PGK NEWS (ಪಶ್ಚಿಮಘಟ್ಟ ವಾಯ್ಸ್ )ಕಾರವಾರ, ಮಾರ್ಚ್, ಉತ್ತರ ಕನ್ನಡ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಒಂದು. ಗೋವಾ ರಾಜ್ಯ, ಬೆಳಗಾವಿ, ಧಾರವಾಡ, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳೊಂದಿಗೆ ತನ್ನ ಗಡಿಗಳನ್ನು ಹಂಚಿಕೊಂಡಿದೆ. ಇನ್ನು ಪಶ್ಚಿಮಕ್ಕೆ ಅರಬ್ಬೀ ಸಮುದ್ರವಿದೆ. ಬಹುತೇಕ ಅರಣ್ಯಪ್ರದೇಶದಿಂದ ಕೂಡಿರುವ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಅನೇಕ ಜಲಪಾತಗಳಿವೆ. ಅಲ್ಲದೆ ರಾಜ್ಯದ ಪ್ರಖ್ಯಾತ ಜಾನಪದ ಕಲೆ "ಯಕ್ಷಗಾನ" ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದೆ. ಹಾಗಾದರೆ ಈ ಲೋಕಸಭಾ ಕ್ಷೇತ್ರದ ಪರಿಚಯವನ್ನು ಇಲ್ಲಿ ತಿಳಿಯಿರಿ.
ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ಎರಡನೇ ಹಂತದಲ್ಲಿ ನಡೆಯುವ ಉತ್ತರಕನ್ನಡ ಹಾಗೂ ಬೆಳಗಾವಿ ಎರಡು ಲೋಕಸಭಾ ಕ್ಷೇತ್ರವನ್ನೊಳಗೊಂಡ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಜೋರಾಗಿದೆ. ಕ್ಷೇತ್ರದಲ್ಲಿ ಈವರೆಗೆ ಯಾವುದೇ ಪಕ್ಷಗಳು ಅಭ್ಯರ್ಥಿ ಘೋಷಣೆ ಮಾಡಿಲ್ಲ. ಆದರೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಬಗ್ಗೆ ತೀವ್ರ ಕುತೂಹಲ ಇದೀಗ ಜನಸಾಮಾನ್ಯರಲ್ಲಿ ಮೂಡಿದೆ.
ಉತ್ತರಕನ್ನಡ ಲೋಕಸಭಾ ಕ್ಷೇತ್ರ ಬೆಳಗಾವಿಯ ಕಿತ್ತೂರು ಖಾನಾಪುರ ಎರಡು ವಿಧಾನಸಭಾ ಕ್ಷೇತ್ರ ಹಾಗೂ ಉತ್ತರಕನ್ನಡದ 6 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಿತ್ತೂರು ಕ್ಷೇತ್ರ ಹಾಗೂ ಉತ್ತರಕನ್ನಡದ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರುಗಳು ಆಯ್ಕೆ ಆಗಿದ್ದಾರೆ. ಇನ್ನು ಯಲ್ಲಾಪುರ, ಕುಮಟಾ ಹಾಗೂ ಖಾನಾಪುರ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರನ್ನು ಹೊಂದಿದೆ. ಆದರೆ ಉತ್ತರಕನ್ನಡ ಲೋಕಸಭಾ ಕ್ಷೇತ್ರ ಕಳೆದ ಮೂರು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದೆ.
