(ಪಶ್ಚಿಮಘಟ್ಟ ವಾಯ್ಸ್- ಡೈಲಿ ನ್ಯೂಸ್-)ಹುಬ್ಬಳ್ಳಿ-ಶಿರಸಿ-ತಾಳಗುಪ್ಪ ಮತ್ತು ಧಾರವಾಡ-ಬೆಳಗಾವಿ ಹೊಸ ರೈಲು ಮಾರ್ಗದ ಬಗ್ಗೆ ಮಹತ್ವದ ಚರ್ಚೆ!

 


ಪಶ್ಚಿಮಘಟ್ಟ ವಾಯ್ಸ್ -ಡೈಲಿ ನ್ಯೂಸ್-

ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗದ ಕಾಮಗಾರಿಯನ್ನು 2027ರ ಒಳಗೆ ಪೂರ್ಣಗೊಳಿಸುತ್ತೇವೆ ಎಂದು ರಾಜ್ಯ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ. ಸೋಮಣ್ಣ ,

 ಹುಬ್ಬಳ್ಳಿಯ ರೈಲ್ವೇ ಭವನದಲ್ಲಿ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ ಜೋಶಿ ಉಪಸ್ಥಿತಿಯಲ್ಲಿ ರೈಲು ಯೋಜನೆಗಳ ಪರಿಶೀಲನಾ ಸಭೆ ನಡೆಯಿತು.

ಸಭೆಯಲ್ಲಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಸಂಸದ *ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಹುಬ್ಬಳ್ಳಿ-ಅಂಕೋಲಾ, ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗದ ಡಿಪಿಆರ್ ಆದಷ್ಟು ಶೀಘ್ರವಾಗಿ ಮುಕ್ತಾಯಗೊಳಿಸಿ* ವರದಿಯನ್ನು ರೈಲ್ವೇ ಇಲಾಖೆಗೆ ಕಳುಹಿಸಲು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಸಚಿವರಲ್ಲಿ ವಿನಂತಿಸಿದರಲ್ಲದೇ, ದಾಂಡೇಲಿಗೆ ರೈಲ್ವೆ ಪುನಃ ಪ್ರಾರಂಭಿಸುವಂತೆ ಹಾಗೂ ಖಾನಾಪುರ ರೈಲ್ವೆ ನಿಲ್ದಾಣ ಸುಧಾರಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಲೋಂಡಾ ನಿಲ್ದಾಣ ಕಾಮಗಾರಿ ತ್ವರಿತವಾಗಿ ಮುಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಹೇಳಿದರು.

*ಕೇಂದ್ರ ಸಚಿವ ಸೋಮಣ್ಣ ಪ್ರತಿಕ್ರಿಯಿಸಿ,  ಅಂಕೋಲಾ-ಹುಬ್ಬಳ್ಳಿ *ಡಿಪಿಆರ್ ಸಿದ್ಧತೆ ಪ್ರಾರಂಭವಾಗಿದ್ದು, ಜನೆವರಿ ಕೊನೆಯೊಳಗೆ ಮುಗಿಸಿ ರೈಲ್ವೆ ಬೋರ್ಡ್‌ಗೆ ಕಳುಹಿಸಬೇಕು* ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ಅಂತಿಮ ಹಂತದ ಸರ್ವೇ ಕೆಲಸ ಪ್ರಾರಂಭವಾಗಿದ್ದು, ಮುಂದಿನ ಜುಲೈರೊಳಗೆ ಡಿಪಿಆರ್‌ನ್ನು ರೈಲ್ವೆ ಬೋರ್ಡ್‌ಗೆ ರವಾನಿಸಬೇಕು. ದಾಂಡೇಲಿ  ರೈಲ್ವೆ ಪುನಃ ಪ್ರಾರಂಬಿಸುವದು ಹಾಗೂ ಖಾನಾಪುರ ರೈಲ್ವೆ ನಿಲ್ದಾಣ ಸುಧಾರಣೆಗೆ ಅಗತ್ಯ ಕ್ರಮ.

ನಗರದ ಗದಗ ರಸ್ತೆಯಲ್ಲಿರುವ ನೈಋತ್ಯ ರೈಲ್ವೆ ಕೇಂದ್ರ ಕಚೇರಿಯಲ್ಲಿ ರೈಲ್ವೆ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಅವರು, "ಹೊಸಪೇಟೆ - ಹುಬ್ಬಳ್ಳಿ - ಲೋಂಡಾ - ವಾಸ್ಕೋಡ ಗಾಮ ಜೋಡಿ ಮಾರ್ಗದ ಪೂರ್ಣಗೊಳಿಸಲಾಗುತ್ತಿದೆ‌. ಹುಬ್ಬಳ್ಳಿ - ಅಂಕೋಲಾ ರೈಲ್ವೆ ಮಾರ್ಗದ ಬಗ್ಗೆ ವಿವರವಾದ ಯೋಜನಾ ವರದಿ (DPR) ಸಿದ್ಧವಾಗಿದೆ. ಭಾರತೀಯ ವನ್ಯಜೀವಿ ಸಂಸ್ಥೆಯಿಂದ Rapid action report & Integrated transport plan ಕರ್ನಾಟಕ ಸರ್ಕಾರದಿಂದ ಅಕ್ಟೋಬರ್-2024 ಮಧ್ಯದಲ್ಲಿ ನಿರೀಕ್ಷಿಸಲಾಗಿದೆ. ಮತ್ತು ವಿವರವಾದ ಯೋಜನಾ ವರದಿಯನ್ನು ನವೆಂಬರ್​ 24ರೊಳಗೆ ಸಲ್ಲಿಸಲಾಗುವುದು" ಎಂದು ತಿಳಿಸಿದ್ದಾರೆ.


PGK

Post a Comment

Previous Post Next Post