ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್: ಕಾರವಾರ : ಲಂಚ ಪಡೆಯುವ ವೇಳೆ ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜಕ ಸದಸ್ಯ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕಾರವಾರ ನಗರ ಅಭಿವೃದ್ಧಿ ಪ್ರಾಧಿಕಾರದ ಯೋಜಕ ಸದಸ್ಯ ಶಿವಾನಂದ ತಾಮ್ರೆಣ್ಣನವರ ಬಲೆಗೆ ಬಿದ್ದ ಅಧಿಕಾರಿ. ಕಾರವಾರ ನಗರಾಭಿವೃದ್ಧಿ ಕಚೇರಿಯಲ್ಲಿ ಅಪರಾಹ್ನ ಈ ದಾಳಿ ನಡೆದಿತ್ತು .
ಟೌನ್ ಪ್ಲಾನಿಂಗ್ ಪ್ಲಾಟ್ ಒಂದರ ಯೋಜನೆ ಅನುಮೋದನೆಗೆ
10 ಸಾವಿರ ರೂ. ಹಣ ಲಂಚ ಪಡೆಯುವ ವೇಳೆ
ಲೋಕಾಯುಕ್ತ ಎಸ್ಪಿ ಕುಮಾರಚಂದ್ ನೇತೃತ್ವದಲ್ಲಿ, ಲೋಕಾಯುಕ್ತ ಡಿವೈಎಸ್ಪಿ, ಹಾಗೂ ಸಿಬ್ಬಂದಿ , ಹೆಡ್ ಕಾನ್ಸಸ್ಟೇಬಲ್ ಶಿವಕುಮಾರ್ ಸೇರಿ ದಾಳಿ ಮಾಡಿದರು.
ನಾಗರಿಕ ಪ್ರಶಾಂತ್ ನಾಯ್ಕ ಎಂಬುವವರಿಂದ ಶಿವಾನಂದ ತಾಮ್ರೆಣ್ಣನವ ಲಂಚದ ಹಣ ಪಡೆಯುವ ವೇಳೆ ಲೋಕಾಯುಕ್ತ ದಾಳಿ ನಡೆಸಿ, ಬಂಧಿಸಿದ್ದಾರೆ.