ಸಿದ್ದಾಪುರ ರಸ್ತೆ ಯಡಳ್ಳಿ ಬಳಿ ಬೈಕ್ ಮೇಲಿಂದ ಬಿದ್ದ ಗಾಯಗೊಂಡ ಎನ್ನಲಾಗಿದ್ದ ವ್ಯಕ್ತಿಯನ್ನು ತಟ್ಟಿಕೈ ಗ್ರಾಮದ ಸುಧಾಕರ ನಾಗೇಶ ಭಟ್ ಎಂದು ಗುರುತಿಸಲಾಗಿದೆ.ಗಾಯಾಳುವಿಗೆ ಟಿ ಎಸ್ ಎಸ್ ಆಸ್ಪತ್ರಗೆ ಸೇರಿಸಲಾಗಿದೆ.
*108 ಅವಾಂತರ*
ಬೈಕ್ ಮೇಲಿಂದ ಬಿದ್ದು ಗಾಯಗೊಂಡಿರುವ ವ್ಯಕ್ತಿಯನ್ನು ಕೂಡಲೇ ಆಸ್ಪತ್ರಗೆ ಸೇರಿಸಲು 108 ವಾಹನಕ್ಕೆ ಸಂಪರ್ಕಿಸಿ ಮುಕ್ಕಾಲು ಗಂಟೆ ಬಳಿಕ ಸ್ಥಳಕ್ಕೆ ಬಂದು ಗಾಯಾಳುವನ್ನು ಆಸ್ಪತ್ರಗೆ ಸೇರಿಸಿದ್ದಾರೆ ಎನ್ನುವ ಆಕ್ರೋಶದ ಮಾತುಗಳು ಜನರಿಂದ ಕೇಳಿಬರತೊಡಗಿದೆ.ವಿಚಿತ್ರ ಎಂದರೆ ಈ ವಾಹನಕ್ಕೆ ಸಹಾಯಕರೇ ಇಲ್ಲವಂತೆ.108 ಚಾಲಕನೇ ಬಂದು ಗಾಯಾಳುವಿಗೆ ಜನರ ಸಹಕಾರದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನಂತೆ.ಈ ವಾಹನದಲ್ಲಿ ತುರ್ತು ಚಿಕಿತ್ಸೆಗಾಗಿ ಸಹಾಯಕರು ಇರಲೇ ಬೇಕೆನ್ನುವ ನಿಯಮವಿದೆ.ಆದರೆ ಇಲ್ಲಿ ಸರಕಾರ ನಿಯಮವನ್ನು ಈ ಚಾಲಕ ಮೀರಿದ್ದಾನೊ ಅಥವಾ ಸರಕಾರವೇ ನಿಯಮವನ್ನು ಮೊಟಕುಗೊಳಿಸಿದೆಯೊ ಗೊತ್ತಿಲ್ಲ.ಒಂದು ವೇಳೆ ತುರ್ತು ಚಿಕಿತ್ಸೆಗೆ ಸಹಾಯಕರಿಲ್ಲದೇ ಯಾರದರೂ ಮೃತಪಟ್ಟರೆ ಇದಕ್ಕೆ ಯಾರು ಹೊಣೆ?ಇತ್ತೀಚಿಗಂತೂ 108 ವಾಹನದ ಸೇವೆಯಲ್ಲಿ ಬಾರೀ ಆರೋಪಗಳು ಕೇಳಿ ಬಂದಿದ್ದು ಜಿಲ್ಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.