(ಪಶ್ಚಿಮಘಟ್ಟ ವಾಯ್s ಡೈಲಿ ನ್ಯೂಸ್) ವಾಲ್ಮೀಕಿ ನಿಗಮ ಹಗರಣದ ಪ್ರಮುಖ ಆರೋಪಿ ಮನೆಯಲ್ಲಿ 10 ಕೆಜಿ ಚಿನ್ನದ ಬಿಸ್ಕೆತ್ ಪತ್ತೆ..!


  
ಪಶ್ಚಿಮಘಟ್ಟ ವಾಯ್s ಡೈಲಿ ನ್ಯೂಸ್

ವಾಲ್ಮೀಕಿ ನಿಗಮ ಹಗರಣದ ಪ್ರಮುಖ ಆರೋಪಿ ಮನೆಯಲ್ಲಿ 10 ಕೆಜಿ ಚಿನ್ನದ ಬಿಸ್ಕೆತ್ ಪತ್ತೆ..!

  ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಸಿಐಡಿ ಹಾಗೂ ಎಸ್‌‍ಐಟಿ ತನಿಖಾ ತಂಡವು ಪ್ರಮುಖ ಆರೋಪಿ ಸತ್ಯನಾರಾಯಣ ವರ್ಮಾ ಮನೆಯಲ್ಲಿ ಅಡಗಿಸಿಟ್ಟಿದ್ದ ಬರೋಬ್ಬರಿ 10 ಕೆಜಿ ಚಿನ್ನದ ಬಿಸ್ಕೆಟ್‌ಗಳನ್ನು ವಶಕ್ಕೆ ಪಡೆದಿದೆ.

ಅಲ್ಲದೆ ಹೈದ್ರಾಬಾದ್‌ನ ಫ್ಲಾಟ್‌ನಲ್ಲಿ ಅಡಗಿಸಿಟ್ಟಿದ್ದ 8 ಕೋಟಿ ರೂ. ಹಣವನ್ನು ಜಪ್ತಿ ಮಾಡಲಾಗಿದೆ.ಆರೋಪಿ ಸತ್ಯನಾರಾಯಣವರ್ಮಾ ವಾಲೀಕಿ ಹಗರಣದ ಹಣದಲ್ಲೇ ಚಿನ್ನ ಖರೀದಿಸಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ 15 ಕೆಜಿ ಚಿನ್ನದ ಬಿಸ್ಕೆಟ್‌ಗಳ ಬಗ್ಗೆ ಬಾಯ್ಸಿಟ್ಟಿದ್ದು, ಅದರಂತೆ ಹೈದ್ರಾಬಾದ್‌ನ ತ್ನ ಫ್ಲಾಟ್‌ನಲ್ಲಿ 10 ಕೆಜಿ ಚಿನ್ನದ ಗಟ್ಟಿ ಇಟ್ಟಿರುವುದಾಗಿ ಹೇಳಿದ್ದರು.

ಇದೀಗ ಎಸ್‌‍ಐಟಿ ತನಿಖಾ ತಂಡ ಚಿನ್ನದ ಬಿಸ್ಕೆಟ್‌ಗಳನ್ನು ವಶಕ್ಕೆ ಪಡೆದು ಉಳಿದ 5 ಕೆಜಿ ಚಿನ್ನದ ಬಿಸ್ಕೆಟ್‌ಗಾಗಿ ಶೋಧ ನಡೆಸುತ್ತಿದ್ದಾರೆ.
ಒಟ್ಟಾರೆ ವಾಲೀಕಿ ನಿಗಮದ ಹಣದಿಂದ ಸತ್ಯನಾರಾಯಣ ವರ್ಮಾ ಬರೋಬ್ಬರಿ 35 ಕೆಜಿ ಚಿನ್ನದ ಬಿಸ್ಕೆಟ್‌ ಖರೀದಿ ಮಾಡಿರುವ ಮಾಹಿತಿಯನ್ನು ತನಿಖಾ ತಂಡ ಕಲೆ ಹಾಕಿವೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸತ್ಯನಾರಾಯಣ ವರ್ಮಾ ನಾಪತ್ತೆಯಾಗಿದ್ದರು. ಎಸ್‌‍ಐಟಿ ತಂಡ ಸತತ ಒಂದು ವಾರಗಳ ಕಾಲ ಹುಡುಕಾಟ ನಡೆಸಿದ್ದರಾದರೂ ಪತ್ತೆಯಾಗಿರಲಿಲ್ಲ.



PGK

Post a Comment

Previous Post Next Post