(ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್) ನಾವು ದರ್ಶನ್‌ರಿಂದ 10 ಪೈಸೆಯೂ ಪಡೆದಿಲ್ಲ..: ರೇಣುಕಾಸ್ವಾಮಿ ತಂದೆ ಸ್ಪಷ್ಟನೆ


 ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್ ಚಿತ್ರದುರ್ಗ: ನಟ ದರ್ಶನ್‌ (Actor Darshan) ಅವರಿಂದ ನಾವು ಹಣ ಪಡೆದಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಬರೆಯುತ್ತಿದ್ದಾರೆ. ಇದರಿಂದ ನಮಗೆ ನೋವಾಗಿದೆ. ನಾವು ಯಾವುದೇ ಹಣ ಪಡೆದಿಲ್ಲ ಎಂದು ರೇಣುಕಾಸ್ವಾಮಿ ತಂದೆ ತಂದೆ ಶಿವನಗೌಡ್ರು ಹೇಳಿದರು.

ಚಿತ್ರದುರ್ಗ ನಗರದ ವಿಆರ್‌ಎಸ್ ಬಡಾವಣೆಯ ನಿವಾಸದಲ್ಲಿ ಗುರುವಾರ (ಜ.17) ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಹಲವು ದಿನಗಳಿಂದ ಫೇಸ್‌ಬುಕ್‌ನಲ್ಲಿ ಕೆಲವು ವಿಚಾರಗಳು ಬರುತ್ತಿವೆ. ನಾವು ದರ್ಶನ್ ಬಳಿ ಹೋಗಿದ್ದೇವೆ, ಅವರು ನಮ್ಮ ಬಳಿ ಬಂದಿದ್ದಾರೆ, ನಾವು ಅದ್ಯಾವುದೋ ಶೆಡ್ ಗೆ ಹೋಗಿದ್ದೆವು, ಅವ್ರೇನೋ ಹಣ ಕೊಟ್ಟಿದ್ದಾರೆ, ನಾವೇನೋ ಪಡೆದು ಬರುತ್ತೇವೆಂದು ಹೇಳುತ್ತಿದ್ದಾರೆ. ನಾವು ಅದರ ಬಗ್ಗೆ ಲಕ್ಷ ಕೊಡುತ್ತಿಲ್ಲ, ಬಿಟ್ಟುಬಿಟ್ಟಿದ್ದೇವೆ. ನಮಗೆ ಬಹಳಷ್ಟು ಜನ ಫೋನ್ ಮಾಡಿ ಕೇಳುತ್ತಿದ್ದಾರೆ. ನಾವು ಯಾರೂ ಅವರನ್ನು ಭೇಟಿ ಮಾಡಿಲ್ಲ, ಅವರು ಯಾರೂ ನಮ್ಮನ್ನು ಭೇಟಿ ಮಾಡಲು ಬಂದಿಲ್ಲ ಎಂದರು.

ನಾವು ಯಾರ ಹತ್ತಿರವೂ ಹತ್ತು ಪೈಸೆ ಹಣ ಇಸ್ಕೊಂಡಿಲ್ಲ. ಅದೇನು ಕಾರು‌ ಬುಕ್‌ ಮಾಡಿದ್ದೇವೆ ಎಂದು ಹಾಕಿದ್ದಾರೆ.  ನಮ್ಮ ಬಳಿ ಹಳೇ ಸ್ಕೂಟರ್ ರಿಪೇರಿ ಮಾಡಿಸಲು ಆಗಿಲ್ಲ.  ಹೀಗೆ ಅದನ್ನು ಫೇಸ್‌ಬುಕ್‌ನಲ್ಲಿ ಹಾಕಿ ಅದು ನಿಜ ಎಂಬಂತಾಗಿದೆ. ಫೇಸ್‌ಬುಕ್ ಅವಾಂತರ ಸೃಷ್ಠಿಯಿಂದ ನೋವು ತಂದಿದೆ. ಕರ್ನಾಟಕದ ಜನತೆಗೆ ನಾವು ಈ‌ ಮೂಲಕ ಸ್ಪಷ್ಟನೆ ನೀಡುತ್ತಿದ್ದೇವೆ ಎಂದರು.



PGK

Post a Comment

Previous Post Next Post