ಪಶ್ಚಿಮಘಟ್ಟ ವಾಯ್s ಡೈಲಿ ನ್ಯೂಸ್ ಶೃಂಗೇರಿ: ಶೃಂಗೇರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಠಾರಿಯ ಭೇಟಿ ನೀಡಿದ್ದು, ಒತ್ತುವರಿ ತೆರವು ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಅಕ್ರಮ ಒತ್ತುವರಿ ಬಗ್ಗೆ ಸ್ಪಷ್ಟನೆ ನೀಡಿದ ಕಠಾರಿಯಾ ಜಿಲ್ಲೆಯಲ್ಲಿ ಬೇರೆ ಬೇರೆ ಕಾಯ್ದೆಗಳಿಂದ ಅಕ್ರಮ ಸಕ್ರಮ ಮಾಡಲಾಗಿದ್ದು ಕಂದಾಯ ಜಾಗದ ಒತ್ತುವರಿ ಕಂಡಲ್ಲಿ ತೆರವು ಮಾಡುತ್ತೇವೆ. ನಾವು ಜನ ಹಾಗೂ ಅರಣ್ಯ ಎರಡನ್ನ ಉಳಿಸಿಕೊಳ್ಳಬೇಕಾಗಿದೆ ಎಂದರು.
ಫಾರಂ ನಂ.50,53,57 ಎಲ್ಲಾ ಅರ್ಜಿಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು ಹೊಸದಾಗಿ ಕಾಯ್ದೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹಳೆಯ ಕಾಯ್ದೆಯ ಪ್ರಕಾರವೇ ತೆರವು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಲವರು ಕಂದಾಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಇದರಿಂದ ಸರ್ಕಾರಿ ಕಟ್ಟಡ,ಶಾಲೆ,ಆಸ್ಪತ್ರೆ ನಿರ್ಮಿಸಲು ಕಂದಾಯ ಇಲಾಖೆಯಲ್ಲಿ ಜಾಗವಿಲ್ಲದಂತಾಗಿದೆ. ಹೀಗಾಗಿ ಅಂತಹ ಜಾಗಗಳನ್ನು ತೆರವುಗೊಳಿಸುತ್ತೇವೆ ಎಂದರು.
ಕಳೆದ ಹತ್ತು ವರ್ಷಗಳಿಂದ ಮಲೆನಾಡಿನಲ್ಲಿ ಒತ್ತುವರಿ ಹೆಚ್ಚಾಗಿದ್ದು ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದ್ದು ಇಂದಿನಿಂದಲೇ ಒತ್ತುವರಿ ತೆರವು ಕಾರ್ಯಾಚರಣೆ ಪ್ರಾರಂಭವಾಗಲಿದೆ ಎಂದಿದ್ದಾರೆ.