PGK NEWS (ಪಶ್ಚಿಮ ಘಟ್ಟ ವಾಯ್ಸ್ )ಕಾರವಾರ :-ಜಿಲ್ಲಾ ರಂಗಮಂದಿರದಲ್ಲಿ ,ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಾಗೂ ಜಿಲ್ಲಾಧಿಕಾರಿಗಳಾದ ಗಂಗೂಬಾಯಿ ಮಾನ್ಕರ್ ಅಧ್ಯಕ್ಷತೆಯಲ್ಲಿ ನಡೆದ ಸ್ವಯಂ ಉದ್ಯೋಗ ಯೋಜನೆಯ ಫಲಾನುಭವಿಯ ಅರ್ಜಿಗೆ ಚಾಲನೆ ನೀಡಿದರು.ಜಿಲ್ಲಾ ರಂಗ ಮಂದಿರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ (ಅಲೆಮಾರಿ )ಜನಾಂಗದ ಅರ್ಜಿಗಳನ್ನು ಪರಿಶೀಲಿಸಿ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರುಗಳಾದ ಅಜ್ಜಪ್ಪ ಸೊಗಲದು ಅವರ ನೇತೃತ್ವದಲ್ಲಿ, ಫಲಾನುಭವಿಗಳನ್ನು ಆಯ್ಕೆ ಮಾಡಿದರು.
ಮೊದಲಿಗೆ:-1ಲಕ್ಷ ನಂತರ 2ಲಕ್ಷ ತದನಂತರ 3:50 ಲಕ್ಷ ಕೊನೆಯಲ್ಲಿ 4 ಲಕ್ಷ ಟ್ಯಾಕ್ಸಿ ಗೂಡ್ಸ್. ಮಾನ್ಯ ಜಿಲ್ಲಾಧಿಕಾರಿಗಳು ಆಯ್ಕೆಯಾದ ಫಲಾನುಭವಿಗಳನ್ನು ಕರೆದು ಶುಭಾಶಯಗಳನ್ನು ವ್ಯಕ್ತಪಡಿಸಿದರು, ಈ ಸಂದರ್ಭದಲ್ಲಿ ಯೋಜನಾ ಸಮಿತಿಯ ಸದಸ್ಯರುಗಳಾದ, ಕೃಷ್ಣ ಬಳೆಗಾರ,ಮಂಜುನಾಥ್ ಆಗೇರ,ತಿಮ್ಮಪ್ಪ ಮುಕ್ರಿ,ಹಾಗೂ ಗಣೇಶ್ ಹಳ್ಳೇರಾ ಉಪಸ್ಥಿತಿಯಲ್ಲಿ ಆಯ್ಕೆ ಮಾಡಿದರು.