ಬಿಜೆಪಿಯಲ್ಲಿ ಯಾರ ಹೆಸರು ಮುನ್ನೆಲೆಗೆ?: ಹಾಲಿ ಸಂಸದ ಅನಂತಕುಮಾರ್ ಹೆಗಡೆ ಕಳೆದ 5 ವರ್ಷಗಳಿಂದ ನಿಷ್ಕ್ರಿಯ ರಾಜಕಾರಣದಲ್ಲಿದ್ದ ಹಿನ್ನೆಲೆ ಈ ಬಾರಿ ಬದಲಾವಣೆ ಬಗ್ಗೆ ಸ್ವ ಪಕ್ಷದವರಿಂದಲೇ ಒತ್ತಾಯಗಳು ಕೇಳಿಬಂದಿದ್ದು, ಇದೀಗ ಬಿಜೆಪಿ ಅಭ್ಯರ್ಥಿ ಬಗ್ಗೆ ತೀವ್ರ ಕುತೂಹಲ ಮೂಡಿದೆ. ಇಷ್ಟು ವರ್ಷಗಳ ಕಾಲ ಸುಲಭದಲ್ಲಿ ಗೆಲುವು ಸಾಧಿಸುತ್ತಿದ್ದ ಬಿಜೆಪಿಗೆ ಈ ಬಾರಿ ಅಭ್ಯರ್ಥಿ ಬದಲಾವಣೆ ಸವಾಲಾಗಿ ಪರಿಣಮಿಸಿದ್ದು ಈ ಕ್ಷೇತ್ರಕ್ಕೆ ಹರಿಪ್ರಕಾಶ್ ಕೋಣೆಮನೆ, ಚಕ್ರರ್ತಿ ಸೂಲಿಬೆಲೆ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ಅಚ್ಚರಿ ಹೆಸರುಗಳು ಜೋರಾಗಿ ಕೇಳಿಬರುತ್ತಿವೆ.
ಬಿಜೆಪಿಯಲ್ಲಿ ಯಾರ ಹೆಸರು ಮುನ್ನೆಲೆಗೆ?: ಹಾಲಿ ಸಂಸದ ಅನಂತಕುಮಾರ್ ಹೆಗಡೆ ಕಳೆದ 5 ವರ್ಷಗಳಿಂದ ನಿಷ್ಕ್ರಿಯ ರಾಜಕಾರಣದಲ್ಲಿದ್ದ ಹಿನ್ನೆಲೆ ಈ ಬಾರಿ ಬದಲಾವಣೆ ಬಗ್ಗೆ ಸ್ವ ಪಕ್ಷದವರಿಂದಲೇ ಒತ್ತಾಯಗಳು ಕೇಳಿಬಂದಿದ್ದು, ಇದೀಗ ಬಿಜೆಪಿ ಅಭ್ಯರ್ಥಿ ಬಗ್ಗೆ ತೀವ್ರ ಕುತೂಹಲ ಮೂಡಿದೆ. ಇಷ್ಟು ವರ್ಷಗಳ ಕಾಲ ಸುಲಭದಲ್ಲಿ ಗೆಲುವು ಸಾಧಿಸುತ್ತಿದ್ದ ಬಿಜೆಪಿಗೆ ಈ ಬಾರಿ ಅಭ್ಯರ್ಥಿ ಬದಲಾವಣೆ ಸವಾಲಾಗಿ ಪರಿಣಮಿಸಿದ್ದು ಈ ಕ್ಷೇತ್ರಕ್ಕೆ ಹರಿಪ್ರಕಾಶ್ ಕೋಣೆಮನೆ, ಚಕ್ರರ್ತಿ ಸೂಲಿಬೆಲೆ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ಅಚ್ಚರಿ ಹೆಸರುಗಳು ಜೋರಾಗಿ ಕೇಳಿಬರುತ್ತಿವೆ.
