(ಪಶ್ಚಿಮಘಟ್ಟ ವಾಯ್s ಡೈಲಿ ನ್ಯೂಸ್) ಶಿವಮೊಗ್ಗ – ಷೇರು ಮಾರುಕಟ್ಟೆ ಆನ್’ಲೈನ್ ಸ್ಟಾಕ್ ಟ್ರೇಡಿಂಗ್ : 19 ಲಕ್ಷ ರೂ. ವಂಚನೆ!


ಪಶ್ಚಿಮಘಟ್ಟ ವಾಯ್s ಡೈಲಿ ನ್ಯೂಸ್:
   shivamogga), ಸೆ. : ಷೇರು ಮಾರುಕಟ್ಟೆ ಆನ್’ಲೈನ್ ಟ್ರೇಡಿಂಗ್ ವಂಚನೆ (share market online trading scam) ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ ಸೈಬರ್ ವಂಚಕರು (cyber fraudsters), ಶಿವಮೊಗ್ಗದ ವ್ಯಕ್ತಿಯೋರ್ವರಿಗೆ ಲಕ್ಷಾಂತರ ರೂಪಾಯಿ ಮೋಸ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಏನೀದು ಪ್ರಕರಣ? : ಕೆಎಸ್ಎಲ್ ವಿಐಪಿ ಹೆಸರಿನ ವ್ಯಾಟ್ಸಾಪ್ ಗ್ರೂಪ್ (whatsup group) ನಲ್ಲಿ ಷೇರು ಮಾರುಕಟ್ಟೆ ಆನ್’ಲೈನ್ ಸ್ಟಾಕ್ ಟ್ರೇಡಿಂಗ್ ನಲ್ಲಿ, ಹೆಚ್ಚಿನ ಲಾಭಾಂಶ ಕೊಡಿಸುವುದಾಗಿ ನಂಬಿಸಿ ಶಿವಮೊಗ್ಗದ ವ್ಯಕ್ತಿಯೋರ್ವರಿಂದ ಹಣ ಹಾಕಿಕೊಳ್ಳಲಾಗಿತ್ತು.

ನಂತರ ಲಾಭಾಂಶದ ರೂಪದಲ್ಲಿ 1. 30 ಲಕ್ಷ ರೂ. ನೀಡಲಾಗಿತ್ತು. ಉಳಿದ ಅಸಲು ಹಾಗೂ ಲಾಭಾಂಶ (dividend) ಮೊತ್ತ ಹಿಂದಿರುಗಿಸಲು ಲೋನ್, ಟ್ಯಾಕ್ಸ್ ಮತ್ತೀತರ ನೆಪವೊಡ್ಡಿ 19. 23 ಲಕ್ಷ ರೂ. ಗಳನ್ನು ಕಟ್ಟಿಸಿಕೊಳ್ಳಲಾಗಿದೆ.

ಆದರೆ ಹಣ ವಾಪಾಸ್ ನೀಡದೆ ವಂಚಿಸಲಾಗಿದೆ. ಈ ಸಂಬಂಧ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆ ( shimoga cyber crime police station) ಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪೊಲೀಸ್ ಇಲಾಖೆ ಎಚ್ಚರ : ಇತ್ತೀಚೆಗೆ ಟ್ಟೇಡಿಂಗ್ (trading) ಹೆಸರಿನಲ್ಲಿ ಹಾಗೂ ಹೆಚ್ಚಿನ ಲಾಭಾಂಶದ ಆಸೆ ತೋರ್ಪಡಿಸಿ, ಹಣ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿವೆ. ಸಾರ್ವಜನಿಕರು ಈ ಕುರಿತಂತೆ ಜಾಗರೂಕರಾಗಿರಬೇಕು ಎಂದು ಪೊಲೀಸ್ ಇಲಾಖೆ (police dept) ಮನವಿ ಮಾಡಿದೆ.

ಹೆಚ್ಚಿನ ಲಾಭಾಂಶದ ಆಸೆಗೆ ಆನ್’ಲೈನ್ (online) ಮೂಲಕ ಹಣ ಹೂಡಿಕೆ ಮಾಡಿ ಮೋಸ ಹೋಗಬೇಡಿ. ಸಾರ್ವಜನಿಕರು ಸೈಬರ್ ವಂಚನೆಗೊಳಗಾದ ಕೂಡಲೇ, ಹೆಲ್ಪ್ ಲೈನ್ ಸಂಖ್ಯೆ : 1930 ಅಥವಾ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆ ಸಂಖ್ಯೆ – 08182 – 261426 ಗೆ ಸಂಪರ್ಕಿಸಬಹುದಾಗಿದೆ ಎಂದು ಪೊಲೀಸ್ ಇಲಾಖೆಯು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.  


PGK

Post a Comment

Previous Post Next Post