( ಪಶ್ಚಿಮಘಟ್ಟ ವಾಯ್s ಡೈಲಿ ನ್ಯೂಸ್) ಇನ್ನುಮುಂದೆ ಅಕ್ರಮವಾಗಿ ಮರ ಕಡಿದು ಮಾರಾಟ ಮಾಡಿದ್ರೆ 50 ಸಾವಿರ ರೂ. ದಂಡ


 


ಅಕ್ರಮವಾಗಿ ಮರ ಕಡಿದು, ಮಾರಾಟ ಮಾಡಿದರೆ 50 ಸಾವಿರ ರೂ. ದಂಡ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಘೋಷಣೆ!

  ಪಶ್ಚಿಮಘಟ್ಟ ವಾಯ್s ಡೈಲಿ ನ್ಯೂಸ್:-ಇನ್ನುಮುಂದೆ ಅಕ್ರಮವಾಗಿ ಮರ ಕಡಿದು, ಮಾರಾಟ ಮಾಡಿದರೆ 50 ಸಾವಿರ ರೂ. ದಂಡ ತೆರಬೇಕಾಗುತ್ತದೆ. ರಾಜ್ಯದಲ್ಲಿ ಸದಾ ಹಸಿರು ನೆಲೆಸಿರುವಂತೆ ಮಾಡಲು ಅಕ್ರಮವಾಗಿ ಮರ ಕಡಿಯುವವರ ವಿರುದ್ಧದ ಕ್ರಮಕ್ಕೆ ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯುವವರಿಗೆ ವಿಧಿಸುವ ದಂಡವನ್ನು 1000 ರೂ.ಗಳಿಂದ 50,000 ರೂ.ಗಳಿಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ಕೃಷಿ ಇಲಾಖೆ ಮಂಡಿಸಿತು.

ಇದನ್ನು ರಾಜ್ಯದಲ್ಲಿ ಜಾರಿಗೆ ತರಲು ಕೃಷಿ ಇಲಾಖೆ ಸರ್ಕಾರದ ನಿರ್ಣಯವನ್ನು ಹೊರಡಿಸುತ್ತದೆ. ಅಸ್ತಿತ್ವದಲ್ಲಿರುವ ಮಹಾರಾಷ್ಟ್ರ ಮರ ಕಡಿಯುವ ಕಾಯಿದೆ 1964 ಅನ್ನು ಸೆಕ್ಷನ್ 4 ರಲ್ಲಿ ತಿದ್ದುಪಡಿ ಮಾಡಲಾಗುವುದು, ಇದರಿಂದಾಗಿ ಮರ ಕಡಿಯುವವರು, ಅಕ್ರಮವಾಗಿ ಕತ್ತರಿಸಿದ ಮರವನ್ನು ಸಾಗಿಸುವ ವಾಹನಗಳನ್ನು ವಶಪಡಿಸಿಕೊಳ್ಳುವುದು ಮುಂತಾದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.


PGK

Post a Comment

Previous Post Next Post