ಉತ್ತರ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ 127 ಮಂದಿ ಪೌರ ಕಾರ್ಮಿಕರ ವರ್ಷಗಳ ಕನಸು ನನಸಾಗಿದೆ , ಇವರೆಲ್ಲರಿಗೂ ಕಾಯಂ ಗೊಳಿಸುವ ಆದೇಶವನ್ನು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೊರಡಿಸಿದ್ದು ಮಾರ್ಚ್ 11 ರಂದು ಆದೇ ಪತ್ರ ಕೈ ಸೇರಲಿದೆ.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇದ್ದ 127 ಪೌರ ಕಾರ್ಮಿಕರ ಹುದ್ದೆಗಳ ಕಾಯಂ ನೇಮಕಾತಿ ಕುರಿತಂತೆ ಈಗಾಗಲೇ ದಿನಗೂಲಿ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ನೇಮಕಾತಿಯಲ್ಲಿ ಪ್ರಥಮ ಆದ್ಯತೆ ನೀಡಿದ್ದು, ಸ್ಥಳೀಯ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಿಂತ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದಲ್ಲಿ , ಹೆಚ್ಚುವರಿ ಅರ್ಜಿಗಳನ್ನು ತಿರಸ್ಕೃತಗೊಳಿಸದೆ, ಅವುಗಳನ್ನು ಕಡಿಮೆ ಅರ್ಜಿ ಸಲ್ಲಿಕೆಯಾಗಿದ್ದ ನಗರ ಸ್ಥಳೀಯ ಸಂಸ್ಥೆಗೆ ವರ್ಗಾಯಿಸುವ ಮೂಲಕ ಅರ್ಹ ಎಲ್ಲರು ಉದ್ಯೋಗ ಪಡೆಯಲು ಜಿಲ್ಲಾಧಿಕಾರಿ ಗಳು ಮುತುವರ್ಜಿ ವಹಿಸಿದ್ದಾರೆ.
ಪೌರ ಕಾರ್ಮಿಕರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷ ರೂ ಆಗಿರುವ ಜಿಲ್ಲಾಧಿಕಾರಿಗಳು ಆಯ್ಕೆಪಟ್ಟಿ ಪ್ರಕಟಗೊಂಡ ನಂತರ ಎಲ್ಲಾ ಅಭ್ಯರ್ಥಿಗಳಿಗೂ, ನೇಮಕಾತಿ ಆದೇಶ ಪಡೆಯಲು ಅಗತ್ಯವಿದ್ದ ಸಿಂಧುತ್ವ ಪ್ರಮಾಣ ಪತ್ರ ಪಡೆಯಲು ಇದ್ದ ತೊಡಕುಗಳನ್ನು ನಿವಾರಿಸಿ ಎಲ್ಲಾರಿಗೂ ಸಿಂಧುತ್ವ ಪ್ರಮಾಣ ಪತ್ರ ದೊರೆಯುವಂತೆ ಮಾಡುವ ಮೂಲಕ ಪೌರ ಕಾರ್ಮಿಕರ ಕುಟುಂಬಗಳಲ್ಲಿ ಸಂತಸ ಮೂಡಿಸಿದ್ದಾರೆ.

ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯನ್ನು ಸ್ವಚ್ಚ ಮತ್ತು ಸುಂದರಗೊಳಿಸಿ ನೈರ್ಮಲ್ಯ ಕಾಪಾಡುವ ಮೂಲಕ ಆರೋಗ್ಯವಂತ ವಾತಾವರಣ ನಿರ್ಮಾಣ ಮಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಗಣನಿಯವಾದುದು. ಅವರ ಸೇವೆಯನ್ನು ಪತ್ರಿಯೊಬ್ಬ ಸಾರ್ವಜನಿಕರು ಗೌರವಿಸುವುದು ಅತ್ಯಂತ ಅಗತ್ಯ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಹೇಳಿದ್ದಾರೆ.