PGK NEWS -ಮತ್ತೊಂದು ಪೆನ್‌ಡ್ರೈವ್‌ ಪ್ರಕರಣ; ಆಪರೇಷನ್ ಥಿಯೇಟರ್‌ನಲ್ಲೇ ನರ್ಸ್‌ ಜೊತೆ ವೈದ್ಯನ ಸರಸ!

 


  PGK NEWS  ಚೆನ್ನೈ : ಆಸ್ಪತ್ರೆಯನ್ನು ಜನರು ದೇಗುಲವೆಂದು, ವೈದ್ಯರನ್ನು ದೇವರೆಂದು ಭಾವಿಸುತ್ತಾರೆ. ಯಾಕೆಂದರೆ ಇಲ್ಲಿ ಜನರ ಜೀವವನ್ನು ಉಳಿಸುತ್ತಾರೆ ನಂಬಿಕೆ ಇದೆ. ಕಾಯಿಲೆಯಿಂದ ಬಳಲುತ್ತಿರುವವರು ಇಲ್ಲಿ ಮರುಜೀವ ಪಡೆದುಕೊಂಡಿರುತ್ತಾರೆ. ಆದರೆ ಇಂತಹ ದೇಗುಲದಂತಿರುವ ಆಸ್ಪತ್ರೆಯಲ್ಲಿ ನೀಚ ಕೃತ್ಯವನ್ನು ಎಸಗುವುದು ಎಷ್ಟು ಸರಿ? ಅಂತಹದೊಂದು ಘಟನೆ ಇದೀಗ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಚೆನ್ನೈನ ಆಸ್ಪತ್ರೆವೊಂದರ ಆವರಣದಲ್ಲಿ ವೈದ್ಯ ಮತ್ತು ನರ್ಸ್ ಅನೈತಿಕ ಕಾರ್ಯದಲ್ಲಿ ತೊಡಗಿರುವ ವಿಡಿಯೊ ವೈರಲ್‌ (Viral News) ಆಗಿದೆ.

ಚೆನ್ನೈ ನಗರದ ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯ ಮತ್ತು ನರ್ಸ್ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಈ ವಿಡಿಯೊದಲ್ಲಿರುವ ವೈದ್ಯ ಡಾ. ಸುಬ್ಬಯ್ಯ ಷಣ್ಮುಗಂ ಎಂದು ಗುರುತಿಸಲಾಗಿದೆ. ಈತ ಆಪರೇಷನ್ ಥಿಯೇಟರ್ ನಲ್ಲಿ ನರ್ಸ್ ಜೊತೆ ಇಂತಹ ನೀಚ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಈ ಘಟನೆಗೆ ಸಂಬಂಧಪಟ್ಟ ವಿಡಿಯೊದ ಪೆನ್ ಡ್ರೈ ಜೊತೆಗೆ ವಿಡಿಯೊದಲ್ಲಿರುವ ವೈದ್ಯರ ಬಗ್ಗೆ ಮಾಹಿತಿ ನೀಡಿದ ಪತ್ರವೊಂದು ಸುದ್ದಿವಾಹಿನಿಯೊಂದಕ್ಕೆ ಬಂದಿದೆ ಎನ್ನಲಾಗಿದೆ. ಈ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳ ಬಳಿ ವಿಚಾರಿಸಿದಾಗ ವೈದ್ಯರ ವಿರುದ್ಧ ಯಾವುದೇ ದೂರು ಬಂದಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಆದರೂ ಸಂಸ್ಥೆಯಿಂದ ತನಿಖೆ ಶುರುವಾಗಿದೆ ಎನ್ನಲಾಗಿದೆ.





PGK

Post a Comment

Previous Post Next Post