PGK NEWS ಪಶ್ಚಿಮಘಟ್ಟ ವಾಯ್ಸ್ ಉತ್ತರ ಕನ್ನಡ:-ಕಳೆದ 4 ವರ್ಷಗಳ ಹಿಂದೆಯೇ ಕೈಗೊಂಡ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಇನ್ನೂ ಸಹ ಪೂರ್ಣಗೊಂಡಿಲ್ಲವಾಗಿದ್ದು, ಕಾಮಗಾರಿ ವಿಳಂಬವಾಗುತ್ತಿರುವ ಕಾರಣ ಇದೀಗ ಬರುವ ಅಕ್ಟೋಬರ್ 15 ರಿಂದ ಫೆಬ್ರವರಿ 25 ರ ತನಕ ಈ ಭಾಗದಲ್ಲಿ ಭಾರೀ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಹೌದು, ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆಯ ಭಾಗವಾಗಿ ವಾಹನ ಸಂಚಾರವನ್ನು ನಿಷೇಧಿಸಲಾಗುತ್ತಿದೆ. ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬoಧಿಸಿದoತೆ ಅಕ್ಟೋಬರ್ 15 ರಿಂದ ಫೆಬ್ರವರಿ 25 ರ ತನಕ ಒಟ್ಟೂ 4 ತಿಂಗಳುಗಳ ಕಾಲ ಈ ಒಂದು ರಸ್ತೆಯಲ್ಲಿ ಸಂಚಾರ ನಿಷೇಧಿಸಲು ಜಿಲ್ಲಾಡಳಿತ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಈ ಕುರಿತು ಉತ್ತರ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಭಾರತ್ ಮಾಲಾ ಯೋಜನೆಯಡಿ ಶಿರಸಿ-ಕುಮಟಾ-ಬೆಲೆಕೇರಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾರ್ಯವನ್ನು ಕಳೆದ 4 ವರ್ಷಗಳಿಂದ ಕೈಗೊಂಡಿದೆ. ಸಿಮೆಂಟ್ ರಸ್ತೆ ವಿಸ್ತರಣೆ ಭಾಗಶಃ ಮುಕ್ತಾಯವಾಗಿದ್ದು, ಪ್ರಮುಖ ಸೇತುವೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಲು ಇದೀಗ ಅಕ್ಟೋಬರ್ 15 ರಿಂದ ಭಾರೀ ವಾಹನ ಸಂಚಾರವನ್ನು ನಿರ್ಬಂಧಿಸಲು ಆದೇಶ ಹೊರಡಿಸಲಾಗಿದೆ.
ರಸ್ತೆ ಮಾರ್ಗವನ್ನು ಬಂದ್ ಮಾಡಿದ್ದಲ್ಲಿ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ. Kumta Sirsi ಮೂಲಕ ಸಿದ್ದಾಪುರ ತೆರಳುವ ಮಾರ್ಗದಲ್ಲಿ ಲಘು ವಾಹನಗಳು ಸಂಚರಿಸಬಹುದಾಗಿದೆ. ಅಲ್ಲದೆ, ಅಂಕೋಲಾ ಶಿರಸಿ ಮೂಲಕ ಯಲ್ಲಾಪುರ ಮಾರ್ಗದಲ್ಲಿ ಎಲ್ಲಾ ವಿವಿಧ ವಾಹನಗಳು ಸಂಚರಿಸಬಹುದಾಗಿದೆ. ಅಲ್ಲದೆ, ಮಾವಿನಗುಂಡಿ ಮಾರ್ಗವಾಗಿ ಕೂಡಾ ಎಲ್ಲಾ ವಾಹನಗಳ ಸಂಚಾರಕ್ಕೆ ಅವಕಾಶವಿರಲಿದೆ.