PGK NEWS ಪಶ್ಚಿಮಘಟ್ಟ ವಾಯ್ಸ್ ಕಾರವಾರ: ಉತ್ತರ ಕನ್ನಡ (Utttara Kannada) ಜಿಲ್ಲೆಯಾದ್ಯಂತ ಭಾರೀ ಮಳೆ (Rain) ಸುರಿಯುತ್ತಿದ್ದು ಹೊನ್ನಾವರದ (Honnavara) ಭಾಸ್ಕೇರಿ ಬಳಿ ಗುಡ್ಡ ಕುಸಿದಿದೆ. ದೊಡ್ಡ ಕಲ್ಲುಬಂಡೆ ಹೆದ್ದಾರಿಗೆ ಉರುಳಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 206 (National Highway 206) ಸಂಚಾರ ಬಂದ್ ಆಗಿದೆ.
ಹೊನ್ನಾವರ -ಸಾಗರ-ಬೆಂಗಳೂರು ಮಾರ್ಗ ಬಂದ್ ಆಗಿದ್ದು ಬಸ್ ಹಾಗೂ ಭಾರೀ ಗಾತ್ರದ ವಾಹನ ಸಂಚಾರಕ್ಕೆ ತಡೆಯುಂಟಾಗಿದೆ. ರಸ್ತೆಯ ಒಂದು ಭಾಗದಲ್ಲಿ ದ್ವಿಚಕ್ರ ವಾಹನ ತೆರಳಲು ಮಾತ್ರ ಅವಕಾಶವಿದ್ದು ಈಗ ಬೆಂಗಳೂರು (Bengaluru) ಕಡೆ ತೆರಳುವ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ.
ಸದ್ಯ ಹೆದ್ದಾರಿಗೆ ಬಿದ್ದ ಕಲ್ಲುಬಂಡೆಯನ್ನು ತೆರವುಗೊಳಿಸಲು ತಡವಾಗುತ್ತಿದ್ದು ಕಾರ್ಯಾಚರಣೆ ಇನ್ನೂ ಪ್ರಾರಂಭವಾಗಬೇಕಿದೆ. ಮತ್ತಷ್ಟು ಗುಡ್ಡ ಕುಸಿಯುವ ಸಾಧ್ಯತೆ ಇದ್ದು ಕಾರ್ಯಾಚರಣೆ ಅಡ್ಡಿಯಾಗುವ ಸಾಧ್ಯತೆಯಿದೆ.