ಪಶ್ಚಿಮಘಟ್ಟ ವಾಯ್ಸ್ ಬೆಂಗಳೂರು: ರಾಜ್ಯದಲ್ಲಿ ನಾಲ್ಕು ನಗರಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ನಗರವಾಸಿಗಳಿಗೆ ಆತಂಕ ಉಂಟು ಮಾಡಿದೆ.ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮದ ಪ್ರಕಾರ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಮತ್ತು ದಾವಣಗೆರೆ ನಗರಗಳ ವಾಯುವಿನ ಗುಣಮಟ್ಟ ಹಾಳಾಗುತ್ತಿರುವುದು ಕಂಡು ಬಂದಿದೆ. ರಾಷ್ಟ್ರೀಯ ಪರಿವೇಷ್ಠಕ ವಾಯು ಗುಣಮಟ್ಟ ಸಾಧಿಸದ ನಗರಗಳು ಎಂದು ಗುರುತಿಸಿದ
ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಗೋವಿಂದರಾಜು ಪ್ರಶ್ನೆಗೆ ಸಚಿವ ಈಶ್ವರ್ ಖಂಡ್ರೆ ಪರವಾಗಿ ಉತ್ತರಿಸಿದ ಸಭಾನಾಯಕ ಎನ್.ಎಸ್. ಬೋಸರಾಜು, '' ವಾಯು ಮಾಲಿನ್ಯಕ್ಕೆ ಕಾರಣವಾದ ಅಂಶಗಳ ಬಗ್ಗೆ ವಿಜ್ಞಾನ, ತಂತ್ರಜ್ಞಾನ ಅಧ್ಯಯನ ಮತ್ತು ನೀತಿ ಕೇಂದ್ರ (ಸಿಎಸ್‌ಟಿಎಪಿ) ಉಳಿದ ಮೂರು ನಗರಗಳಲ್ಲಿ ಮದ್ರಾಸ್ ಐಐಟಿ ಸಂಸ್ಥೆ ಅಧ್ಯಯನ ಮಾಡಿವೆ,'' ಎಂದು ಹೇಳಿದರು.