( ಪಶ್ಚಿಮಘಟ್ಟ ವಾಯ್ಸ್) NIA ದಾಳಿ- ಶಿರಸಿಯ ಅಬ್ದುಲ್ ಶುಕ್ಕೂರ್ ಮೇಲಿದೆ ಶಿವಮೊಗ್ಗ ಸ್ಫೋಟದ ಸಂಚಿನ ಆರೋಪ.


 ಕಾರವಾರ: ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ NIA ತಂಡದಿಂದ ದಾಳಿ ನಡೆದಿದ್ದು, ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಿನ್ನೆಲೆಯಲ್ಲಿ ಬನವಾಸಿಯ ದಾಸನ ಕೊಪ್ಪ ಮೂಲದ ಅಬ್ದುಲ್ ಶುಕ್ಕೂರ್ (32) ನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದೆ.

ಇಂದು ಬೆಳಗ್ಗೆ 5 ಮಂದಿ ಅಧಿಕಾರಿಗಳಿರುವ NIA ತಂಡ ಹಾಗೂ ರಾಜ್ಯದ ಇಂಟೆಲಿಜೆನ್ಸ್ ಅಧಿಕಾರಿಗಳು ದಾಳಿ ನಡೆಸಿದ್ದು, ರಾಮೇಶ್ವರಂ ಕೆಫೆ ಬ್ಲಾಸ್ಟ್, ಕುಕ್ಕರ್ ಬಾಂಬ್ ಬ್ಲಾಸ್ಟ್ ಆರೋಪಿಗಳಿಗೆ ಪ್ರಚೋದನೆ ನೀಡಿದ್ದಾಗಿ ಆರೋಪ ಈತನ ಮೇಲಿದೆ. 

ಇದಲ್ಲದೇ ಶಿವಮೊಗ್ಗದಲ್ಲಿ (Shivamogga) ಮಸೀದಿ ಹಾಗೂ ಇತರ ಪ್ರದೇಶಗಳಲ್ಲಿ ಬಾಂಬ್ ಬ್ಲಾಸ್ಟ್ ಆರೋಪಿಗಳಿಗೆ ಪ್ರಚೋದನೆ ನೀಡಿರುವ ಆರೋಪ‌ ಹೊಂದಿರುವ ಅಬ್ದುಲ್ ಶುಕ್ಕೂರ್ ದುಬೈ ನಲ್ಲಿ ಕೆಲಸ ಮಾಡುತ್ತಿದ್ದಾನೆ. ನಿಷೇಧಿತ ಪಿಎಫ್‌ಐ ಸಂಘಟನೆಯ ಸದಸ್ಯನಾಗಿದ್ದಾನೆ ಎಂಬ ಆರೋಪ ಈತನ ಮೇಲಿದೆ.






PGK

Post a Comment

Previous Post Next Post