(ಪಶ್ಚಿಮ ಘಟ್ಟ ವಾಯ್ಸ್ ) 02-12-2024 ರಿಂದ ಕುಮಟಾ ರಸ್ತೆ ಬಂದ್!

(ಪಶ್ಚಿಮ ಘಟ್ಟ ವಾಯ್ಸ್ )

*ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರಾಷ್ಟ್ರೀಯ ಹೆದ್ದಾರಿ 766-ಇ ಕುಮಟ -  ಶಿರಸಿ ರಸ್ತೆಯಲ್ಲಿ ಉನ್ನತೀಕರಣ ಕಾಮಗಾರಿಯು ದಿನಾಂಕ 02-12- 2024 ರಿಂದ ಪ್ರಾರಂಭವಾಗಲಿದ್ದು ಸದರಿ ಕಾಮಗಾರಿಯು ನಿಗದಿತ ಸಮಯದೊಳಗೆ ಮುಕ್ತಾಯಗೊಳಿಸಬೇಕಾಗಿರುವುದರಿಂದ ಸದರಿ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಿ ಬದಲಿ ಮಾರ್ಗದ ಕುರಿತು ಈ ಕೆಳಗಿನಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿರುತ್ತಾರೆ*
1) ಕುಮಟಾ-- ಸಿರ್ಸಿ ಮೂಲಕ ಸಿದ್ದಾಪುರ ರಾಷ್ಟ್ರೀಯ ಹೆದ್ದಾರಿ 766--ಇ ಲಘು ವಾಹನಗಳು ಸಂಚರಿಸಬಹುದು.
2) ಅಂಕೋಲ-- ಶಿರಸಿ ಮೂಲಕ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ 63 ಮತ್ತು ರಾಜ್ಯ ಹೆದ್ದಾರಿ 93 ಮಾರ್ಗವಾಗಿ ಎಲ್ಲಾ ವಿಧದ ವಾಹನಗಳು ಸಂಚರಿಸಬಹುದು.
3) ಮಂಗಳೂರು-ಸಿರಸಿ ಮೂಲಕ ಸಿದ್ದಾಪುರ ಮಾವಿನಗುಂಡಿ ಮಾರ್ಗವಾಗಿ ಎಲ್ಲಾ ವಿಧದ ವಾಹನಗಳು ಸಂಚರಿಸಬಹುದು.
 ಆದ್ದರಿಂದ ರಾಷ್ಟ್ರೀಯ ಹೆದ್ದಾರಿ 766 ಇ  ಕುಮಟಾ ಶಿರಸಿ ರಸ್ತೆಯಲ್ಲಿ ಉನ್ನತಿಕರಣ ಕಾಮಗಾರಿ ಸಮಯದಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಮೇಲ್ಕಂಡಂತೆ ಸೂಚಿಸಿರುವ ಬದಲಿ ಮಾರ್ಗದಲ್ಲಿ ಸಂಚರಿಸಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿಗಳಾದ ಎಂ ನಾರಾಯಣ ಕೋರಿದ್ದಾರೆ.

.
PGK

Post a Comment

Previous Post Next Post