ಯಾರಿಗೆ ಕೈ ಟಿಕೆಟ್?: ಕಾಂಗ್ರೆಸ್‌ನಲ್ಲಿ ಈ ಬಾರಿ ಅಂಜಲಿ ನಿಂಬಾಳ್ಕರ್ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ ಎಂದೇ ಹೇಳಲಾಗುತ್ತದೆ. ಪ್ರತಿ ಬಾರಿ ಈ ಲೋಕಸಭಾ ಚುನಾವಣೆಯಲ್ಲಿ ಕಿತ್ತೂರು ಖಾನಾಪುರದಲ್ಲಿ ಹಿನ್ನಡೆ ಕಾಣುತ್ತಿದ್ದ ಕಾಂಗ್ರೆಸ್ ಈ ಬಾರಿ ಬಿಜೆಪಿ ನೆಲೆ ಛಿದ್ರಗೊಳಿಸಲು ಮಹಿಳಾ ಅಭ್ಯರ್ಥಿ ಕಣಕ್ಕಿಳಿಸಲು ಮುಂದಾಗಿದೆ ಎನ್ನಲಾಗುತ್ತಿದೆ. ಇನ್ನು ಬಿಜೆಪಿಯಿಂದ ಒಂದು ಹೆಜ್ಜೆ ಹಿಂದಿಟ್ಟುರುವ ಶಾಸಕ ಶಿವರಾಮ್ ಹೆಬ್ಬಾರ್ ಅವರ ಹೆಸರು ಕೂಡ ಮುನ್ನೆಲೆಗೆ ಬಂದಿದೆ.
ಉತ್ತರ ಕನ್ನಡ ಕೆನರಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಿತ್ತೂರು, ಖಾನಾಪುರ, ಹಳಿಯಾಳ, ಕಾರವಾರ, ಕುಮಟಾ, ಭಟ್ಕಳ, ಶಿರಸಿ, ಯಲ್ಲಾಪುರ ವಿಧಾನಸಭಾ ಕ್ಷೇತ್ರ ಸೇರಿ 8 ವಿಧಾನಸಭಾ ಕ್ಷೇತ್ರಗಳು ಬರಲಿದೆ. ಒಟ್ಟು 16,22,857 ಮತದಾರರಿದ್ದು, 8,15, 599 ಪುರುಷರು, 8,07,242 ಮಹಿಳೆಯರು, 16 ಅನ್ಯ ಲಿಂಗಿ ಮತದಾರರು ಇದ್ದಾರೆ. ಒಟ್ಟು 1,977 ಮತಗಟ್ಟೆಗಳನ್ನು ತೆರೆಯಲಾಗಿದೆ.
ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಪ್ರಯುಕ್ತ ಎಪ್ರಿಲ್ 12ರಂದು ನೋಟಿಫಿಕೇಶನ್ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಏಪ್ರಿಲ್ 19 ಕೊನೆಯ ದಿನ. ಏಪ್ರಿಲಗ್ 20 ನಾಮಪತ್ರ ಪರಿಶೀಲನೆ, ಏಪ್ರಿಲ್ 22 ನಾಮ ಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ 7ರಂದು ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ.
