ಹಾವೇರಿ:- . PGK NEWS :-ಶಿಗ್ಗಾಂವಿಯ ಬಂಕಾಪುರದಲ್ಲಿ ಬಡವರಿಗಾಗಿ ನಿರ್ಮಿಸಲಾಗಿದ್ದ 300 ಜಿ ಪ್ಲಸ್ ಆಶ್ರಯ ಮನೆಗಳನ್ನು ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಉದ್ಘಾಟಿಸಿದ್ದರು. ಉದ್ಘಾಟನಾ ಸಮಾರಂಭ ತರಾತುರಿಯಲ್ಲಿ ನಡೆದಿದ್ದರಿಂದಾಗಿ ಆಶ್ರಯ ಮನೆಗಳಿಗೆ ವಿದ್ಯುತ್, ನೀರು ಅಥವಾ ಮತ್ಯಾವುದೇ ಮೂಲಸೌಕರ್ಯಗಳನ್ನು ಕಲ್ಪಿಸಿಲ್ಲ. ಹಾಗಾಗಿ, ಬಡವರಿಗೆ ಅವುಗಳನ್ನು ಪೂರ್ತಿಯಾಗಿ ಹಸ್ತಾಂತರ ಮಾಡಲಾಗಿಲ್ಲ. ಉದ್ಘಾಟನೆಯಾಗಿ ವರ್ಷದ ಮೇಲಾದರೂ ಅಲ್ಲಿ ಮೂಲಸೌಕರ್ಯಗಳಿದೇ ಹಾಗೇ ಉಳಿದಿವೆ. ಹೀಗೆಯೇ ಮುಂದುವರಿದರೆ ಮುಂದೆ ಬಡವರಿಗಾಗಿ ಕಟ್ಟಿದ ಮನೆಗಳು ಹಾಳಾಗುವ ಸಾಧ್ಯತೆಯಿದೆ.
: ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕು ಬಂಕಾಪುರದಲ್ಲಿ ಪಟ್ಟಣದಲ್ಲಿ ನೂರಾರು ಬಡವರು ಸೂರಿಲ್ಲದ ನಿರಾಶ್ರಿತರಾಗಿದ್ದರು. ಚಳಿಮಳೆಗಾಲ ಬಿಸಿಲು ಎನ್ನದೆ ಗುಡಿಸಲು ಜೋಪಡಿಗಳಲ್ಲಿ ವಾಸವಾಗಿದ್ದರು. ಬಡವರ ಈ ಸ್ಥಿತಿ ನೋಡಿ ಸರ್ಕಾರ ಸ್ವಂತ ಮನೆ ಮಾಡಿಸುವ ಯೋಜನೆಗೆ ಮುಂದಾಗಿತ್ತು.
ಪುರಸಭೆಯ ಆಶ್ರಯ ಯೋಜನೆಯಲ್ಲಿ ಜಿ ಪ್ಲಸ್ ವನ್ ಯೋಜನೆಯಲ್ಲಿ ನಿರಾಶ್ರೀತರಿಗೆ ಮನೆ ನಿರ್ಮಿಸಲು ಕೂಡಲು ಪುರಸಭೆ ಮುಂದಾಗಿತ್ತು. ನಿರಾಶ್ರೀತರಿಂದ ಪುರಸಭೆ ನಲವತ್ತು ಸಾವಿರ ರೂಪಾಯಿ ವಂತಿಗೆ ಪಡೆದು ಪಡೆದು ಜಿ.ಪ್ಲಸ್ ಮನೆಗಳ ನಿರ್ಮಾಣ ಮಾಡಿತ್ತು. ಆದರೆ, ಅವುಗಳಿಗೆ ವಿದ್ಯುತ್, ನೀರು, ಶೌಚಾಲಯ ಸಂಪರ್ಕ ಮುಂತಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಅದರಿಂದಾಗಿ, ಬಡವರಿಗೆ ಕಟ್ಟಲಾಗಿರುವ ಈ 300 ಮನೆಗಳೀಗ ವ್ಯರ್ಥವಾಗುವ ಅಪಾಯದಲ್ಲಿವೆ.
