ಪಶ್ಚಿಮಘಟ್ಟವಾಯ್s ಡೈಲಿ ನ್ಯೂಸ್: ಭಟ್ಕಳ:ಉಡಪಿ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಭಟ್ಕಳ ಸಮೀಪ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುವ ಸ್ಥಿತಿಗೆ ತಲುಪಿದ್ದು ಬೋಟಿನಲ್ಲಿದ್ದ ಮೀನುಗಾರರನ್ನು ರಕ್ಷಿಸಲಾಗಿದೆ.ವಾಯುಭಾರ ಕುಸಿತದಿಂದ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದ ಕಾರಣ ಅಲೆಗಳ ಅಬ್ಬರಕ್ಕೆ ಸಿಲುಕಿ ಸಾಯಿ ಚರಣ್ ಹೆಸರಿನ ಈ ಬೋಟ್ಗೆ ಹಾನಿಯಾಗಿದೆ. ಬೋಟ್ನ ಫ್ಯಾನ್ಗೆ ಮೀನಿನ ಬಲೆ ಸಿಲುಕಿತ್ತು. ಹೀಗಾಗಿ ಮುಂದೆ ಸಾಗಲಾಗದೆ ಮುಳುಗುವ ಸ್ಥಿತಿಯಲ್ಲಿದ್ದ ಬೋಟನ್ನು ಭಟ್ಕಳದ ಇನ್ನೊಂದು ಮೀನುಗಾರಿಕಾ ಬೋಟ್ನವರು ರಕ್ಷಿಸಿ ಹಗ್ಗ ಕಟ್ಟಿ ಎಳೆದು ತರುತ್ತಿದ್ದರು.
ಆದರೆ ತೀರಕ್ಕೆ ತಲುಪುವ ಮೊದಲೇ ಹಗ್ಗ ತುಂಡಾಗಿ ಭಟ್ಕಳದ ಹೆಬಳೆ ಪಂಚಾಯತ್ನ ತೆಂಗಿನಗುಂಡಿ ವ್ಯಾಪ್ತಿಯ ಸಮುದ್ರ ತೀರದ ಕಲ್ಲಿನ ರಾಶಿಯಲ್ಲಿ ಬೋಟ್ ಸಿಲುಕಿಕೊಂಡಿದೆ. ಅಲೆಗಳ ಅಬ್ಬರ ಹೆಚ್ಚಾಗ್ಗಿರುವುದರಿಂದ ಬೋಟನ್ನು ಹೊರತರಲಾರದೆ ಅಲ್ಲಿಯೇ ಬಿಡಲಾಗಿದ್ದು ಲಕ್ಷಾಂತರ ಮೌಲ್ಯದ ಸೊತ್ತುಗಳು ದೋಣಿಯಲ್ಲಿವೆ . ಬೋಟ್ನಲ್ಲಿದ್ದ ಮೀನುಗಾರರು ಸುರಕ್ಷಿತವಾಗಿ ದಡ ಸೇರಿದ್ದಾರೆ.