ಪಶ್ಚಿಮಘಟ್ಟ ವಾಯ್ಸ್-ಬೆಂಗಳೂರು: ಲೋಕಸಭೆ ಚುನಾವಣೆಗೆ ನೀತಿಸಂಹಿತಿ ಜಾರಿಗೊಂಡ ಎರಡೇ ದಿನದಲ್ಲಿ ರಾಜ್ಯದ ವಿವಿಧ ಕಡೆ ದಾಳಿ ನಡೆಸಿ 31.42 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.ಚುನಾವಣೆ ನಿಮಿತ್ತ ನಿಯೋಜಿಸಿರುವ ಪ್ಲೇಯಿಂಗ್ ಸ್ಕ್ವಾಡ್, ಅಬಕಾರಿ, ಆದಾಯ ತೆರಿಗೆ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ದಾಖಲೆ ಇಲ್ಲದೆ ಸಾಗಿಸುತ್ತಿದ್ದ ೬೩.೪೯ ಲಕ್ಷ ನಗದು ವಶಕ್ಕೆ ಪಡೆದಿದ್ದಾರೆ. ಮಾ.೧೬ರ ಮೊದಲ ದಿನವೇ ೧೭.೭೩ ಲಕ್ಷ ನಗದು, ಎರಡನೇ ದಿನವಾದ ಸೋಮವಾರ ೪೫.೭೬ ಲಕ್ಷ ರೂ. ಚೆಕ್‌ಪೋಸ್ಟ್ಗಳಲ್ಲಿ ಜಪ್ತಿ ಮಾಡಲಾಗಿದೆ.
3.99ಕೋಟಿ ಮೌಲ್ಯದ ಬಿಯರ್ ವಶ:
ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದ್ದ 15.38 ಕೋಟಿ ರೂ. ಮೌಲ್ಯದ 8.42,72ಲೀಟರ್ ಮದ್ಯವನ್ನು ಮೊದಲ ದಿನ ವಶಕ್ಕೆ ಪಡೆಯಲಾಗಿದೆ. ಸೋಮವಾರ (ಮಾ.೧೭)ರಂದು ೧೫.೩೭ ಕೋಟಿ ರೂ.ಮೌಲ್ಯದ ೪,೯೪,೫೦೨ ಲೀಟರ್ ಅಕ್ರಮ ಮದ್ಯ ಪತ್ತೆ ಮಾಡಿದ್ದಾರೆ. ಅಲ್ಲದೇ ೫,೬೬,೪೮೦ ಮೌಲ್ಯದ ನಿಷೇಧಿತ ಮಾದಕ ವಸ್ತು ೭.೩೦೮ ಕೆ.ಜಿ. ವಶಕ್ಕೆ ಪಡೆಯಲಾಗಿದೆ.
ಪ್ಲೇಯಿಂಗ್ ಅಧಿಕಾರಿಗಳು ಎರಡು ದಿನದಲ್ಲಿ ೭೦, ಅಬಕಾರಿ ಅಧಿಕಾರಿಗಳು ೫೬ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಖಲೆ ಇಲ್ಲದೆ ನಗದು ಸಾಗಣೆ, ಬೆಲೆಬಾಳುವ ವಸ್ತುಗಳು ವಶಕ್ಕೆ ಪಡೆದಿದ್ದಾರೆ. ಮಾದಕ ವಸ್ತು ಸಾಗಣೆ ಕುರಿತು ಎನ್‌ಡಿಪಿಎಸ್ ಕಾಯ್ದೆಅಡಿ ೪ ಪ್ರಕರಣ, ೨೪೧ ವಿವಿಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ಸಾಗಣೆ ಮಾಡಲಾಗುತ್ತಿದ್ದ ೩.೯೯ ಕೋಟಿ ರೂ.ಮೌಲ್ಯದ ಬಿಯರ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಜಿಲೆನ್ಸ್ ತಂಡ, ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಸೇರಿದಂತೆ ರಾಜ್ಯ ಚುನಾವಣಾ ಆಯೋಗದ ಸುವಿಧಾ ಆ್ಯಪ್ ಮೂಲಕ ಬಂದ ದೂರು ಆದರಿಸಿ ವಿವಿಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.