PGK NEWS ಪಶ್ಚಿಮಘಟ್ಟ ವಾಯ್ಸ್ :-ಕಲ್ಯಾಣ ಕರ್ನಾಟಕಕ್ಕೆ ಮಲೆನಾಡು ಮಳೆಯೇ ದಿಕ್ಕು, ತುಂಗಭದ್ರಾ ಜಲಾಶಯ ತುಂಬಿದರಷ್ಟೇ ಕೃಷಿ!

 


PGK NEWS ಪಶ್ಚಿಮಘಟ್ಟ ವಾಯ್ಸ್ -ವಿಜಯನಗರ (ಹೊಸಪೇಟೆ): ಮಲೆನಾಡು ಪ್ರದೇಶದಲ್ಲಿ ಉತ್ತಮ ಮಳೆಯಾದರೆ ತುಂಗಭದ್ರಾ ಜಲಾಶಯ ಭರ್ತಿಯಾಗಿ, ಅಚ್ಚುಕಟ್ಟು ಪ್ರದೇಶದ ರೈತರ ಬದುಕು ಹಸನಾಗುತ್ತದೆ. 

ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ವಿಜಯನಗರ ಸೇರಿ ನೆರೆಯ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಲಕ್ಷಾಂತರ ರೈತರ ಪಾಲಿಗೆ ಅನ್ನದ ಬಟ್ಟಲಾಗಿರುವ ತುಂಗಭದ್ರಾ ಜಲಾಶಯ ತುಂಬಲು ತುಂಗಭದ್ರಾ ಜಲಾನಯನ, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಉತ್ತಮ ಮಳೆಯಾದರೆ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತದೆ. ಮಲೆನಾಡ ಮಳೆಯೇ ದಿಕ್ಕಾಗಿರುವ ಈ ಭಾಗದಲ್ಲಿ ಜಲಾಶಯಕ್ಕೆ ನೀರು ಬಂದ ಬಳಿಕವೇ ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ.

ಕೃಷಿ ಚಟುವಟಿಕೆ

ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯವನ್ನು ಅವಲಂಬಿಸಿರುವ ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ರೈತರು ಈ ಬಾರಿ ಬೇಗನೆ ನೀರು ಸಿಗುವ ಜತೆಗೆ 2ನೇ ಬೆಳೆಗೆ ನೀರು ಲಭ್ಯವಾಗುವ ನಿರೀಕ್ಷೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ತುಂಗಭದ್ರೆ ಜಲಾಶಯದ ಒಡಲಿಗೆ ಜಲರಾಶಿ : 50 ಸಾವಿರ ಕ್ಯುಸೆಕ್‌ ದಾಟಿದ ಒಳಹರಿವು
ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳ; ಡ್ಯಾಂನಲ್ಲಿ ನೀರು ಎಷ್ಟು ಸಂಗ್ರಹವಾಗಿದೆ?
ಹಾರಂಗಿ ಜಲಾಶಯ ಬಹುತೇಕ ಭರ್ತಿ: ಪ್ರವಾಹ ಭೀತಿ, ನೀರು
ಕಳೆದ ವರ್ಷ ಮಳೆ ಕೊರತೆಯಿಂದ ಜಲಾಶಯ ಭರ್ತಿಯಾಗಿರಲಿಲ್ಲ.

ಬಯಲುಸೀಮೆ ಪ್ರದೇಶವಾಗಿರುವ ಈ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆ ಸುರಿಯುವುದಿಲ್ಲ. ಮಳೆಯಾಶ್ರಿತ ಕೃಷಿ ಭೂಮಿಯೇ ಹೆಚ್ಚಾಗಿರುವ ಈ ಭಾಗದಲ್ಲಿ ಜಲಾಶಯದಿಂದ ಕೆರೆಗಳನ್ನು ತುಂಬಿಸಬೇಕೆಂಬ ಒತ್ತಾಯ ಈ ಹಿಂದಿನಿಂದಲೂ ಕೇಳಿ ಬರುತ್ತಲೇ ಇದೆ. ಆದರೆ, ಇದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಕಾಡುತ್ತಿದ್ದು, ಪ್ರತಿ ವರ್ಷ ಡ್ಯಾಂ ತುಂಬಿದಾಗ ಯಥೇಚ್ಛವಾಗಿ ನದಿಗೆ ಹರಿದು ಸಮುದ್ರದ ಪಾಲಾಗುತ್ತಿದೆ. ಈ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಜನಪ್ರತಿನಿಧಿಗಳು ಮನಸ್ಸು ಮಾಡಬೇಕಿದೆ.

