ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್
ಹಳಿಯಾಳ ತಾಲೂಕಿನ ಸಾಂಬ್ರಾಣಿ ವಲಯದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದ ಬೃಹತ್ ಕಾರ್ಯಚರಣೆ.
ಸುಮಾರು ಹತ್ತು ಲಕ್ಷ ರೂ ಬೆಲೆಯ ಸಾಗವಾನಿ ತುಂಡುಗಳನ್ನು ಕದ್ದೊಯ್ಯುತ್ತಿದ್ದ ಆರೋಪಿಗಳನ್ನು ಮಾಲು ಮತ್ತು ವಾಹನ ಸಹಿತವಾಗಿ ಬಂಧಿಸಿರುವ ಸಿಬ್ಬಂದಿಗಳು.ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾದಿಕಾರಿ ಡಾ.ಪ್ರಶಾಂತಕುಮಾರ ನಿರ್ದೇಶನ ಹಾಗು ಹಳಿಯಾಳ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾದಿಕಾರಿ ಬೀರಪ್ಪೃವರ ಮಾರ್ಗದರ್ಶನದಲ್ಲಿ ಬೆಳಗಿಙ ಜಾವ ನಡೆದ ಕಾರ್ಯಚರಣೆ.ತಪ್ಪಿಸಿಕೊಂಡಿರುವ ಉಳಿದ ನಾಲ್ಕು ಆರೋಪಿಗಳಿಗಾಗಿ ಬಲೆ ಬಿಸಿರುವ ಅರಣ್ಯ ಇಲಾಖೆ.ಅಜಮಾಳ ತಾಂಡಾ ಮತ್ತು ಕಾಳಗಿನಕೊಪ್ಪ ಕ್ರಾಸ ಹತ್ತಿರ ಬೆಳಗಿನ ಜಾವ ನಡೆಸಿದ ಕಾರ್ಯಚರಣೆ. ಹತ್ತು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರಪಡಿಸಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು. ಕಾರ್ಯಾಚರಣೆಯಲ್ಲಿ ಸಂಗಮೇಶ ಪಾಟೀಲ ವಲಯ ಅರಣ್ಯಾಧಿಕಾರಿ ಸಾಂಬ್ರಾಣಿ, ಉಪ ವಲಯ ಅರಣ್ಯಾಧಿಕಾರಿ ವ ಮೋಜಣಿದಾರರಾದ ಬಸವರಾಜ ಪೂಜಾರಿ, ಚಿದಾನಂದ ಬಡಿಗೇರ, ಷಣ್ಮುಖ ಹವಳಗಿ, ಮಹಾಂತೇಶ ಬಳಬಟ್ಟಿ, ಹನುಮಂತ ಚೌಗಲಾ ಗಸ್ತು ಅರಣ್ಯ ಪಾಲಕರಾದ ವಿಠ್ಠಲ ಶೋಧೆನ್ನವರ, ರೇವಣಸಿದ್ದ, ಸಲೀಮ ರೋಣದ, ಈರಪ್ಪಾ ಹೊಂಗಲ, ವಿನಾಯಕ ಸೊಲಬಣ್ಣವರ ಹಾಗೂ ಜೆ.ಎಚ್.ಮುಲ್ಲಾ ಪಾಲ್ಗೊಂಡಿದ್ದರು.