PGK NEWS (ಪಶ್ಚಿಮಘಟ್ಟ ವಾಯ್ಸ್) ಉತ್ತರ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಶಿರಸಿಯ ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಆಯ್ಕೆ!


ಪಶ್ಚಿಮಘಟ್ಟ ವಾಯ್ಸ್:-
ಕಾರವಾರ- ಉತ್ತರ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಶಿರಸಿಯ ಮಾಜಿ ಶಾಸಕ , ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅಂತಿಮವಾಗಿ ಆಯ್ಕೆಯಾಗಿದ್ದಾರೆ. ಹಾಲಿ ಸಂಸದ ಅನಂತಕುಮಾರ್ ಹೆಗಡೆ ಈ ಬಾರಿ ಭಾಜಪಾ ಟಿಕೆಟ್ ನಿರಾಕರಿಸಿದ್ದ ಬೆನ್ನಲ್ಲೇ, ಬೇರೆಯವರಿಗೆ ಟಿಕೆಟ್ ನೀಡಬಹುದೆಂದು ಅಂದಾಜಿಸಲಾಗಿತ್ತು. ಅದರಂತೆ ಕೆನರಾ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸ್ಪೀಕರ್ ವಿಶ್ವೇಶ್ವರ ಕಾಗೇರಿ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ.

 ಈ ಬಾರಿ ಕೆನರಾ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ದಿಸಲು ಅವಕಾಶ ನೀಡಲಾಗಿದ್ಸು ಇದರೊಂದಿಗೆ ಮತ್ತೊಮ್ಮೆ ಅವಕಾಶ ಕೇಳಿದ್ದ ಹಿಂದು ಟೈಗರ್  ಸಂಸದ ಅನಂತಕುಮಾರ ಹೆಗಡೆಯವರ ಕನಸು ನುಚ್ಚುನೂರಾಗಿದೆ.ಕಾಗೇರಿ ಆರು ಬಾರಿ ಶಾಸಕಕಾಗಿ ಒಮ್ಮೆ ಸಚಿವರಾಗಿ ಒಮ್ಮೆ ಸ್ಪೀಕರ್ ಆಗಿ ಕೆಲಸಮಾಡಿದ ಅನುಭವ ಹೊಂದಿದ್ಸು ಜಿಲ್ಲೆ ಅಷ್ಟೇ ಅಲ್ಲದೆ ರಾಜ್ಯದಲ್ಲಿಯೂ ಗುರುತಿಸಿಕೊಂಡ ಚಾಣಕ್ಷ ರಾಜಕಾರಣಿ.


PGK

Post a Comment

Previous Post Next Post