PGK NEWS (ಪಶ್ಚಿಮಘಟ್ಟ ವಾಯ್ಸ್) ಶಿವಮೊಗ್ಗದಲ್ಲಿ ಗೆದ್ದೇ ಗೆಲ್ಲುತ್ತೇನೆ: ಗೀತಾ ಶಿವರಾಜ್ ಕುಮಾರ್!


  PGK NEWS  ಪಶ್ಚಿಮಘಟ್ಟ ವಾಯ್ಸ್:ಬೆಂಗಳೂರು: ನಾನು ಲೋಕಸಭೆ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ​ಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್​​ ಪಕ್ಷದಿಂದ ಟಿಕೆಟ್ ಪಡೆದ ಹಾಗೂ ಸಿದ್ಧತೆಗಳ ಬಗ್ಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಎಲ್ಲರೂ ಪರಿಚಿತರೇ ಇದ್ದಾರೆ. ಹೊಸಬರು ಯಾರಿಲ್ಲ. ಹೀಗಾಗಿ ಗೆಲ್ಲುವ ಭರವಸೆ ಇದೆ ಎಂದರು.

ಕಳೆದ ಒಂಬತ್ತು ವರ್ಷಗಳ ಹಿಂದೆ ಚುನಾವಣೆಗೆ ನಿಂತಿದ್ದೆ. ಆದರೆ ನಾನು 17 ದಿನ ಕೆಲಸ ಮಾಡಿದ್ದೆ. ಹೀಗಾಗಿ ಸೋಲಾಗಿತ್ತು ಅನಿಸುತ್ತದೆ. ಈ ಬಾರಿ ಹೆಚ್ಚಿನ ಸಮಯ ಶಿವಮೊಗ್ಗದಲ್ಲಿ ಇರುತ್ತೇನೆ. ನನ್ನ ಸಹೋದರ ಸಹ ಬೆಂಬಲವಾಗಿ ಇದ್ದಾನೆ. ಶಿವಮೊಗ್ಗದಲ್ಲಿ ಈಗಾಗಲೇ ಮನೆ ಮಾಡಿದ್ದೇನೆ. ಓಡಾಟಕ್ಕೆ ಸಮಸ್ಯೆ ಇಲ್ಲ. ಚುನಾವಣೆಯಲ್ಲಿ ಯಾರು ಭಾಗಿ ಆಗುತ್ತಾರೆ ಎಂದು ಇನ್ನೂ ಪ್ಲಾನ್ ಮಾಡಿಲ್ಲ, ಶಿವಣ್ಣ ಬರುವುದು ಖಚಿತ ಎಂದರು.



PGK

Post a Comment

Previous Post Next Post