ಪಶ್ಚಿಮಘಟ್ಟ ವಾಯ್s ಡೈಲಿ ನ್ಯೂಸ್:-
ಹುಬ್ಬಳ್ಳಿ, ಸೆಪ್ಟೆಂಬರ್ : ಬಹು ನಿರೀಕ್ಷಿತ ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲಿಗೆ (Hubblli-Pune Vande Bharat) ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಸೋಮವಾರ (ಸೆ.16) ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ. ಹುಬ್ಬಳ್ಳಿ-ಪುಣೆ-ಹುಬ್ಬಳ್ಳಿ ಮಧ್ಯೆ ಸಂಚರಿಸುವ ವಂದೇ ಭಾರತ್ ರೈಲು ಎರಡು ವಾಣಿಜ್ಯ ಮಹಾನಗರಗಳನ್ನು ಸಂಪರ್ಕಿಸುವ ಕೊಂಡಿಯಾಗಿದೆ. ಇದು ಕರ್ನಾಟಕದ 10ನೇ ವಂದೇ ಭಾರತ್ ರೈಲಾಗಿದೆ. ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಸಮಯ, ಯಾವ್ಯಾವ ದಿನದಂದು ಸಂಚರಿಸಲಿದೆ ಎಂಬ ಮಾಹಿತಿ ಇಲ್ಲಿದೆ.
ಹುಬ್ಬಳ್ಳಿ ಜನರ ಬಹು ನಿರೀಕ್ಷಿತ ಪುಣೆ-ಹುಬ್ಬಳ್ಳಿ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಲಿದ್ದಾರೆ. ಹುಬ್ಬಳ್ಳಿ-ಪುಣೆ-ಹುಬ್ಬಳ್ಳಿ ಮಧ್ಯೆ ಸಂಚರಿಸುವ ವಂದೇ ಭಾರತ್ ರೈಲು ಎರಡು ವಾಣಿಜ್ಯ ಮಹಾನಗರಗಳನ್ನು ಸಂಪರ್ಕಿಸುವ ಕೊಂಡಿಯಾಗಿದೆ.
ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಕೇವಲ 8.5 ಗಂಟೆಗಳಲ್ಲಿ 557 ಕಿಮೀ ಕ್ರಮಿಸುತ್ತದೆ. ಇತರ ರೈಲುಗಳಿಗೆ ಹೋಲಿಸಿದರೆ ಸುಮಾರು 3 ಗಂಟೆಗಳ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಈ ರೈಲು ವಾರದಲ್ಲಿ ಮೂರು ದಿನ ಮಾತ್ರ ಸಂಚರಿಸುತ್ತದೆ.
ಯಾವ್ಯಾವ ದಿನದಂದು ರೈಲು ಸಂಚರಿಸುತ್ತದೆ
ಹುಬ್ಬಳ್ಳಿಯಿಂದ ಬುಧವಾರ, ಶುಕ್ರವಾರ ಮತ್ತು ಭಾನುವಾರ ಹೊರಟು ಅದೇ ದಿನ ಪುಣೆ ತಲುಪುತ್ತದೆ. ಪುಣೆಯಿಂದ ಗುರುವಾರ, ಶನಿವಾರ ಮತ್ತು ಸೋಮವಾರ ಹೊರಟು ಹುಬ್ಬಳ್ಳಿ ತಲಪುತ್ತದೆ. ಈ ರೈಲು ಒಟ್ಟು 8 ಬೋಗಿಗಳೊಂದಿಗೆ ಸಂಚರಿಸಲಿದ್ದು, 52 ಎಕ್ಸಿಕ್ಯೂಟಿವ್ ಕ್ಲಾಸ್ ಸೀಟ್ಗಳು ಮತ್ತು 478 ಚೇರ್ ಕಾರ್ ಸೀಟುಗಳು ಇರಲಿವೆ. ಒಟ್ಟು 530 ಆಸನಗಳನ್ನು ಹೊಂದಿದೆ.
ರೈಲು ಸಮಯ
- ರೈಲು ಸಂಖ್ಯೆ 20669: ಎಸ್‌ಎಸ್‌ಎಸ್ ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಸೆಪ್ಟೆಂಬರ್ 18 ರಿಂದ ಜಾರಿಗೆ ಬರುವಂತೆ ಪ್ರತಿ (ಬುಧವಾರ, ಶುಕ್ರವಾರ ಮತ್ತು ಭಾನುವಾರ) ಹುಬ್ಬಳ್ಳಿಯಿಂದ 05.00 ಗಂಟೆಗೆ ಹೊರಟು ಅದೇ ದಿನ ಮಧ್ಯಾಹ್ನ 1.30ಕ್ಕೆ ಪುಣೆ ತಲುಪುತ್ತದೆ.
- ರೈಲು ಸಂಖ್ಯೆ 20670: ಪುಣೆ-ಎಸ್‌ಎಸ್‌ಎಸ್ ಹುಬ್ಬಳ್ಳಿ ವಂದೇ ಭಾರತ್ ರೈಲು ಸೆಪ್ಟೆಂಬರ್ 19 ರಿಂದ ಜಾರಿಗೆ ಬರುವಂತೆ ಪ್ರತಿ (ಗುರುವಾರ, ಶನಿವಾರ ಮತ್ತು ಸೋಮವಾರ) ಪುಣೆಯಿಂದ ಮಧ್ಯಾಹ್ನ 2.15ಕ್ಕೆ ಹೊರಟು ಅದೇ ದಿನ ರಾತ್ರಿ 10.45ಕ್ಕೆ ಹುಬ್ಬಳ್ಳಿ ತಲುಪಲಿದೆ.
- ಇಂದು (ಸೆ.16) 4.15ಕ್ಕೆ ಪುಣೆಯಿಂದ ಹೊರಟು ರಾತ್ರಿ 11.40ಕ್ಕೆ ಹುಬ್ಬಳ್ಳಿ ತಲುಪುತ್ತದೆ.
ನಿಲುಗಡೆ
ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಧಾರವಾಡ, ಸತಾರಾ, ಸಾಂಗ್ಲಿ, ಮೀರಜ್ ನಿಲ್ದಾಣಗಳಲ್ಲಿ ನಿಲ್ಲುತ್ತದೆ. ವಂದೇ ಭಾರತ್ ಸ್ವದೇಶಿ ರೈಲಾಗಿದೆ. “ಮೇಕ್ ಇನ್ ಇಂಡಿಯಾ”ದ ಪ್ರತೀಕವಾಗಿದೆ. ಮೊದಲ ವಂದೇ ಭಾರತ್ ರೈಲನ್ನು 2019ರ ಫೆಬ್ರವರಿ 15 ರಂದು ಉದ್ಘಾಟಿಸಲಾಗಿತ್ತು.