ, ಕೊಡ್ಲಗದ್ದೆ,ವಜ್ರಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಸಂಚರಿಸಿ ಎಲ್ಲಾ ಗ್ರಾಮದ ಜನರಿಗೆ ಬೆಂಕಿಯಿಂದ ಅರಣ್ಯ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿ ಪ್ರತಿಜ್ಞಾವಿಧಿಯನ್ನು ಬೋಧಿಸಿದ್ದು ಇರುತ್ತದೆ ಸದರಿ ಕಾರ್ಯಕ್ರಮದಲ್ಲಿ ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಾನ್ಯ ಶ್ರೀ ಎಸ್. ಜಿ. ಹೆಗಡೆ ಹಾಗೂ ಮಂಚಿಕೇರಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀಮತಿ ಹಿಮಾವತಿ ಭಟ್, ಮತ್ತು ಇಡುಗುಂದಿ ವಲಯದ ವಲಯ ಅರಣ್ಯಾಧಿಕಾರಿಗಳಾದ ಶ್ರೀಮತಿ ಶಿಲ್ಪಾ ನಾಯ್ಕಹಾಗೂ ವಲಯದ ಎಲ್ಲಾ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಇರುತ್ತದೆ.
ಸಾರ್ವಜನಿಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅರಣ್ಯದಲ್ಲಿ ಬೆಂಕಿ ಬೀಳದಂತೆ ಬಿದ್ದರೂ ತಕ್ಷಣಕ್ಕೆ ಆರಿಸುವ ಮೂಲಕ ತಮ್ಮ ಅರಣ್ಯವನ್ನು ಕಾಪಾಡುತ್ತವೆ ಎಂದು ದೇವರ ಸಾಕ್ಷಿಯಾಗಿ ಪ್ರಮಾಣ ಮಾಡಿದ್ದಾರೆ.
ಬೇಸಿಗೆ ಕಾಲ ಸಮೀಪಿಸುತ್ತಿದ್ದು ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಲ್ಲಿ ಹಾಗೂ ಯಾವುದೇ ಅರಣ್ಯ
ಅಪರಾಧಗಳು ಕಂಡು ಬಂದಲ್ಲಿ ಸ್ಥಳೀಯ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಕರೆ ಮಾಡುವಂತೆ ಸ್ಥಳೀಯರು ಹಾಗೂ ಸಾರ್ವಜನಿಕರಲ್ಲಿ ವಲಯ ಅರಣ್ಯಾಧಿಕಾರಿ ಶ್ರೀಮತಿ ಶಿಲ್ಪಾ ನಾಯ್ಕ ಮನವಿ ಮಾಡಿಕೊಂಡಿದ್ದಾರೆ.
RFO Idgundi 94819 94307