PGK NEW ಪಶ್ಚಿಮಘಟ್ಟ ವಾಯ್ಸ್:- ಅಕ್ರಮ ನಾಟ ವಶ :ಇಡುಗುಂದಿ ಅರಣ್ಯ ವಲಯ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ!


 

ಪಶ್ಚಿಮಘಟ್ಟ ವಾಯ್ಸ್:- ಯಲ್ಲಾಪುರ ವಿಭಾಗದ ಇಡುಗುಂದಿ ವಲಯ ವ್ಯಾಪ್ತಿಯಲ್ಲಿ ದಿನಾಂಕ:08/2/2024ರಂದು ಇಡುಗುಂದಿ ವಲಯದ ಸಿಬ್ಬಂದಿಗಳು ಇಲಾಖಾ ವಾಹನದಲ್ಲಿ ಕಾಳಭೈರವ ರಾತ್ರಿಗಸ್ತು ಸಂಚರಿಸುತ್ತಿರುವಾಗ  ವಾಹನ ಸಂಖ್ಯೆKA:16D1576 ರಲ್ಲಿ ಇಲಾಖಾ ಛಪ್ಪಾ ಗುರುತುಗಳಿಲ್ಲದ ಜಂಗ್ಲಿ ಜಾತಿಯ ಮರದ ನಾಟಗಳನ್ನು ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಾಗಿಸುತ್ತಿರುವಾಗ ಸದರಿ ವಾಹನವನ್ನು ಪರಿಶೀಲಿಸಿ  ನೋಡಲಾಗಿ ರಹದಾರಿ ಪಾಸಿನಲ್ಲಿ 13 ನಾಟಗಳು ನಮೂದಾಗಿದ್ದು  ಮೇಲ್ನೋಟಕ್ಕೆ ಹೆಚ್ಚಿನ ನಾಟಗಳನ್ನು ಅನಧಿಕೃತವಾಗಿ ಸಾಗಿಸುತ್ತಿರುವುದು ಕಂಡು ಬಂದ ಮೇರೆಗೆ ಸದರಿ ವಾಹನವನ್ನು ಕಿರವತ್ತಿ ಮರಮುಟ್ಟು ಸಂಗ್ರಹಾಲಯಕ್ಕೆ ಸಾಗಿಸಿ ಸದರಿ ವಾಹಾನದಲಿದ್ದ ನಾಟಾಗಳನ್ನು ಕೆಳಗೆ ಇಳಿಸಿ ಎಣಿಕೆ ಮಾಡಲಾಗಿ ಸದರಿ ವಾಹನದಲ್ಲಿ ಒಟ್ಟುನಾಟಾಗಳು32=22.310ಘ.ಮೀ ಇದ್ದು ಹಾಗೂ ಸದರಿ ರಹದಾರಿ ಪಾಸಿನಲ್ಲಿ ಒಟ್ಟು ನಾಟಾಗಳು13=12.261ಘ.ಮೀ ಇದ್ದು ಸದರಿ ವಾಹನದಲ್ಲಿದ್ದ ನಾಟಾಗಳಿಗೆ ಹಾಗೂ ರಹದಾರಿ ಪಾಸಿನಲ್ಲಿ  ದಾಖಲಾದ ನಾಟಾಗಳಿಗೆ ಹೊಂದಾಣಿಕೆ ಆಗದೆ ಇರುವುದರಿಂದ ಸದರಿ ಮಾಲ್ಹನ್ನುಹಾಗೂ ವಾಹನವನ್ನುಜಪ್ತಿಪಡಿಸಿ ಮಹಾಂತೇಶ್ ಯಲ್ಲಪ್ಪ ತಿಮ್ಮಾಪುರ್ ಸಾಕಿನ್ ಚಿಲಮುರ್, ತಾಲೂಕ್ ರಾಮದುರ್ಗ ಈತನ ಮೇಲೆ ಗುನ್ನೆ ದಾಖಲಿಸಲಾಯಿತು.  ಸದರಿ ಗುನ್ನೆಗೆ ಸಂಬಂಧಿಸಿದಂತೆ ಮಾನ್ಯ

ಶ್ರೀ ಜಿ ಪಿ ಹರ್ಷಾ ಭಾನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಶ್ರೀಮತಿ ಹಿಮಾವತಿ ಭಟ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಶ್ರೀಮತಿ ಶಿಲ್ಪಾ ಎಸ್ ನಾಯ್ಕ್ ವಲಯ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿಗಳಾದ ಶ್ರೀ ರಾಜೇಶ್ ಕುಮಾರ್ ಎಸ್, ಶ್ರೀ ರೇವಣಪ್ಪ ಬಿರಾದಾರ್, ಗುರುಪ್ರಸಾದ ಕೆ ನಾಯ್ಕ, ಗಣೇಶ ಮೂರ್ತಿ ಗುಣಗ, ಶರಣಬಸು, ಆನಂದ ಶಿರಗಾವಿ, ಲೋಕೇಶ್ ನಾಯ್ಕ ಗಸ್ತು ಅರಣ್ಯಪಾಲಕ ಶ್ರೀ ಮನು ಕೆ ವಾಹನ ಚಾಲಕರಾದ ಶ್ರೀ ಮನೋಜ್ ಗೌಡ ಹಾಗೂ ವಿನೋದ್ ನಾಯ್ಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


PGK

Post a Comment

Previous Post Next Post