ಇನ್ನು ಜಿಲ್ಲೆಯಲ್ಲಿ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಒಟ್ಟು 25 ಚೆಕ್‌ಪೋಸ್ಟ್‌ಗಳನ್ನು ತರೆಯಲಾಗಿದ್ದು, ಈಗಾಗಲೇ ಎಲ್ಲಾ ಚೆಕ್ ಪೋಸ್ಟ್‌ಗಳು ಕಾರ್ಯಾರಂಭ ಮಾಡಿವೆ. 24*7 ಈ ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಈ ಚೆಕ್ ಪೋಸ್ಟ್‌ಗಳಲ್ಲಿ ಸಿಸಿಟಿವಿ ಅಳವಡಿಕೆ ಕೂಡ ಮಾಡಲಾಗಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಪಕ್ಷ, ಅಭ್ಯರ್ಥಿ
* ಕಾರವಾರ-ಅಂಕೋಲಾ: ಕಾಂಗ್ರೆಸ್-ಸತೀಶ್ ಕೆ ಸೈಲ್
* ಕುಮಟಾ-ಹೊನ್ನಾವರ: ಬಿಜೆಪಿ- ದಿನಕರ ಶೆಟ್ಟಿ
* ಭಟ್ಕಳ: ಕಾಂಗ್ರೆಸ್- ಮಂಕಾಳ ಎಸ್ ವೈದ್ಯ
* ಶಿರಸಿ-ಸಿದ್ದಾಪುರ: ಕಾಂಗ್ರೆಸ್- ಭೀಮಣ್ಣ ನಾಯ್ಕ
* ಯಲ್ಲಾಪುರ-ಮುಂಡಗೋಡ: ಬಿಜೆಪಿ- ಶಿವರಾಮ ಹೆಬ್ಬಾರ್
* ಹಳಿಯಾಳ-ಜೋಯಿಡಾ: ಕಾಂಗ್ರೆಸ್- ಆರ್.ವಿ.ದೇಶಪಾಂಡೆ
2023ರ ಚುನಾವಣೆಯಲ್ಲಿ ಪಕ್ಷಗಳಿಗೆ ಶೇಕಡಾವಾರು ಮತ ಹಂಚಿಕೆ
* ಕಾಂಗ್ರೆಸ್- 4,01,979
* ಬಿಜೆಪಿ- 3,99,534
* ಜೆಡಿಎಸ್- 1,03,323
2019ರಲ್ಲಿ ಶೇಕಡಾವಾರು ಮತ ಹಂಚಿಕೆ
* ಬಿಜೆಪಿ-ಅನಂತಕುಮಾರ ಹೆಗಡೆ (ಗೆಲುವು)- 7,86,042 ಮತಗಳು- 69.1%
* ಜೆಡಿಎಸ್- ಆನಂದ್ ಅಸ್ನೋಟಿಕರ್(ಸೋಲು)- 3,06,393 ಮತಗಳು- 26.9%
2019ರ "ಲೋಕಾ" ಚುನಾವಣೆಯಲ್ಲಿ ಕಣದಲ್ಲಿದ್ದ ಇತರೆ ಅಭ್ಯರ್ಥಿಗಳು
* ಮೊಹಮ್ಮದ್ ಜಬ್ರೂದ್ (ಸ್ವತಂತ್ರ)
* ಸುಧಾಕರ ಕಿರಾ ಜೋಗಳೇಕರ್(ಬಿಎಸ್‌ಪಿ)
* ನಾಗರಾಜ ಅನಂತ ಶಿರಾಲಿ (ಸ್ವತಂತ್ರ)
* ಬಾಲಕೃಷ್ಣ ಅರ್ಜುನ್ ಪಾಟೀಲ್ (ಸ್ವತಂತ್ರ)
* ಸುನೀಲ್ ಪವಾರ್ (ಯುಪಿಜೆಪಿ)
* ನಾಗರಾಜ್ ನಾಯ್ಕ (ಆರ್‌ಎಸ್‌ಪಿಎಸ್)
* ಚಿದಾನಂದ ಹರಿಜನ (ಸ್ವತಂತ್ರ)
* ನಾಗರಾಜ ಶ್ರೀಧರ ಶೇಟ್ (ಆರ್ ಜೆಬಿಪಿ)
* ಅನಿತಾ ಅಶೋಕ್ ಶೆಟ್(ಸ್ವತಂತ್ರ)
* ಕುಂದಾಬಾಯಿ ಪರುಲೇಕರ್ (ಸ್ವತಂತ್ರ)
* ಮಂಜುನಾಥ ಸದಾಶಿವ(ಬಿಎಚ್‌ಬಿಎಚ್‌ಪಿ)
2024ರ ಸಂಭಾವ್ಯ ಬಿಜೆಪಿ ಅಭ್ಯರ್ಥಿ
* ಅನಂತಕುಮಾರ್ ಹೆಗಡೆ
