ಪಶ್ಚಿಮಘಟ್ಟ ವಾಯ್ಸ್ ಚಿಕ್ಕಮಗಳೂರು, ಫೆ.14: ಬೀಟಮ್ಮ ಗ್ಯಾಂಗ್ ಕಳೆದ 20 ದಿನಗಳಿಂದ ಚಿಕ್ಕಮಗಳೂರು(Chikkamagaluru)ತಾಲೂಕಿನ ಗ್ರಾಮಗಳಲ್ಲಿ ಬೀಡುಬಿಟ್ಟು ಕೋಟ್ಯಂತರ ಮೌಲ್ಯದ ಬೆಳೆ ಹಾನಿ ಮಾಡಿ, ದಿನಕ್ಕೊಂದು ಗ್ರಾಮದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿ ಮಾಡಿದ್ದಾಳೆ. ನಾನು ನಡೆದಿದ್ದೇ ದಾರಿ ಎಂದು BTM ಗ್ಯಾಂಗ್ ಚಿಕ್ಕಮಗಳೂರು ಸಮೀಪದ ಇಂದಾವರ ಗ್ರಾಮದ ತೋಟದಲ್ಲಿ ಬೀಡುಬಿಟ್ಟಿದ್ದು, ಈ ಹಿನ್ನಲೆ ನಗರಕ್ಕೆ ಪ್ರವೇಶ ಮಾಡದಂತೆ ETF ಸಿಬ್ಬಂದಿ ಕಾವಲಿಗೆ ನಿಂತಿದ್ದಾರೆ. ಈ ನಡುವೆ ETF ಸಿಬ್ಬಂದಿಗಳು ನಾವು ನಾಳೆಯಿಂದ ಕೆಲಸ ಮಾಡಲ್ಲ ಎಂದು ಅರಣ್ಯ ಇಲಾಖೆಯ ವಿರುದ್ಧ ಸಮರಕ್ಕೆ ಇಳಿದಿದ್ದಾರೆ. ಸರಿಯಾದ ಸಮಯಕ್ಕೆ ಸಂಬಳವಿಲ್ಲ. ಕಾರ್ಯಚರಣೆ ವೇಳೆ ಊಟ-ತಿಂಡಿಯೂ ಇಲ್ಲ, ನಾವು ಕೆಲಸ ಮಾಡುವುದು ಹೇಗೆ ಎಂದು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶಗೊಂಡು ನಾಳೆಯಿಂದ ಕೆಲಸ ನಿಲ್ಲಿಸಲು ಪ್ಲಾನ್ ಮಾಡಿದ್ದಾರೆ. ಆದ್ರೆ, ಅರಣ್ಯ ಇಲಾಖೆ ಸಿಬ್ಬಂದಿ ಮಾತ್ರ ನಮಗೂ ಇದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ ಜಾಣ ಕುರುಡು ಪ್ರದರ್ಶನ ಮಾಡುವುದರೊಂದಿಗೆ ಕಾಡಾನೆ ಇರುವ ಸ್ಥಳಕ್ಕೂ ಹೋಗದೆ ಚೆಲ್ಲಾಟವಾಡುತ್ತಿದೆ ಎಂಬ ಆರೋಪವನ್ನ ETF ಸಿಬ್ಬಂದಿಗಳೇ ಮಾಡುತ್ತಿದ್ದಾರೆ.
ಕಳೆದ 20 ದಿನಗಳಿಂದ ಬೀಟಮ್ಮ ಗ್ಯಾಂಗ್ ಚಿಕ್ಕಮಗಳೂರಿನಲ್ಲಿ ದಾಂಧಲೆ ಎಬ್ಬಿಸಿ ಆತಂಕ ಸೃಷ್ಟಿ ಮಾಡಿದ್ದಾಳೆ. ದಿನಕ್ಕೊಂದು ಗ್ರಾಮದಲ್ಲಿ ಕಣಿಸಿಕೊಂಡು ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದರೂ ಬೀಟಮ್ಮ ಗ್ಯಾಂಗ್ ಬಗ್ಗೆ ಅರಣ್ಯ ಇಲಾಖೆ ತಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತ ಚೆಲ್ಲಾಟವಾಡುತ್ತಿದ್ದರೆ, ಇತ್ತ ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನವಿಲ್ಲದೆ ಇಟಿಎಫ್ ಸಿಬ್ಬಂದಿ ಪ್ರಾಣ ಸಂಕಟದೊಂದಿಗೆ ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದು, ನಾಳೆಯಿಂದ ಕೆಲಸ ನಿಲ್ಲಿಸುತ್ತೇವೆ ಎಂದು ಹೇಳುತ್ತಿದ್ದಾರೆ.
