( ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್)ಕೇಣಿ ಬಂದರು ಸರ್ವೇಗೆ ತೀವ್ರ ವಿರೋಧ – ಸಮುದ್ರಕ್ಕೆ ಹಾರಿ ಪ್ರತಿಭಟನಾಕಾರ ಆಕ್ರೋಶ!

 ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್..

ಕೇಣಿ ಬಂದರು ಸರ್ವೇಗೆ ತೀವ್ರ ವಿರೋಧ – ಸಮುದ್ರಕ್ಕೆ ಹಾರಿ ಪ್ರತಿಭಟನಾಕಾರ ಆಕ್ರೋಶ.

ಕಾರವಾರ: ಕೇಣಿ ಗ್ರೀನ್ ಫೀಲ್ಡ್ (Keni Green Field) ಖಾಸಗಿ ಬಂದರು ಯೋಜನೆಯ ಸಮೀಕ್ಷೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ನಿಷೇಧಾಜ್ಞೆ ನಡುವೆಯೇ ಪ್ರತಿಭಟನಾನಿರತ ಮೀನುಗಾರರು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಎಸ್.ಡಬ್ಲ್ಯು ಕಂಪನಿಯು 4,119 ಕೋಟಿ ರೂ. ವೆಚ್ಚದಲ್ಲಿ ಉತ್ತರ ಕನ್ನಡ (Uttar Kannada) ಜಿಲ್ಲೆಯ ಅಂಕೋಲದ (Ankola)  ಕೇಣಿಯಲ್ಲಿ ಗ್ರೀನ್ ಫೀಲ್ಡ್ ಖಾಸಗಿ ಬಂದರು ಯೋಜನೆಯ ಸರ್ವೇ ಕಾರ್ಯಕ್ಕೆ ಮುಂದಾಗಿದೆ. ಇದಕ್ಕೆ ಅನುಮತಿ ನೀಡಿದ ಜಿಲ್ಲಾಡಳಿತದ ಈ ನಡೆಯನ್ನು ಖಂಡಿಸಿ ಮೀನುಗಾರರು ಪ್ರತಿಭಟನೆ ನಡೆಸಿದ್ದಾರೆ. 

ಈ ವೇಳೆ ಸರ್ವೇ ಖಂಡಿಸಿ ಮೂವರು ಮಹಿಳೆಯರು ಸಮುದ್ರಕ್ಕೆ ಹಾರಿದ್ದಾರೆ. ಮೂವರು ಮಹಿಳೆಯರನ್ನ ಪೊಲೀಸ್ ಸಿಬ್ಬಂದಿ ರಕ್ಷಿಸಿದ್ದಾರೆ. ಸರ್ವೇ ಕಾರ್ಯ ನಿಲ್ಲಿಸುವವರೆಗೂ ಉಗ್ರ ಪ್ರತಿಭಟನೆ ಮಾಡುತ್ತೇವೆ. ಬಂದರು ಯೋಜನೆಯನ್ನು ಕೈಬಿಡದಿದ್ದರೇ ಮತ ಬಹಿಷ್ಕಾರದ ಜೊತೆ ಸಾಮೂಹಿಕವಾಗಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕಡಲ ತೀರದಲ್ಲಿ ಸೇರಿದ ನೂರಾರು ಮೀನುಗಾರಿಕಾ ಮಹಿಳೆಯರ



PGK

Post a Comment

Previous Post Next Post