* ವಿಶ್ವೇಶ್ವರ ಹೆಗಡೆ ಕಾಗೇರಿ
* ಚಕ್ರವರ್ತಿ ಸೂಲಿಬೆಲೆ
* ಹರಿಪ್ರಕಾಶ್ ಕೋಣೆಮನೆ
2024ರ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿ
* ಅಂಜಲಿ ನಿಂಬಾಳ್ಕರ್
* ಶಿವರಾಮ್ ಹೆಬ್ಬಾರ್
* ರವೀಂದ್ರ ನಾಯ್ಕ
ಜಾತಿವಾರು ಮತದಾರರು
* ನಾಮಧಾರಿ- 2 ಲಕ್ಷ
* ಬ್ರಾಹ್ಮಣ- 1.6 ಲಕ್ಷ
* ಗೌಡ (ಹಾಲಕ್ಕಿ/ಕರೆಒಕ್ಕಲಿಗ)- 1.10 ಲಕ್ಷ
* ಮರಾಠ- 2.20 ಲಕ್ಷ
* ಅಲ್ಪಸಂಖ್ಯಾತರು(ಮುಸ್ಲಿಂ/ಕ್ರಿಶ್ಚಿಯನ್)- 3 ಲಕ್ಷ
* ಮೀನುಗಾರ- 80 ಸಾವಿರ
* ದಲಿತ/SC/ST/ಬುಡಕಟ್ಟು- 2 ಲಕ್ಷ
* ಲಿಂಗಾಯತ- 1 ಲಕ್ಷ
* ಮಡಿವಾಳ- 40 ಸಾವಿರ
* ಕೋಮಾರಪಂಥ- 35 ಸಾವಿರ
* ದೈವಜ್ಞ ಬ್ರಾಹ್ಮಣ(Goldsmith)- 40 ಸಾವಿರ
* ಭಂಡಾರಿ- 40 ಸಾವಿರ
* ಇತರರು- 82,600 ಸಾವಿರ
2019ರ ಚುನಾವಣೆ ವಿವರ
* ಗೆದ್ದ ಅಭ್ಯರ್ಥಿ- ಅನಂತಕುಮಾರ ಹೆಗಡೆ - ಬಿಜೆಪಿ - 7,86,042 ಮತಗಳು | ಅಂತರ- 4,79,649
* ಸೋತ ಅಭ್ಯರ್ಥಿ- ಆನಂದ್ ಅಸ್ನೋಟಿಕರ್ - ಜೆಡಿಎಸ್ - 3,06,393 ಮತಗಳು
2014ರ ಚುನಾವಣೆ ವಿವರ
* ಗೆದ್ದ ಅಭ್ಯರ್ಥಿ- ಅನಂತಕುಮಾರ ಹೆಗಡೆ - ಬಿಜೆಪಿ - 5,46,939 ಮತಗಳು | ಅಂತರ 1,40,700
* ಸೋತ ಅಭ್ಯರ್ಥಿ- ಪ್ರಶಾಂತ ಆರ್ ದೇಶಪಾಂಡೆ - ಕಾಂಗ್ರೆಸ್ - 4,06,239 ಮತಗಳು
2009 ಚುನಾವಣೆ ವಿವರ
* ಗೆದ್ದ ಅಭ್ಯರ್ಥಿ- ಅನಂತಕುಮಾರ ಹೆಗಡೆ - ಬಿಜೆಪಿ - 3,39,300 ಮತಗಳು | ಅಂತರ 22,769
* ಸೋತ ಅಭ್ಯರ್ಥಿ- ಮಾರ್ಗರೇಟ್ ಆಳ್ವ - ಕಾಂಗ್ರೆಸ್ - 3,16,531 ಮತಗಳು.
2004ರ ಚುನಾವಣೆ ವಿವರ
* ಗೆದ್ದ ಅಭ್ಯರ್ಥಿ- ಅನಂತಕುಮಾರ ಹೆಗಡೆ - ಬಿಜೆಪಿ - 4,33,174 ಮತಗಳು | ಅಂತರ 1,72,226
* ಸೋತ ಅಭ್ಯರ್ಥಿ- ಮಾರ್ಗರೇಟ್ ಆಳ್ವ - ಕಾಂಗ್ರೆಸ್ - 2,60,948 ಮತಗಳು