(ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್)ಸೌದೆ ತರುವ ನೆಪದಲ್ಲಿ ಶ್ರೀಗಂಧದ ಮರ ಕದ್ದಿದ್ದ ಇಬ್ಬರ ಬಂಧನ

 


 ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್:-ಬೆಂಗಳೂರು,ಡಿ.13- ಶ್ರೀಗಂಧದ ತುಂಡುಗಳ ಅಕ್ರಮ ಸಾಗಾಣಿಕೆ ಮತ್ತು ಕಳವು ಮಾಡಲು ಯತ್ನಿಸಿದ್ದ ಇಬ್ಬರನ್ನು ಬಂಧಿಸಿರುವ ಸುಬ್ರಮಣ್ಯಪುರ ಮತ್ತು ಜ್ಞಾನಭಾರತಿ ಠಾಣೆ ಪೊಲೀಸರು ಒಟ್ಟು 20ಲಕ್ಷ ಮೌಲ್ಯದ 261ಕೆಜಿ 800ಗ್ರಾಂ ಶ್ರೀಗಂಧ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಸುಬ್ರಮಣ್ಯಪುರ: ಕನಕಪುರ ಮುಖ್ಯರಸ್ತೆ ಕಡೆಯಿಂದ ಗುಬ್ಬಲಾಳ ಮೂಲಕ ಉತ್ತರಹಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿ ಮ್ಯಾಕ್ಸಿ ಟ್ರಕ್ನಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ನಗರಕ್ಕೆ ಸಾಗಾಟ ಮಾಡುತ್ತಿರುವ ಬಗ್ಗೆ ಸುಬ್ರಮಣ್ಯಪುರ ಠಾಣೆ ಪೊಲೀಸರಿಗೆ ಮಾಹಿತಿ ಲಭಿಸಿದೆ.  -ತಕ್ಷಣ ಸ್ಥಳಕ್ಕೆ ಧಾವಿಸಿ, ಬಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಪ್ರಕರಣದಲ್ಲಿ ಭಾಗಿಯಾಗಿರುವ ಆತನ ಇಬ್ಬರು ಸಹಚರರ ಪೈಕಿ ಒಬ್ಬ ಆರೋಪಿಯು ಕೊಡಗು, ವಿರಾಜಪೇಟೆ, ಸಿದ್ದಾಪುರದ ಅರಣ್ಯಗಳಲ್ಲಿ ಸೌಧೆ ತರುವವನಂತೆ ಹೋಗಿ ಶ್ರೀಗಂಧದ ಮರಗಳನ್ನು ಕಡಿದುಕೊಂಡು ಬಂದು ಪಿರಿಯಾ ಪಟ್ಟಣದ ತನ್ನ ಮನೆ ಮತ್ತು ಹೊಲದಲ್ಲಿ ಬಚ್ಚಿಟ್ಟು, ಆತನ ಮತ್ತೋಬ್ಬ ಸಹಚರನಿಗೆ ಗಿರಾಕಿಗಳನ್ನು ಹುಡುಕಿ, ಶ್ರೀಗಂಧದ ಮರದ ತುಂಡುಗಳನ್ನು ಮಾರಾಟ ಮಾಡಲು ತಿಳಿಸುತ್ತಿದ್ದುದಾಗಿ ಹೇಳಿದ್ದಾನೆ. --ಆರೋಪಿಯಿಂದ 146 ಕೆ.ಜಿ 300 ಗ್ರಾಂ ಶ್ರೀಗಂಧದ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಒಟ್ಟು ಮೌಲ್ಯ 14.60 ಲಕ್ಷರೂಗಳೆಂದು ಅಂದಾಜಿಸಲಾಗಿದೆ.