ಕಾಲು ಭಾಗ ತುಂಬಿದ ಡ್ಯಾಂ

105.88 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ ಸದ್ಯ 25.17 ಟಿಎಂಸಿ ನೀರು ಸಂಗ್ರಹವಾಗಿದ್ದು, 27,544 ಕ್ಯಸೆಕ್‌ ಒಳಹರಿವು, 199 ಕ್ಯುಸೆಕ್‌ ಒಳಹರಿವು ದಾಖಲಾಗಿದೆ. 1602.67 ಅಡಿ ಜಲಾಶಯ ಮಟ್ಟವಿದೆ. ಈ ವರ್ಷ ಡ್ಯಾಂಗೆ ಒಳಹರಿವು ಆರಂಭವಾಗಿ ಆ ಬಳಿಕ ಸ್ಥಗಿತಗೊಂಡಿತ್ತು. ಜುಲೈ ಆರಂಭದಿಂದ ಮತ್ತೆ ಆರಂಭವಾಗಿರುವ ಒಳಹರಿವು ಏರಿಳಿತ ಕಾಣುತ್ತಿದೆ.
10 ಬಾರಿ ತುಂಬಿಲ್ಲ ಜಲಾಶಯ
ತುಂಗಭದ್ರಾ ಜಲಾಶಯ ನಿರ್ಮಾಣವಾದ ಬಳಿಕ ಈವರೆಗೆ 10 ಬಾರಿ ಭರ್ತಿಯಾಗಿಲ್ಲ. 1953ರಲ್ಲಿ ಜಲಾಶಯ ನಿರ್ಮಾಣಗೊಂಡ ಬಳಿಕ 1976-77, 1987-88, 1995-96, 2001-02, 20


02-03, 2003-04, 2015-16, 2016-17, 2017-18ನೇ ಸಾಲಿನ ಬಳಿಕ ಸತತವಾಗಿ ಭರ್ತಿಯಾಗಿದ್ದ ಡ್ಯಾಂ 2023-24ರಲ್ಲಿ ಭರ್ತಿಯಾಗದೇ ಎರಡನೇ ಬೆಳೆಗೆ ಸಮಸ್ಯೆಯಾಗಿತ್ತು.

ತುಂಗಭದ್ರಾ ಜಲಾಶಯದಲ್ಲಿ ಈ ಭಾರಿ ಉತ್ತಮ ಮಟ್ಟದಲ್ಲಿ ನೀರು ಸಂಗ್ರಹವಾಗುವ ನಿರೀಕ್ಷೆ ಇದೆ. ಮಲೆನಾಡು ಹಾಗೂ ಪಶ್ಚಿಮ ಘಟ್ಟದಲ್ಲಿ ಮಳೆಯಾದರೆ ಕಲ್ಯಾಣ ಕರ್ನಾಟಕದ ಜನರ ಬದುಕು ಹಸನಾಗಲಿದೆ. ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆಯ ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ. ಕಳೆದ ಬಾರಿ ತುಂಗಭದ್ರಾ ಜಲಾಶಯ ಭರ್ತಿಯಾಗಿರಲಿಲ್ಲ. ಈ ಬಾರಿ ಕಾಲು ಭಾಗ ತುಂಬಿದೆ. ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರು ಕೇಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಕಳೆದ ವರ್ಷ ಜಲಾಶಯ ಭರ್ತಿಯಾಗದೇ ಎರಡನೇ ಬೆಳೆಗೆ ನೀರು ಸಿಕ್ಕಿರಲಿಲ್ಲ. ಈ ಬಾರಿ ಮಲೆನಾಡಿನಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ಕಳೆದ ವಾರದಿಂದ ಉತ್ತಮವಾಗಿ ಒಳಹರಿವು ಬರುತ್ತಿದೆ. ಡ್ಯಾಂ ತುಂಬಿದ ಬಳಿಕ ಜಿಲ್ಲೆಯಲ್ಲಿನ ಕೆರೆಗಳನ್ನು ತುಂಬಿಸಲು ಆದ್ಯತೆ ನೀಡಬೇಕು ಎಂದು ವಿಜಯನಗರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಜಿಲ್ಲಾಧ್ಯಕ್ಷ, ಸಿ.ಎ.ಗಾಳೆಪ್ಪ ಹೇಳಿದ್ದಾರೆ.


PGK

Post a Comment

Previous Post Next Post