ಶಿರಸಿ ಅಂಬೇಡ್ಕರ್ ಸರ್ಕಲ್ ನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಇವರ ಪುತ್ಥಳಿ ನಿರ್ಮಾಣಮಾಡಬೇಕೆನ್ನುವ ಬಹುವರ್ಷಗಳ ಕನಸನ್ನು ನನಸನ್ನಾಗಿಮಾಡಲು ರಾಜಕಾರಣಿಗಳು ಅದಿಕಾರಿಗಳು ವಿಫಲರಾಗಿದ್ದಾರೆಂದು ಆರೋಪಿಸಿ ರೊಚ್ಚಿಗೆದ್ದ ಭೀಮಘರ್ಜನೆ ಸಂಘಟನೆಯವರು ಸಂಘಟನೆಯ ಜಿಲ್ಲಾದ್ಯಕ್ಷ ಅರ್ಜುನ್ ಮಿಂಟಿ ನೇತ್ರದಲ್ಲಿ ಅಂಬೇಡ್ಕರ್ ಸರ್ಕಲ್ ಬಳಿ ಮಾನವ ಸರಪಳಿ ನಿರ್ಮಿಸಿ ಟಯರ್ ಸುಟ್ಟು ಬೃಹತ್ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು.ಈ ಸಂದರ್ಭದಲ್ಲಿ ಮಾತನಾಡಿದ ಅರ್ಜುನ್ ಮಿಂಟಿಯವರು ಸಂಸದರು,ಶಾಸಕರು ಮತ್ತು ಜಿಲ್ಲಾದಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ಪುತ್ಥಳಿ ನಿರ್ಮಿಸುವ ಬಗ್ಗೆ ಲಿಖಿತವಾಗಿ ಬರೆದುಕೊಡುವವರೆಗೂ ನಾವು ಪ್ರತಿಭಟನೆ ಕೈಬಿಡುವದಿಲ್ಲ ಎಂದು ಅಕ್ರೋಶ ಭರಿತರಾಗಿ ಹೇಳಿದರು.ಈ ಸಂದರ್ಭದಲ್ಲಿ ಸಂಘಟನೆಯ ರಾಜೇಶ ದೇಶಭಾಗ,ಎಸ್ ಫಕೀರಪ್ಪ, ತಿಲಿಕ್ ಹುಬ್ಬಳ್ಳಿ ಇತರರಿದ್ದರು. ಮಹಿಳೆಯರು ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿದೆ.