(ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್) ರಾಜ್ಯದ ಜನರ ಆಶೀರ್ವಾದ ಇರೋವರೆಗೂ ನನ್ನ ಯಾರೂ ಅಲ್ಲಾಡಿಸೋಕೆ ಆಗಲ್ಲ: ಸಿದ್ದರಾಮಯ್ಯ

 


ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್  : ಹೇಗಾದರೂ ಮಾಡಿ ನನ್ನನ್ನು ಅಧಿಕಾರದಿಂದ ತೆಗೆಯಬೇಕು ಎಂದು ಈಗಲೂ ಬಿಜೆಪಿಯವರು (BJP) ಪ್ರಯತ್ನಿಸುತ್ತಿದ್ದಾರೆ. ರಾಜ್ಯದ ಜನರ ಆಶೀರ್ವಾದ ಇರೋವರೆಗೂ ನನ್ನನ್ನು ಯಾರೂ ಅಲ್ಲಾಡಿಸೋಕೆ ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ವಿಶ್ವಾಸ ವ್ಯಕ್ತಪಡಿಸಿದರು.

ಸವದತ್ತಿ ಯಲ್ಲಮ್ಮನ (Savadatti Yallamma) ಗುಡ್ಡದಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ 22.45 ಕೋಟಿ ರೂ. ವೆಚ್ಚದಲ್ಲಿ ಪ್ರವಾಸಿಗರಿಗೆ ನಿರ್ಮಿಸಲಾಗಿರುವ ಕೊಠಡಿಗಳು, ಡಾರ್ಮಿಟರಿ, ಪಾರ್ಕಿಂಗ್, ಉದ್ಯಾನ ಮತ್ತಿತರ ಮೂಲಸೌಕರ್ಯಗಳು ಮತ್ತು ಮಹಿಳಾ ಅಭಿವೃದ್ಧಿ ನಿಗಮದಿಂದ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳು ಮತ್ತು ಅತಿಥಿಗೃಹವನ್ನು ಉದ್ಘಾಟಿಸಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರು 17 ಸ್ಥಾನ ಗೆದ್ದರು. ನಾವು 9 ಸ್ಥಾನ ಗೆದ್ದೆವು. ಜೆಡಿಎಸ್ 2 ಸ್ಥಾನ ಗೆದ್ದಿತು. ಅವರು ಏನೂ ಮಾಡದೇ ನೀವು ಅವರನ್ನು ಗೆಲ್ಲಿಸುತ್ತೀರಿ. ಏನೂ ಮಾಡದೇ ಬಿಜೆಪಿ ಪ್ರಚಾರ ಪಡೆಯುತ್ತದೆ. ಹಿಂದೂಗಳು, ಹಿಂದುತ್ವದ ಹೆಸರಲ್ಲಿ ಜನರನ್ನು ಒಡೆಯುವ ಕೆಲಸ ಮಾಡುತ್ತಿದೆ. ಈ ನಾಡು ಉಳಿಯಬೇಕಾದರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು. ನಮ್ಮ ಸರ್ಕಾರ ಇನ್ನೂ ಮೂರುವರೆ ವರ್ಷ ಇರುತ್ತದೆ. ಆ ಅವಧಿಯಲ್ಲಿ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಯಲ್ಲಮ್ಮ ಕ್ಷೇತ್ರದಲ್ಲಿ 7ರಿಂದ 8 ಸಾವಿರ ಜನಕ್ಕಾದರೂ ಕುಡಿಯುವ ನೀರು, ವಸತಿ ವ್ಯವಸ್ಥೆ ಮಾಡಬೇಕು. ಇದನ್ನೆಲ್ಲಾ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ನಾವು ಮಾಡುತ್ತೇವೆ. ಅದಕ್ಕೆ ನಿಮ್ಮ ಸಹಕಾರ ಬೇಕು. ಯಾವ ಕಾರಣಕ್ಕೂ ಕಾನೂನು ಬಾಹಿರವಾಗಿ ಮಳಿಗೆಗಳನ್ನು ಮಾಡಿಕೊಳ್ಳಬೇಡಿ. ಇದರಿಂದ ಈ ಕ್ಷೇತ್ರವೇ ಕಾನೂನು ಬಾಹಿರ ಆಗುತ್ತದೆ. ವ್ಯವಸ್ಥಿತವಾಗಿ ಅಭಿವೃದ್ಧಿ ಮಾಡುವ ಸಲುವಾಗಿ ಪ್ರಾಧಿಕಾರಿಗಳನ್ನು ಸ್ಥಾಪಿಸಲಾಗಿದೆ. ಕನಿಷ್ಠ 3,000 ಸಾವಿರ ಜನರ ದಾಸೋಹಕ್ಕೆ ದಾಸೋಹ ಕೇಂದ್ರ ಸ್ಥಾಪಿಸುತ್ತೇವೆ. ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿದ್ದೇವೆ. ಈ ರೀತಿ ಯಾವ ಸರ್ಕಾರಗಳು ಮಾಡಿಕೊಟ್ಟಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿಯವರು ದೇವರು, ಧರ್ಮ ಅವರ ಆಸ್  ಅಂದುಕೊಂಡಿದ್ದಾರೆ. ಬಿಜೆಪಿಯವರು ಧರ್ಮದಲ್ಲಿ ರಾಜಕಾರಣ ಮಾಡೋಕೆ ಪ್ರಯತ್ನಿಸುತ್ತಾರೆ. ಧರ್ ಯಾರೊಬ್ಬನ ಸ್ವತ್ತಲ್ಲ. ದೇವನೊಬ್ಬ ನಾಮ ಹಲವು. ಧರ್ಮ ಪಾಲನೆ ವೈಯಕ್ತಿಕ ವಿಚಾರ. ಯಾವ ಧರ್ಮವನ್ನು ಬೇಕಾದರೂ ನೀವು ಪಾಲನೆ ಮಾಡಬಹುದು ಎಂದು ಕಿಡಿಕಾರಿದರು

