(ಪಶ್ಚಿಮಘಟ್ಟ ವಾಯ್s ಡೈಲಿ ನ್ಯೂಸ್) ಉತ್ತರಕನ್ನಡಶಿರೂರು ಗುಡ್ಡ ಕುಸಿತ:ಚಾಲಕ ಅರ್ಜುನನ ಮೊಬೈಲ್‌ ಹಾಗೂ ಮಗನಿಗಾಗಿ ಖರೀದಿಸಿದ ಆಟಿಕೆ ಲಾರಿ ಪತ್ತೆ

  


ಪಶ್ಚಿಮಘಟ್ಟ ವಾಯ್s ಡೈಲಿ ನ್ಯೂಸ್: ಕಾರವಾರ / ಅಂಕೋಲಾ: ಶಿರೂರು ಗುಡ್ಡ ಕುಸಿತ ದುರ್ಘ‌ಟನೆಯಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಅರ್ಜುನ್‌ ಮತ್ತು ಆತನ ಬೆಂಜ್‌ಲಾರಿ ಪತ್ತೆ ಹಚ್ಚಿದ ಬಳಿಕ ಮತ್ತೆ ಗಂಗಾವಳಿ ನದಿಯಲ್ಲಿ ಡ್ರೆಜ್ಜಿಂಗ್‌ ಕಾರ್ಯಾಚರಣೆ ಮುಂದುವರೆದಿದೆ.

ಶಿರೂರು ಗ್ರಾಮದ ಜಗನ್ನಾಥ ನಾಯ್ಕ, ಗಂಗೆಕೊಳ್ಳದ ಲೋಕೇಶ ನಾಯ್ಕ ಕೂಡ ಕಣ್ಮರೆಯಾಗಿದ್ದು ಅವರ ಹುಡುಕಾಟವು
ನಡೆದಿದೆ. ಲಕ್ಷ್ಮಣ ನಾಯ್ಕ ಹೊಟೇಲ್‌ ಬಳಿ ಬಿದ್ದಿರುವ ಮಣ್ಣಿನ ರಾಶಿಯನ್ನು ಗುರುವಾರ ತೆರವು ಮಾಡಲಾಗುತ್ತಿದ್ದು, ಅಲ್ಲಿಯೇ
ಇವರಿಬ್ಬರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಜಗನ್ನಾಥ ಮತ್ತು ಲೋಕೇಶ ಕುಟುಂಬವು ಸ್ಥಳದಲ್ಲಿ ತಮ್ಮವರಿಗಾಗಿ
ಕಾಯುತ್ತಿದ್ದರೆ.
ಅರ್ಜುನ್‌ ಮೊಬೈಲ್‌ ಪತ್ತೆ: ಅರ್ಜುನ್‌ ಲಾರಿ ಯನ್ನು ಮೇಲಕ್ಕೆತ್ತಿದ ಬಳಿಕ ಲಾರಿಯಲ್ಲಿದ್ದ ಅರ್ಜುನ್‌ ಬಳಸುತ್ತಿದ್ದ ಎಲ್ಲಾ ಸಾಮಗ್ರಿ ಗಳನ್ನು ಹೊರತೆಗೆದಿದ್ದಾರೆ. ಅರ್ಜುನ್‌ ತನ್ನ ದಿನನಿತ್ಯ ಊಟಕ್ಕಾಗಿ ಬಳಸುತ್ತಿದ್ದ ಪಾತ್ರೆಗಳು, ಎರಡು ಮೊಬೈಲ್‌ಗ‌ಳು ಸಿಕ್ಕಿವೆ. ಇದರ ಜತೆಗೆ ತನ್ನ ಮಗನಿಗಾಗಿ ಖರೀದಿಸಿದ ಚಿಕ್ಕ ಆಟಿಕೆಯ ಲಾರಿಯೊಂದು ಬೆಂಜ್‌ ಲಾರಿಯೊಳಗೆ ಸಿಕ್ಕಿದೆ.

ಮಾನವೀಯತೆ ಮೆರೆದ ಪಿಎಸ್‌ಐ ಉದ್ದಪ್ಪ:
ಘಟನಾ ಸ್ಥಳದಲ್ಲಿ ದೊರೆತಿರುವ ಅರ್ಜುನನ ಮೃತ ದೇಹವನ್ನು ಗಂಗಾವಳಿ ನದಿ ದಡದಿಂದ ವಾಹನಕ್ಕೆ ಸಾಗಿಸಲು ಯಾರೂ
ಮುಂದೆ ಬರಲಿಲ್ಲ. ಆ ಸಂದರ್ಭದಲ್ಲಿ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪಿಎಸ್‌ಐ ಉದ್ದಪ್ಪ ಧರೆಪ್ಪನವರ ಸ್ವತಃ ಎತ್ತಿ ಸಾಗಿಸುವುದರ
ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇವರ ಜತೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ವಿಜಯಕುಮಾರ್‌ ನಾಯ್ಕ, ಸಹಾಯಕರಾದ ಬೊಮಯ್ಯ ನಾಯ್ಕ, ಅನಿಲ ಮಹಾಲೆ ಇದ್ದರು. ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರಕ್ಷಕ ಆಂಬ್ಯುಲೆನ್ಸ್‌ ಮೂಲಕ ತಲುಪಿಸಿದ್ದು ಡಿಎನ್‌ಎ ಪರೀಕ್ಷೆ ಬಳಿಕ ಮೃತ
ದೇಹವನ್ನು ವಾರಸುದಾರರಿಗೆ ನೀಡಲಾಗುವುದು ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

PGK

Post a Comment

Previous Post Next Post