ಪಶ್ಚಿಮಘಟ್ಟ ವಾಯ್ಸ್: ಡೈಲಿ ನ್ಯೂಸ್ : ಜಿಂಕೆ ಬೇಟೆಯಾಡಿ ಮನೆಯಲ್ಲಿ ಮಾಂಸ ಸಂಗ್ರಹಿಸಿ ಇಟ್ಟವರ ಬಂಧನ ಮೂವರನ್ನು ಬಂಧಿಸಿ ಜಿಂಕೆ ಮಾಂಸ ವಶಕ್ಕೆ ಪಡೆದಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿ ದೇವಿಕೊಪ್ಪದಲ್ಲಿ ನಡೆದಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಜಿಂಕೆ ಬೇಟೆಯಾಡಿ ಮನೆಯಲ್ಲಿ ಮಾಂಸ ಸಂಗ್ರಹಿಸಿಟ್ಟಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ತಾಲ್ಲೂಕು ವಲಯ ಅರಣ್ಯಧಿಕಾರಿ ಅರುಣಕುಮಾರ್ ಅಷ್ಟಗಿ ನೇತೃತ್ವದ ತಂಡ ಗ್ರಾಮದ ಅಪ್ಪಾರಾವ ಸಾತಪ್ಪ ಪಾಗೋಜಿ, ಚನ್ನಪ್ಪ ಪಾಗೋಜಿ, ಮಹದೇವ ನೇಮಣ್ಣ ಪಾಗೋಜಿ ಬಂಧಿಸಿದ್ದಾರೆ.
ಬಂಧಿತರಿಂದ ಕತ್ತರಿಸಿದ ಜಿಂಕೆಯ ಎರಡು ಕಾಲು, ಚರ್ಮ, ಒಂದು ಕತ್ತಿ ಮತ್ತಿತರ ವಸ್ತು ವಶಕ್ಕೆ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯಡಿ ಪ್ರಕರಣ ದಾಖಲು ಬಂಧಿತರು ನ್ಯಾಯಾಂಗ ವಶಕ್ಕೆ ಕೊಡಲಾಗಿದೆ.