ಇನ್ನು ಗ್ಯಾರಂಟಿ ಯೋಜನೆಯನ್ನು ನಡೆಸಿಕೊಡುವ ಶಕ್ತಿ ಕೊಡು ಎಂದು ಪ್ರಾರ್ಥಿಸಿದ್ದೇವೆ. ಗ್ಯಾರಂಟಿ ಯೋಜನೆ ಜಾರಿಯಾದ ಮೇಲೆ ಧರ್ಮಸ್ಥಳಕ್ಕೆ ಬರುವ ಜನರ ಸಂಖ್ಯೆ ಹೆಚ್ಚಾಗಿದೆ ಅಂತ ಪತ್ರ ಬರೆದಿದ್ದಾರೆ. ರಾಮಲಿಂಗಾ ರೆಡ್ಡಿಯವರು ಅರ್ಚಕರಿಗೆ ವಿಮೆ ಯೋಜನೆಗೆ 5 ಲಕ್ಷ ಜೀವನೋದ್ಧಾರಕ್ಕೆ ಕೊಡುವ ಯೋಜನೆ ಮಾಡಿದ್ದರು. ನಾವು ಮಾಡಿದ ಬಿಲ್ ವಿರೋಧ ಮಾಡಿ ಅದನ್ನು ನಿಲ್ಲಿಸಿದ್ದಾರೆ. ಸಿಎಂ ಹೆಸರು ಅವರ ಪತ್ನಿ ಹೆಸರು, ಸಚಿವರ ಹೆಸರನ್ನು ಹೇಳಿ ಅರ್ಚಕರು ಅರ್ಚನೆ ಮಾಡಿದರು. ಅಂಥ ಅರ್ಚಕರಿಗೆ ಯೋಜನೆ ತಂದರೆ ಇದನ್ನು ವಿರೋಧ ಮಾಡುತ್ತೀರಿ. ಇಂದು ಸಿದ್ದರಾಮಯ್ಯ 30 ಕೋಟಿ ರೂ. ಅನುದಾನ ನೀಡಿ ಅಭಿವೃದ್ಧಿ ಮಾಡಿದ್ದಾರೆ. ಯಾಕೆ ಯಡಿಯೂರಪ್ಪ, ಬೊಮ್ಮಾಯಿ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಹೆಚ್‌ಕೆ ಪಾಟೀಲ್, ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕರಾದ ವಿಶ್ವಾಸ್ ವೈದ್ಯ, ರಾಜು ಕಾಗೆ, ಬಾಬಾ ಸಾಹೇಬ್ ಪಾಟೀಲ್, ಆಸಿಫ್ ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಸೇರಿ ಮತ್ತಿತರರು ಇದ್ದರು.



PGK

Post a Comment

Previous Post Next Post