ಊಟ-ತಿಂಡಿ , ನೀರು ನೀಡದ ಅರಣ್ಯ ಇಲಾಖೆ
ಬೀಟಮ್ಮ ಗ್ಯಾಂಗ್ ದಿನಕ್ಕೊಂದು ಗ್ರಾಮದಲ್ಲಿ ಕಾಣಿಸಿಕೊಳ್ಳುತ್ತಿದ್ದು. ಅರಣ್ಯ ಇಲಾಖೆ ಸಿಬ್ಬಂದಿಯಿಂದ ಸೂಕ್ತ ಸಲಹೆ ಮತ್ತು ಮಾರ್ಗದರ್ಶ ಹಾಗೂ ಮಾಹಿತಿ ಇಲ್ಲದೆ ETF ಸಿಬ್ಬಂದಿಗಳು ಕಾರ್ಯಚರಣೆಯ ನಿರ್ಧಾರ ಮಾಡುವುದು ಹೇಗೆ ಎಂದು ಕಂಗಾಲಾಗಿ ಹೋಗಿದ್ದಾರೆ. ದಿನದ 24 ಗಂಟೆಗಳ ಕಾಲ ಕೆಲಸ ಮಾಡುವ ಸಿಬ್ಬಂದಿಗಳಿಗೆ ಊಟ ಹಾಗೂ ವೇತನವೂ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಬೀಟಮ್ಮ ಗ್ಯಾಂಗ್ ದಿನಕ್ಕೊಂದು ಕಡೆ ಕಾಣಿಸಿಕೊಳ್ಳುತ್ತಿದ್ದು, ಇಟಿಎಫ್ ಸಿಬ್ಬಂದಿಗಳಿಗೆ ಮಾಹಿತಿ ನೀಡುವ ಮೂಲಕ ಮಾರ್ಗದರ್ಶನ ಮಾಡಬೇಕಾದ ಅರಣ್ಯ ಇಲಾಖೆ ಚೆಲ್ಲಾಟ ವಾಡುತ್ತಿದ್ದರೆ, ಇತ್ತ ಇಟಿಎಫ್ ಸಿಬ್ಬಂದಿಗೆ ಪ್ರಾಣ ಸಂಕಟವಾಗಿದೆ.
ನಗರ ವ್ಯಾಪ್ತಿಯಿಂದ ಮೂರು ಕಿಮೀ ದೂರದಲ್ಲಿ ಬೀಟಮ್ಮ ಗ್ಯಾಂಗ್ ಇದ್ದು, ನಗರ ಪ್ರವೇಶ ಮಾಡದಂತೆ ETF ಸಿಬ್ಬಂದಿ ಕಾವಲಿಗೆ ನಿಂತಿದ್ದರು. ಆದ್ರೆ, ನಾಳೆಯಿಂದ ಕೆಲಸ ನಿಲ್ಲಿಸಿದ್ರೆ ಮುಂದೇನು ಎಂಬ ಆತಂಕ ಎದುರಾಗಿದೆ. ಒಟ್ಟಾರೆ ಕಳೆದ 20 ದಿನಗಳಿಂದ ಕಾಡಾನೆಗಳ ಬೀಟಮ್ಮ ಗ್ಯಾಂಗ್ ನ ಉಪಟಳದಿಂದಾಗಿ ಚಿಕ್ಕಮಗಳೂರು ತಾಲೂಕಿನ ಹಲವು ಗ್ರಾಮಗಳ ಜನತೆ ಹಾಗೂ ರೈತರು ಹೈರಾಣಾಗಿ ಹೋಗಿದ್ದಾರೆ. ಆದ್ರೆ, ಅರಣ್ಯ ಇಲಾಖೆ ಸಿಬ್ಬಂದಿ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು. ಇತ್ತ ETF ಸಿಬ್ಬಂದಿ ನಾಳೆಯಿಂದ ಕೆಲಸ ಸ್ಥಗಿತಗೊಳಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಒಂದು ವೇಳೆ ಇಟಿಎಫ್ ಸಿಬ್ಬಂದಿ ಕೆಲಸ ನಿಲ್ಲಿಸಿದ್ದೇ ಆದಲ್ಲಿ ಸಾರ್ವಜನಿಕರ ಸ್ಥಿತಿಯನ್ನು ಊಹಿಸಿಕೊಳ್ಳಲೂ ಅಸಾಧ್ಯವಾಗುತ್ತಿದೆ.