PGK NEWS ದಕ್ಷಿಣಕನ್ನಡMangalore: ಮಾದಕ ವಸ್ತು ಸೇವನೆ; ಇಬ್ಬರು ವಶಕ್ಕೆ

 


PGK NEWS ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆಗೆ ಸಂಬಂಧಿಸಿ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಬುಧವಾರ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ

ಅರ್ಕುಳ ಗ್ರಾಮದ ವಳಚ್ಚಿಳ್‌ ವ್ಯೂಪಾಯಿಂಟ್‌ನಲ್ಲಿ ಮಾದಕ ವಸ್ತು ಸೇವಿಸುತ್ತಿದ್ದ ಮೂಲತಃ ಉತ್ತರ ಪ್ರದೇಶ ಅಜಂಗಡ್‌ ಜಲ್ಲೆಯ ಮೊಹಮ್ಮದಪುರ ಗ್ರಾಮದ ನಿವಾಸಿ, ಪ್ರಸ್ತುತ ಬೋಳೂರಿನಲ್ಲಿ ವಾಸವಾಗಿರುವ ಸುಧಾಂಶು ಯಾದವ್‌ (22) ಬಂಧಿತ ಆರೋಪಿ

ಇನ್ನೊಂದು ಪ್ರಕರಣದಲ್ಲಿ ನೀರುಮಾರ್ಗ ಜಂಕ್ಷನ್‌ನಲ್ಲಿ ಮಾದಕ ವಸ್ತು ಸೇವಿಸುತ್ತಿದ್ದ ಬೋಳೂರು ನಿವಾಸಿ ರೋಷನ್‌ ಕಿಣಿ (19) ಎಂಬವನನ್ನು ವಶಕ್ಕೆ ಪಡೆದಿದ್ದಾರೆ.

ಗಾಂಜಾ ಸೇವನೆ; ಯುವಕನ ಬಂಧನ

ಮಂಗಳೂರು: ನಗರದ ಕುಂಟಿಕಾನ ಬಸ್ಸು ತಂಗುದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಯಶ್‌ ಪಿ.ರಾವ್‌ (23) ಎಂಬವನನ್ನು ಕಾವೂರು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರೌಂಡ್ಸ್‌ ಕರ್ತವ್ಯದಲ್ಲಿದ್ದ ಕಾವೂರು ಠಾಣಾ ಪೊಲೀಸರು ಕುಂಟಿಕಾನಕ್ಕೆ ಬಂದಾಗ ಜೀಪ್‌ ಕಂಡು ಓಡಲು ಪ್ರಯತ್ನಿಸಿದ್ದಾನೆ. ಸಿಬಂದಿ ಸಹಾಯದಿಂದ ಆತನನ್ನು ಹಿಡಿದಾಗ ಆತನ ಬಾಯಿಯಿಂದ ಅಮಲು ಪದಾರ್ಥದ ವಾಸನೆ ಬಂದಿದ್ದು, ಮಾತುಗಳು ತೊದಲುತಿತ್ತು. ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ ಸೇವನೆಇಬ್ಬರ ಬಂಧನ:

ಮಂಗಳೂರು: ಕಂಕನಾಡಿ ನಗರ ಠಾಣೆ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕವಸ್ತು ಸೇವನೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಎಕ್ಕೂರು ಮೈದಾನದ ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಸೇವನೆ ಮಾಡುತ್ತಿದ್ದ ಸುಹೈಲ್‌ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.

ಅಳಪೆ ಗ್ರಾಮದ ಪಡೀಲ್‌ ರೈಲ್ವೇ ಸೇತುವೆಯಿಂದ ಪೆರ್ಲ ರಸ್ತೆಗೆ ಹೋಗುವ ಪುವೋಡಿ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಬಿಬಿನ್‌ ದೇವ್‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದೆ.



PGK

Post a Comment

Previous Post Next Post