ಪಶ್ಚಿಮಘಟ್ಟ ವಾಯ್sಡೈಲಿ ನ್ಯೂಸ್ ಗುಂಡ್ಲುಪೇಟೆ ತಾಲೂಕಿನ ಹಂಗಳಾಪುರ ಗ್ರಾಮ ಕಬ್ಬು ಕಟಾವು ಮಾಡುವ ವೇಳೆ ಎರಡು ಚಿರತೆ ಮರಿಗಳು ಪತ್ತೆಯಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳಾಪುರ ಗ್ರಾಮದಲ್ಲಿ ನಡೆದಿದೆ.
ಹಂಗಳ ಗ್ರಾಮದ ರೈತ ಮಹೇಶ್ ಎಂಬುವರ ಜಮೀನಿನಲ್ಲಿ (Leopard Cubs) ಸಿಕ್ಕಿವೆ. ಮರಿಗಳಲ್ಲಿ ಒಂದು ಹೆಣ್ಣು ಮತ್ತೊಂದು ಗಂಡಾಗಿದೆ. ಕಬ್ಬು ಕಟಾವು ಮಾಡುವ ವೇಳೆ ಚೀರಾಟದ ಶಬ್ದ ಕೇಳಿಸಿದೆ. ಗೂಡಿನಂತೆ ಮಾಡಿಕೊಂಡಿದ್ದ ಪ್ರದೇಶದ ಸುತ್ತಲೂ ಕಬ್ಬು ಕಟಾವು ಮಾಡಿ ಸುರಕ್ಷಿತವಾಗಿ ಮರಿಗಳನ್ನು ಹೊರಕ್ಕೆ ತೆಗೆದುಕೊಂಡ ಕಾರ್ಮಿಕರು ಮರಿಗಳನ್ನು ಸುರಕ್ಷಿತವಾಗಿ ಟೊಮೆಟೋ ಟ್ರೇನಲ್ಲಿ ಇಟ್ಟು ಬಳಿಕ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಚಿರತೆ ಮರಿಗಳಿಗೆ ಎರಡು ತಿಂಗಳಾಗಿರುವ ಅಂದಾಜು ಮಾಡಲಾಗಿದ್ದು ರೈತನ ಜಮೀನಿನಲ್ಲೇ ಚಿರತೆ ಮರಿಗಳನ್ನು ಬೋನಿನಲ್ಲಿಟ್ಟು ತಾಯಿ ಚಿರತೆ ಜೊತೆ ಸೇರಿಸಲು(Forest Department) ಕಾರ್ಯಾಚರಣೆ ನಡೆಸುತ್ತಿದೆ.