(ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್) ಕರ್ನಾಟಕ ಅರಣ್ಯ ಇಲಾಖೆ: 'ಗರುಡಾಕ್ಷಿ' ಆನ್‌ಲೈನ್ FIR ವ್ಯವಸ್ಥೆ ಆರಂಭ!

ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್. ಬೆಂಗಳೂರು, ಜನವರಿ : ಪ್ರಾಣಿ ಸಂಕುಲ ಕಾಪಾಡಲು, ನಾಡನ್ನು ಸುರಕ್ಷಿತವಾಗಿಡಲು ಶ್ರಮಿಸುವ ಕರ್ನಾಟಕ ಅರಣ್ಯ ಇಲಾಖೆಗೆ ಮಹತ್ವದ ಹೆಜ್ಜೆ ಇಟ್ಟಿದೆ. ಇದೇ ಜನವರಿ 7 ರಂದು ವಿನೂತನವಾದ "ಗರುಡಾಕ್ಷಿ" ಆನ್‌ಲೈನ್ ಎಫ್‌ಐಆರ್ ವ್ಯವಸ್ಥೆಯನ್ನು ಪ್ರಾರಂಭಿಸಲು ಮುಂದಾಗಿದೆ. ಈ ಮೂಲಕ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಣಗೊಳಿಸಲು ತೀರ್ಮಾನಿಸಿದೆ.
ಬೆಂಗಳೂರಿನ ವಿಧಾನಸೌಧದ ಸಭಾಂಗಣದಲ್ಲಿ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರು ನಾಳೆ ಜನವರಿ 7 ರಂದು ಮಂಗಳವಾರ ವಿನೂತನ "ಗರುಡಾಕ್ಷಿ" ಆನ್‌ಲೈನ್ ಎಫ್‌ಐಆರ್ ವ್ಯವಸ್ಥೆ ಲೋಕಾರ್ಪಣೆ ಮಾಡಲಿದ್ದಾರೆ. ಆರಂಭಿಕ ಹಂತದಲ್ಲಿ ಇದನ್ನು ಪ್ರಾಯೋಗಿಕವಾಗಿ ನಿರ್ವಹಿಸಲು ತೀರ್ಮಾನಿಸಲಾಗಿದೆ ಎಂದು 'ಇಂಡಿಯಾ ಟುಡೆ' ವರದಿ ಮಾಡಿದೆ.

ಗರುಡಾಕ್ಷಿ: ಏನೆಲ್ಲ ಪ್ರಯೋಜನ

ರಾಜ್ಯದ ಅರಣ್ಯ ಹಾಗೂ ವನ್ಯಜೀವಿ ಕುರಿತು ಅಪರಾಧ ಚಟುವಟಿಕೆಯನ್ನು ಸರಳಗೊಳಿಸಲು, ಎಫ್‌ಐಆರ್ ದಾಖಲಾತಿಯನ್ನು ಡಿಜಿಟಲೀಕರಣಗೊಳಿಸಲು ಹಾಗೂ ಸರ್ಕಾರ ಅಪರಾಧವಾಗದಂತೆ ತಡೆಯಲು, ಜನರಿಗೆ ತ್ವರಿತವಾಗಿ ಎಫ್‌ಐಆರ್ ದಾಖಲಿಸಲು ಅನುಕೂಲವಾಗುವಂತೆ ಈ 'ಗರುಡಾಕ್ಷಿ' ಪೋರ್ಟಲ್ ಜಾರಿಗೆ ತರಲಾಗುವುದು.

ಅರಣ್ಯ ಅಪರಾಧಗಳಿಗೆ ಸಂಬಂಧಿಸಿದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು ಈ ಗರುಡಾಕ್ಷಿ ಆನ್‌ಲೈನ್ ವ್ಯವಸ್ಥೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಪೋರ್ಟಲ್ ಅಪರಾಧ ಎದುರಿಸಲು ಸರ್ಕಾರಕ್ಕೆ ಉತ್ತೇಜನ ನೀಡಲಿದೆ ಎಂದು ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.

ಗರುಡಾಕ್ಷಿ' ತಂತ್ರಾಂಶವನ್ನು ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾ (WTI) ಸಹಯೋದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಇಡ ಅರಣ್ಯ ಅಪರಾಧ ಪ್ರಕರಣಗಳನ್ನು ಆನ್‌ಲೈನ್‌ನಲ್ಲಿ ನಿರ್ವಹಣೆ ಮಾಡಬಹುದಾಗಿದೆ. ಈ ತಂತ್ರಾಂಶದಿಂದ ಆನ್‌ಲೈನ್ ನಿರ್ವಹಣೆ ಮತ್ತಷ್ಟು ಸರಳವಾಗಲಿದೆ.

ಈ ಹಿಂದೆ ಸಚಿವ ಈಶ್ವರ್ ಖಂಡ್ರೆ ಅವರು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಎಫ್‌ಐಆರ್ ಡಿಜಿಟಲ್‌ ಮಾಡಲು ಸೂಚನೆ, ಸಲನೆ ನೀಡಿದ್ದರು. ಅದರ ಭಾಗವಾಗಿ ಈ ಗರುಡಾಕ್ಷಿ ತಂತ್ರಾಂಶ ರೂಪಗೊಂಡು, ಇದೀಗ ಕಾರ್ಯಾರಂಭಿಸಲು ಸಿದ್ಧಗೊಂಡಿದೆ.

PGK

Post a Comment

Previous Post Next Post