(ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್)ರಾಜ್ಯದ ಸರ್ಕಾರಿ ಪಿಯು ವಿದ್ಯಾರ್ಥಿಗಳಿಗೆ ಉಚಿತ ನೀಟ್​, ಜೆಇಇ, ಸಿಇಟಿ ಕೋಚಿಂಗ್ ಆರಂಭ!


ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್,-
ಬೆಂಗಳೂರು:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ 'ಉಚಿತ NEET/JEE/CET ಆನ್​ಲೈನ್ ಕೋಚಿಂಗ್ ತರಗತಿ' ಆರಂಭಿಸಲಾಗಿದೆ.

ವಿಧಾನಸೌಧದಲ್ಲಿ ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು, ಸರ್ಕಾರಿ ಪದವಿ ಪೂರ್ವಕಾಲೇಜುಗಳಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೀಟ್​/ಜೆಇಇ/ಸಿಇಟಿ ಆನ್​ಲೈನ್ ಕೋಚಿಂಗ್ ತರಗತಿಗಳಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಸಚಿವರು, ''2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಲಾದ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗಿದೆ. ತರಬೇತಿಗೆ ಪದವಿಪೂರ್ವ ಕಾಲೇಜಿನ 20,000 ವಿದ್ಯಾರ್ಥಿಗಳು ಹಾಗೂ ಆದರ್ಶ ಕಾಲೇಜಿನ 5,000 ವಿದ್ಯಾರ್ಥಿಗಳು ಸೇರಿ ಒಟ್ಟು 25 ಸಾವಿರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ'' ಎಂದು ಹೇಳಿದರು.'ಪದವಿ ಪೂರ್ವ ಶಿಕ್ಷಣ ಹಂತ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಬಹಳ ಪ್ರಮುಖ ಘಟ್ಟವಾಗಿದೆ. ಭವಿಷ್ಯದ ವೃತ್ತಿ ಆಯ್ಕೆಗೆ ಪೂರಕವಾದ ಶಿಕ್ಷಣ ಆಯ್ಕೆ ಮಾಡಲು ನೀಟ್​/ಜೆಇಇ/ಸಿಇಟಿ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿ ಪಡೆಯುವುದು ಮುಖ್ಯ. ಆದ್ದರಿಂದ, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆತಂಕವೂ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಪೋಷಕರು ಖಾಸಗಿ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡುತ್ತಾರೆ. ಅಲ್ಲಿ ನಿಗದಿತ ತರಗತಿ ಚಟುವಟಿಕೆಗಳೊಂದಿಗೆ ವೃತ್ತಿಪರ ಕೋರ್ಸ್​​ಗಳಿಗೆ ಪ್ರವೇಶ ಪಡೆಯಲು ನೀಟ್​/ಜೆಇಇ/ಸಿಇಟಿ ಪ್ರವೇಶ ಪರೀಕ್ಷೆಗೂ ಸಹ ತರಬೇತಿ ನಡೆಸಲಾಗುತ್ತದೆ ಎಂಬುದು ಅದಕ್ಕೆ ಕಾರಣ'' ಎಂದರು.PACE ಸಂಸ್ಥೆ ಆಯ್ಕೆಯಾಗಿದೆ. ಆ ಸಂಸ್ಥೆಯಿಂದ ಮುಂದಿನ ಎರಡು ವರ್ಷಗಳಿಗೆ ಅಂದರೆ, ಪ್ರಸಕ್ತ ಹಾಗೂ ಮುಂದಿನ ವರ್ಷದಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್​ಲೈನ್​ ಲೈವ್​ ನೀಟ್​/ಜೆಇಇ/ಸಿಇಟಿ ತರಗತಿಗಳನ್ನು ನಡೆಸಲು ಉದ್ದೇಶಿಸಲಾಗಿದೆ.

