ಪಶ್ಚಿಮಘಟ್ಟ ವಾಯ್ಸ್:ಡೈಲಿ ನ್ಯೂಸ್:- ವಾಲ್ಮೀಕಿ ನಿಗಮದಿಂದ ದೋಚಿದ್ದ ಹಣದಿಂದಲೇ ಬೆಂಜ್‌, ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದ ಆರೋಪಿ



ಪಶ್ಚಿಮಘಟ್ಟ ವಾಯ್ಸ್:ಡೈಲಿ ನ್ಯೂಸ್:-ಬೆಂಗಳೂರು(ಜು.12): ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ದೋಚಿದ್ದ ಹಣದಲ್ಲಿ ಆರೋಪಿ ಎರಡು ಐಷಾರಾಮಿ ಕಾರು ಖರೀದಿಸಿರುವುದನ್ನು ಎಸ್​ಐಟಿ ಪತ್ತೆ ಮಾಡಿದೆ. ಹೈದರಾಬಾದ್​ ಮೂಲದ ಸತ್ಯನಾರಾಯಣ ಎನ್ನುವಾತ ಈ ಹಗರಣದ ಆರೋಪಿಯಾಗಿದ್ದು, ನಿಗಮದಲ್ಲಿ ದೋಚಿದ್ದ ಹಣದಲ್ಲೇ ಸೆಕೆಂಡ್​ ಹ್ಯಾಂಡ್​ನಲ್ಲಿ ಕೋಟಿ ಕೋಟಿ ರೂ. ಬೆಲೆ ಬಾಳುವ ಲ್ಯಾಂಬೋರ್ಗಿನಿ ಮತ್ತು ಬೆಂಜ್ ಕಾರು ಖರೀಸಿರುವುದನ್ನು ಎಸ್​​ಐಟಿ ಅಧಿಕಾರಿಗಳು ಪತ್ತೆಹಚ್ಚಿದ್ದು, ಇದೀಗ ಆ ಕಾರುಗಳನ್ನುಮೂಲ ಮಾಲೀಕರಿಗೆ ಹಿಂದಿರುಗಿಸಿ ಕೋಟ್ಯಾಂತರ ರೂಪಾಯಿ ಹಣವನ್ನು ವಶಕ್ಕೆ ಪಡೆದುಕೊಂಡಿದೆ.

ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ ಹಗರಣ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೀಗ ಈ ಪ್ರಕರಣದಲ್ಲಿ ಇಡಿ ಮಧ್ಯ ಪ್ರವೇಶಿಸಿ ನಿಗಮದ ಅಧ್ಯಕ್ಷ ಹಾಗೂ ಇಲಾಖೆಯ ಸಚಿವರ ಮನೆಗಳ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀನಲೆ ನಡೆಸಿದೆ. ಇನ್ನು ಇದರಲ್ಲಿ ಹಲವರ ಕೈವಾಡವಿರುವುದು ಕಂಡುಬಂದಿದೆ. ಇನ್ನು ಈ ಪ್ರಕರಣದ ಆರೋಪಿಯೋರ್ವ ನಿಗಮದಲ್ಲಿ ದೋಚಿದ್ದ ಹಣದಿಂದಲೇ ಕೋಟಿ ಕೋಟಿ ರೂ. ಬೆಲೆ ಬಾಳುವ ಎರಡು ಐಷಾರಾಮಿ ಕಾರುಗಳನ್ನು ಖರೀದಿಸಿರುವುದು ಬೆಳಕಿಗೆ ಬಂದಿದೆ.

ಇಷ್ಟೆ ಅಲ್ಲದೇ ಈ ಹಿಂದೆಯೂ ಆರೋಪಿ ಸತ್ಯನಾರಾಯಣ ವರ್ಮಾ ಬಳಿ ಸೆಕೆಂಡ್​ ಹ್ಯಾಂಡ್​ 3.32 ಕೋಟಿ ರು. ಮೌಲ್ಯದ ಲ್ಯಾಂಬೋರ್ಗಿನಿ ಪತ್ತೆಯಾಗಿತ್ತು. ನಿಗಮದಿಂದ ದೋಚಿದ್ದ ಹಣದಲ್ಲಿ ವರ್ಮಾ ಹೈದರಾಬಾದ್ ನಗರದ ಸೆಕೆಂಡ್ ಹ್ಯಾಂಡ್ ಕಾರು ಶೋರೂಂನಲ್ಲಿ ಆ ಕಾರನ್ನು ಖರೀದಿಸಿದ್ದ. ಬಳಿಕ ಎಸ್‌ಐಟಿ ಅಧಿಕಾರಿಗಳು ಆ ಶೋರೂಮ್ ಮಾಲೀಕರನ್ನು ಸಂಪರ್ಕಿಸಿ ಕಾರಿನ ಹಣದ ಕುರಿತು ವಿಚಾರಿಸಿದ್ದರು. ಆಗ ಆ ಮಾಲೀಕರು ತಮಗೆ ಕಾರು ಮರಳಿಸಿದರೆ ಹಣ ಹಿಂತಿರುಗಿಸುವುದಾಗಿ ಹೇಳಿದ್ದರು. ಅದರಂತೆ ಶೋರೂಮ್ ಮಾಲೀಕನಿಗೆ ಕಾರು ವಾಪಸ್ ಕೊಟ್ಟು ವರ್ಮಾ ಪಾವತಿಸಿದ್ದ 3.32 ಕೋಟಿ ಹಣವನ್ನು ಎಸ್‌ಐಟಿ ಅಧಿಕಾರಿಗಳಿಗೆ ವಶಕ್ಕೆ ಪಡೆದಿದ್ದರು.




PGK

Post a Comment

Previous Post Next Post