ಈ ಪ್ರಕರಣದ ಇಬ್ಬರು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.
ಇನ್‌್ಸಪೆಕ್ಟರ್ ರಾಜು ಮತ್ತು ಸಿಬ್ಬಂದಿಗಳ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಜ್ಞಾನಭಾರತಿ: ಇಲ್ಲಿನ ಕ್ಯಾಂಪಸ್ನಲ್ಲಿರುವ ಫಾರೆಸ್‌್ಟನಲ್ಲಿ ಮರವನ್ನು ಕಡಿಯುತ್ತಿರುವ ಶಬ್ದ ಕೇಳಿ ಅಲ್ಲಿನ ಸೆಕ್ಯೂರಿಟಿ ಆಫೀಸರ್ ಸ್ಥಳಕ್ಕೆ ಹೋಗಿ ನೋಡಿದಾಗ ನಾಲ್ವರು ಮರವನ್ನು ಕಳವು ಮಾಡುವ ಉದ್ದೇಶದಿಂದ ಕಡಿಯುತ್ತಿದ್ದುದು ಕಂಡುಬಂದಿದೆ. ಆರೋಪಿಗಳು ಸೆಕ್ಯೂರಿಟಿ ಆಫೀಸರ್ರನ್ನು ನೋಡಿ ಸಾಮಾಗ್ರಿಗಳನ್ನು ಅಲ್ಲಿಯೇ ಬಿಟ್ಟು ಪರಾರಿ ಆಗಿದ್ದಾರೆ. ಈ ಬಗ್ಗೆ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಕಲೆಹಾಕಿ ಸ್ಥಳದಲ್ಲಿ ಕಡಿದು ಬಿಟ್ಟಿದ್ದ ಶ್ರೀಗಂಧದ ಮರದ ತುಂಡುಗಳು, ಮರ ಕಡಿಯಲು ತಂದಿದ್ದ ಸಾಮಾಗ್ರಿಗಳನ್ನು ಹಾಗೂ ಒಂದು ಮೊಬೈಲ್ ಫೋನ್ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಶಕ್ಕೆ ಪಡೆದ ಮೊಬೈಲ್ ಫೋನ್ನ ಮೂಲಕ ಆರೋಪಿಯ ವಿಳಾಸವನ್ನು ಪತ್ತೆಮಾಡಿ, ರಾಮನಗರದ ಇರುಳಿಗರ ದೊಡ್ಡಿ ಗ್ರಾಮದಲ್ಲಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಶ್ರೀಗಂಧದ ಮರವನ್ನು ಕಡಿದಿರುವುದಾಗಿ ತಿಳಿಸಿದ್ದಾನೆ.ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿ ಸಿದಾಗ, ಈ ಪ್ರಕರಣದಲ್ಲಿ ಇನ್ನೂ ಮೂವರು ಅದೇ ಊರಿನಲ್ಲಿ ವಾಸವಿರುವ ಸಹ ಸಂಬಂಧಿಗಳು ಭಾಗಿಯಾಗಿರುವುದಾಗಿ ತಿಳಿಸಿರುತ್ತಾನೆ.

ಆ ಮೂವರು ವ್ಯಕ್ತಿಗಳು ತಲೆಮರೆಸಿಕೊಂಡಿದ್ದು, ಅವರುಗಳ ಪತ್ತೆಕಾರ್ಯ ಮುಂದುವರೆದಿದೆ.
ಆರೋಪಿಯ ಬಂಧನದಿಂದ 155 ಕೆ.ಜಿ 500 ಗ್ರಾಂನ ಶ್ರೀಗಂಧದ ಮರದ ತುಂಡುಗಳನ್ನು, ಹಾಗೂ ಮರ ಕಡಿಯಲು ತಂದಿದ್ದ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದ್ದು. ಇವುಗಳ ಮೌಲ್ಯ ಐದು ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಇನ್ಸ್ ಪೆಕ್ಟರ್ ರವಿ ಮತ್ತು ಸಿಬ್ಬಂದಿ ತಂಡ ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.


PGK

Post a Comment

Previous Post Next Post