(ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್) ಹಿರಿಯ ಸಾಹಿತಿ ಡಾ. ನಾ.ಡಿಸೋಜ (87) ಅವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಇಂದು ರಾತ್ರಿ 7.50ರ ಹೊತ್ತಿಗೆ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಅವರು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು.
ಸೋಮವಾರ ಮಧ್ಯಾಹ್ನದ ಬಳಿಕ ಸಾಗರದ ಸ್ವಗೃಹದಲ್ಲಿ ಡಾ. ನಾ.ಡಿಸೋಜ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಅವಕಾಶವಿರಲಿದೆ ಎಂದು ಅವರ ಪುತ್ರ ನವೀನ್ ಡಿಸೋಜ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ.
ಇವರು ಬರೆದ ಪುಸ್ತಕ ಮುಳುಗಡೆ ಪದವಿ ಕಾಲೇಜಿನ ಕನ್ನ ಭಾಷೆ ಆಯ್ಕೆ ಮಾಡಿಕೊಂಡವರಿಗೆ ಪಠ್ಯ ಸಹ ಆಗಿತ್ತು. ಇತ್ತೀಚೆಗೆ ಬೆಂಗಳೂರಿಗೆ ಶರಾವತಿ ನದಿ ಕೊಂಡೊಯ್ಯುವ ವಿಷ ಬಂದಾಗ ಇದನ್ನ ವಿರೋಧಿಸಿ ಹೋರಾಟದ ಮುಂಚೂಣಿಯನ್ನ ಹಿಡಿದಿದ್ದರು. ಹೀಗೆ ಮಲೆನಾಡಿಗರ ಸಮಸ್ಯೆ ಎದುರಾದಾಗ ಹೋರಾಟದ ಹಾದಿಯನ್ನ ತೋರಿಸಿಕೊಟ್ಟವರು ನಾ.ಡಿಸೋಜ ಇನ್ನು ನೆನಪು ಮಾತ್ರ