PGKNEWS( ಪಶ್ಚಿಮಘಟ್ಟ ವಾಯ್ಸ್)ಶಿರಸಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅದ್ದೂರಿಯಾಗಿ ನಡೆದ ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆ !



ಪಶ್ಚಿಮಘಟ್ಟ ವಾಯ್ಸ್: ಶಿರಸಿ 
 ಫೆ.17: ಇಂದು ಸಿರ್ಸಿ ನಗರದ ಮಾರಿಕಾಂಬ ಪ್ರೌಢಶಾಲೆ ಇಂದ ಕಾನ್ಗೋಡ್ ಗ್ರಾಮ ಪಂಚಾಯತಿಯವರೆಗೆ  , ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆ ನಡೆಯಿತು.

ಗ್ರಾಮಸ್ಥರು ಜಾಗೃತಿ ಜಾಥಾ ವಾಹನಕ್ಕೆ ಆರತಿ ಬೆಳಗಿಸುವುದರ ಮೂಲಕ ಸ್ವಾಗತ ಕೋರಿದರು. ವಿದ್ಯಾರ್ಥಿಗಳು ಆಕರ್ಷಕ ಕೋಲಾಟ, ನೃತ್ಯ, ಹಾಡುಗಳು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದವು. ಮಹಿಳೆಯರ ಡೊಳ್ಳು ಕುಣಿತ, ಮುತ್ತೈದೆಯರ ಕುಂಭಮೇಳ, ಸೇವಾದಳ, ಶಾಲಾ ವಿದ್ಯಾರ್ಥಿಗಳು,  

,


ರಾಷ್ಟ್ರೀಯ ದಲಿತ ಸಮಿತಿಯ ಕಾರ್ಯಕರ್ತರು RDS 
ಹಾಗೂ ಗ್ರಾಮಸ್ಥರು ಅದ್ಧೂರಿಯಾಗಿ ಮೆರವಣಿಗೆ ಮೂಲಕ ನಗರದ ಪ್ರಮುಖ 5 ರಸ್ತೆ, ಶಿವಾಜಿ ಚೌಕ್, ಹಳೆ ಬಸ್ ಸ್ಟಾಂಡ್ ಸರ್ಕಲ್,ಬಿಡಿಕೆ ಬೈಲ್,  ಬೀದಿಗಳಲ್ಲಿ ಜಾಥಾ ಸಂಚರಿಸಿತು. ನಮ್ಮ ಸಂವಿಧಾನ ನಮ್ಮ ಹೆಮ್ಮೆ, ಜೈ ಭೀಮ್, ಅಂಬೇಡ್ಕರ್ ಕುರಿತಾದ ಜಯಘೋಷಗಳನ್ನು ಸಾರ್ವಜನಿಕರು ಕೂಗಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆಯು ಎಲ್ಲರ ಗಮನ ಸೆಳೆಯಿತು. ರಸ್ತೆಗಳಲ್ಲಿ ಚಿತ್ತಾಕರ್ಷಕವಾಗಿ ರಂಗೋಲಿಗಳನ್ನು ಬಿಡಿಸಲಾಗಿತ್ತು.


ಸಮಾಜ ಕಲ್ಯಾಣ ಇಲಾಖೆಯ ಸಾಯಕ ನಿರ್ದೇಶಕರು, ಕೃಷಿ ಇಲಾಖೆಯ ಸಹಾಯಕ 
ನಿರ್ದೇಶಕರು  ಸತೀಶ್ ಹೆಗಡೆ ,ಸಿರ್ಸಿ ಠಾಣೆಯ ನಗರ ಸಬ್ ಇನ್ಸ್ಪೆಕ್ಟರ್ ನಾಗಪ್ಪ,,ಸಹಾಯಕ ಆಯುಕ್ತರು ,  ಕಾನ್ಗೋಡ್   ಗ್ರಾಮ ಪಂಚಾಯತ್ ಅಧ್ಯಕ್ಷರu ಮತ್ತು ಇತರ ಅಧಿಕಾರಿಗಳು ಹಾಗೂ ಸಾರ್ವಜನಿಕರು ಗುರುಸಿದ್ದಗೌಡ ಯ ಮೇಲ್ಮಾಳಗಿ, ಉಪಾಧ್ಯಕ್ಷರಾದ  ಹರಕುಣಿ, ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳu, ಗ್ರಾಮ ಪಂಚಾಯತ್ ಅಧಿಕಾರಿಗಳು  ಕೊಳೇರಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಮುಖಂಡರು, ಶಿಶು ಅಭಿವೃದ್ದಿ ಅಧಿಕಾರಿಗಳು, ಹಾಗೂ ಆಶಾ

ಕಾರ್ಯಕರ್ತೆಯರು, ವಿದ್ಯಾರ್ಥಿಗಳು,  ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

 


PGK

Post a Comment

Previous Post Next Post