PGK NEWS ಶಿವಮೊಗ್ಗ ಖಾಸಗಿ ಬಸ್‌ ನಿಲ್ದಾಣದ ಮುಂದೆ ‘ಮಿನಿ ಕೆರೆ’, ಚಾಲಕರು, ಜನರು, ಟ್ರಾಫಿಕ್‌ ಪೊಲೀಸರಿಗೆ ಸಂಕಷ್ಟ

 


PGK NEWS SHIMOGA : ಚರಂಡಿಗೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದಿರುವುದು ಮತ್ತು ಗುಂಡಿಗಳನ್ನು  (Pot Hole) ಮುಚ್ಚಲು ಅಧಿಕಾರಿಗಳು ಆಸಕ್ತಿ ತೋರದ  ಹಿನ್ನೆಲೆ, ಖಾಸಗಿ Bus ನಿಲ್ದಾಣದ ಪ್ರವೇಶ ದ್ವಾರದಲ್ಲಿ ಕೆರೆಯಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ವಾಹನ ಸಂಚಾರ ಮತ್ತು ಪ್ರಯಾಣಿಕರ ಓಡಾಟಕ್ಕೆ ಸಮಸ್ಯೆ ಉಂಟಾಗಿದೆ.

ಖಾಸಗಿ ಬಸ್‌ ನಿಲ್ದಾಣದ ಪ್ರವೇಶ ದ್ವಾರದಲ್ಲಿ ದೊಡ್ಡ ಗುಂಡಿಗಳಾಗಿವೆ. ತಿಂಗಳುಗಳೆ ಕಳೆದರೂ ಈ ಗುಂಡಿಗಳನ್ನು ಮುಚ್ಚುವ ಪ್ರಯತ್ನವಾಗಿಲ್ಲ. ನಗರದಲ್ಲಿ ಮಳೆ ಆಗುತ್ತಿರುವುದರಿಂದ ಈ ಗುಂಡಿಗಳಲ್ಲಿ ನೀರು ನಿಂತು ಸಣ್ಣ ಕೆರೆಯಂತಾಗಿದೆ.


ಗುಂಡಿಗಳು ಇರುವುದರಿಂದ ಬಸ್ಸುಗಳು ನಿಧಾನವಾಗಿ ಚಲಿಸುತ್ತವೆ. ಅಶೋಕ ಸರ್ಕಲ್‌ನಲ್ಲಿ ವಾಹನ ದಟ್ಟಣೆ ಹೆಚ್ಚಿರುವುದರಿಂದ ದಿಢೀರ್‌ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ಇನ್ನು, ಪ್ರಯಾಣಿಕರು ಮಳೆ ನೀರು ನಿಂತ ಗುಂಡಿ ದಾಟಿ ಬಸ್‌ ನಿಲ್ದಾಣದೊಳಗೆ ಹೋಗಲು ಕಷ್ಟಪಡಬೇಕಾಗಿದೆ

ಗುಂಡಿಗಳಿಂದ ಆಗುತ್ತಿರುವ ಸಮಸ್ಯೆ ಕುರಿತು ಖಾಸಗಿ ಬಸ್‌ಗಳ ಸಿಬ್ಬಂದಿ ಮತ್ತು ಸಂಚಾರ ಪೊಲೀಸರು ಮಹಾನಗರ ಪಾಲಿಕೆಗೆ ಮಾಹಿತಿ ನೀಡಿದ್ದರು. ಆದರೆ ಈ ತನಕ ಪರಿಹಾರ ಕಂಡಿಲ್ಲ. ಇತ್ತ ಸಂಚಾರ ಪೊಲೀಸರೆ ಮಣ್ಣು, ಕಲ್ಲು ತರಿಸಿ ಗುಂಡಿ ಮಚ್ಚಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.

ಬಸ್ಸುಗಳು ನಿರಂತರವಾಗಿ ಓಡಾಡುವುದರಿಂದ ಮಣ್ಣು, ಕಲ್ಲು ಇಲ್ಲಿ ನಿಲ್ಲುವುದಿಲ್ಲ ಅನ್ನುತ್ತಾರೆ ಬಸ್ ಚಾಲಕರು. ಹಾಗಾಗಿ ನಿಲ್ದಾಣದ ಮುಂದಿನ ಗುಂಡಿಗಳನ್ನು ಶಾಶ್ವತವಾಗಿ ಮುಚ್ಚಬೇಕಿದೆ. ಇಲ್ಲವಾದಲ್ಲಿ ಮಳೆ ಹೆಚ್ಚಿದಂತೆ ಸಮಸ್ಯೆ ಹೆಚ್ಚಾಗಲಿದೆ.


PGK

Post a Comment

Previous Post Next Post