ಈ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ಸಿಕ್ಕ ಕೂಡಲೇ, ನಗರದ ಹೊರವಲಯದ ಶಾಲೆಯ ಹತ್ತೀರ ಸುಮಾರು ಮೂನ್ನೂರು ಮನೆಗಳ ನಿರ್ಮಾಣ ಕಾಮಗಾರಿ ನಡೆದಿತ್ತು. ಅಧಿಕಾರಿಗಳ ಜನಪ್ರತಿನಿಧಿಗಳ ಮುತುವರ್ಜಿಯಿಂದ ಮನೆಗಳು ಸಹ ನಿರ್ಮಾಣಗೊಂಡಿವೆ. ಆದರೆ ತರಾತುರಿಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಮೂನ್ನೂರು ಮನೆಗಳ ಸಂಕೀರ್ಣಗಳನ್ನ ಉದ್ಘಾಟನೆ ಮಾಡಿದರು. ಆದರೆ ತರಾತುರಿಯಲ್ಲಿ ಉದ್ಘಾಟನೆ ನಡೆದ ಕಾರಣ ಮನೆಗಳಿಗೆ ವಿದ್ಯುತ್,ನೀರು ಮತ್ತು ಶೌಚಾಲಯ ಸಂಪರ್ಕಗಳು ಪೂರ್ಣಗೊಂಡಿಲ್ಲ. ಇದರಿಂದ ಫಲಾನುಭಇನ್ನು ಕೆಲವು ಬಡವರು ಬಾಡಿಗೆ ಮನೆಯಲ್ಲಿ ಬಾಡಿಗೆ ಹಣ ಕಟ್ಟದೆ ಜಿ.ಪ್ಲಸ್ ಮನೆಗಳಲ್ಲಿ ವಾಸಿಸಲಾರಂಭಿಸಿದ್ದಾರೆ. ಆದರೆ ಈ ಮನೆಗಳಿಗೆ ವಿದ್ಯುತ್,ನೀರು ಮತ್ತು ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ ಈ ಕುಟುಂಬಗಳು ಪರದಾಡುತ್ತಿವೆ. ಬಂಕಾಪುರ ಪಟ್ಟಣದಿಂದ ತಮ್ಮ ಮನೆಗಳಿಗೆ ನೀರು ತಂದು ಈ ಕುಟುಂಬಗಳು ಜೀವನ ಸಾಗಿಸುತ್ತಿವೆ. ಇನ್ನು ಬೀದಿಗಳಲ್ಲಿರುವ ಬೀದಿದೀಪದ ಬೆಳಕಿನಲ್ಲಿ ಇವರ ರಾತ್ರಿಗಳು ಕಳೆಯುತ್ತಿವೆ.ವಿಗಳಿಗೆ ಹಸ್ತಾಂತರ ಮಾಡಿಲ್ಲ.
ಇತ್ತ ಶೌಚಾಲಯವಿಲ್ಲದೆ ಇಲ್ಲಿಯ ಕುಟುಂಬಗಳು ದಿನನಿತ್ಯ ಬಯಲಿನಲ್ಲೇ ಬಹಿರ್ದೆಸೆಗೆ ಹೋಗುವದು ಅನಿವಾರ್ಯವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಈ ಮನೆಗಳಲ್ಲಿನ ನಿವಾಸಿಯೊಬ್ಬರು, “ಬಳಕೆಗೆ ಕುಡಿಯಲು ನೀರು ದೂರದಿಂದ ತಂದು ಜೀವನ ನಡೆಸುತ್ತಿದ್ದೇವೆ. ವಿದ್ಯುತ್ ಇಲ್ಲದೆ ಬದುಕು ಸಾಗಿಸವದು ಕಷ್ಟವಾಗಿದೆ’’ ಎಂದಿದ್ದಾರೆ. “ಮೊಬೈಲ್ ಚಾರ್ಜಿಂಗ್ ಸೇರಿದಂತೆ ಹಲವು ಅವಶ್ಯಕ ಬಳಕೆಗೆ ಪಟ್ಟಣದಲ್ಲಿರುವ ಮನೆಗಳ ಸಹಾಯ ಪಡೆದು ಚಾರ್ಜಿಂಗ್ ಮಾಡಿಸುತ್ತಿದ್ದೇವೆ’’ ಎಂದು ಅವರು ಹೇಳಿದ್ದಾರೆ.ಬಹಿರ್ದೆಸೆ ಸಮಸ್ಯೆಯಂತೂ ಹೇಳತೀರದಾಗಿದೆ. ಅಕ್ಕಪಕ್ಕ ಜಮೀನುಗಳಿಗೆ ಹೋದರೆ ಬೈಯ್ಯುತ್ತಿದ್ದಾರೆ. ಪುರಸಭೆಗೆ ನಲವತ್ತು ಸಾವಿರ ಕೊಟ್ಟು ಹಲವು ವರ್ಷಗಳ ನಂತರ ಮನೆಗಳು ನಿರ್ಮಾಣವಾಗಿವೆ. ಮನೆಗಳು ಇನ್ನೇನು ನಮಗೆ ಹಸ್ತಾಂತರವಾಗುತ್ತವೆ ಎಂದು ನಿರೀಕ್ಷೆಯಲ್ಲಿದ್ದವು. ಇಷ್ಟು ವರ್ಷಗಳಾದರೂ ಮನೆಗಳು ನಮಗೆ ಹಸ್ತಾಂತರವಾಗಿಲ್ಲ. ಅಲ್ಲದೆ ಬಾಡಿಗೆ ಮನೆಯಲ್ಲಿದ್ದು ಬಾಡಿಗೆ ಕಟ್ಟಲಾಗುತ್ತಿಲ್ಲ. ಬಾಡಿಗೆ ಕಟ್ಟಲಾಗದೆ ಹಸ್ತಾಂತರವಾಗದ ಮನೆಗಳಲ್ಲಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡು ವಾಸಿಸುತ್ತಿದ್ದೇವೆ. ಆದರೆ, ಇಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.