ತರಗತಿಗಳು ನಡೆಯುವ ವಿಧಾನ: ತರಗತಿಗಳ ಆರಂಭಕ್ಕೆ ಮುನ್ನ ಒಂದು ಗಂಟೆ ಹಾಗೂ ತರಗತಿಗಳು ಮುಗಿದ ನಂತರ ಒಂದು ಗಂಟೆ ಅವಧಿಯಲ್ಲಿ ತರಗತಿಗಳು ನೇರ ಪ್ರಸಾರವಾಗಲಿವೆ. ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ತರಗತಿಗಳು ನಡೆಯುತ್ತವೆ. ಆದರ್ಶ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಉಳಿದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ 20,000 ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.

ಹಾಜರಾತಿ:ಪ್ರತಿದಿನ ಈ ವಿಶೇಷ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಹಾಜರಾತಿಯನ್ನು Attendance APP ಮೂಲಕ ತೆಗೆದುಕೊಳ್ಳಲಾಗುತ್ತದೆ. ಪ್ರಾಂಶುಪಾಲರು ಹಾಗೂ ಸಂಬಂಧಿಸಿದ ವಿಷಯಗಳ ಖಚಿತಪಡಿಸಿಕೊಳ್ಳುತ್ತಾರೆ. ಉಪನ್ಯಾಸಕರು ವಿದ್ಯಾರ್ಥಿಗಳ ಹಾಜರಾತಿಯನ್ನು ಖಚಿತಪಡಿಸಿಕೊಳ್ಳುತ್ತಾರೆ.

ಕಿರುಪರೀಕ್ಷೆಗಳು: ನೋಂದಾಯಿತ 25,000 ವಿದ್ಯಾರ್ಥಿಗಳಿಗೆ ಕಿರುಪರೀಕ್ಷೆಗಳನ್ನು ನಡೆಸಿ ಅಂಕಗಳನ್ನು ನೀಡಲಾಗುತ್ತದೆ ಹಾಗೂ ರಾಂಕ್ ಲಿಸ್ಟ್ ಮಾಡಲಾಗುವುದು. (ಜಿಲ್ಲಾವಾರು ಹಾಗೂ ರಾಜ್ಯ ಹಂತದಲ್ಲಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ)

ಸಂದೇಹ ಪರಿಹಾರ ಅವಧಿಗಳು:ಪ್ರತಿ ಶನಿವಾರ ಸಂದೇಹ ಪರಿಹಾರಾತ್ಮಕ ಅವಧಿಗಳನ್ನು ನಡೆಸಲಾಗುವುದು. ಸೋಮವಾರದಿಂದ ಶುಕ್ರವಾರದವರೆಗಿನ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಬರುವ ಸಂದೇಹಗಳನ್ನು ಆಯಾ ವಿಷಯ ಉಪನ್ಯಾಸಕರು ಸಂಗ್ರಹಿಸಿ ಸಂಸ್ಥೆಯ ಪೋರ್ಟಲ್ ಮೂಲಕ ಕಳುಹಿಸುತ್ತಾರೆ. ಆ ಸಂದೇಹಗಳನ್ನು ಪರಿಗಣಿಸಿ ವಿಷಯ ತಜ್ಞರು ಪರಿಹಾರ ನೀಡಲಿದ್ದಾರೆ.

ತರಬೇತಿ ಅವಧಿ:ಕೋಚಿಂಗ್ ತರಗತಿಗಳು ಆರಂಭವಾದ ದಿನದಿಂದಲೂ ನಿರಂತರವಾಗಿ ನಡೆಯಲಿದೆ. ಸಂಸ್ಥೆಯ ಹಾಗೂ ಇಲಾಖೆಯ ಪೋರ್ಟಲ್ ನಲ್ಲಿ Recorded Edited Version ಲಭ್ಯವಿರಲಿದೆ. ಆ ರೆಕಾರ್ಡ್ ತರಗತಿಗಳನ್ನು ವಿದ್ಯಾರ್ಥಿಗಳು ತಮ್ಮ ಅನುಕೂಲ ಸಮಯದಲ್ಲಿ ಹಾಗೂ ಎಷ್ಟು ಬಾರಿಯಾದರೂ ಗಮನಿಸಬಹುದಾಗಿದೆ

:






PGK

Post a Comment

Previous Post Next Post