ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್ ಗದಗ:ಹಾಗೂ ಉತ್ತರ ಕನ್ನಡ: ಗದಗ–ಬೆಟಗೇರಿ ಅವಳಿ ನಗರದಲ್ಲಿ ಮೀಟರ್ ಬಡ್ಡಿ ದಂಧೆಕೋರರ ಮನೆಗಳ ಮೇಲೆ ಏಕಕಾಲಕ್ಕೆ ಪೊಲೀಸರು ದಿಢೀರ್ ದಾಳಿ ಮಾಡಿದ್ದಾರೆ. ದಾಳಿ ವೇಳೆ ನಗದು, ಬಾಂಡ್, ಖಾಲಿ ಚೆಕ್ ಜಪ್ತಿ ಮಾಡಿದ್ದಾರೆ. ಕೆಲವು ವ್ಯಕ್ತಿಗಳು ಅಕ್ರಮವಾಗಿ ಸಾಲಕ್ಕೆ ಹೆಚ್ಚಿನ ಬಡ್ಡಿ ವಸೂಲಿ ಮಾಡುವ ಮೂಲಕ ಜನರನ್ನು ಪೀಡಿಸುವ ಬಗ್ಗೆ ದೂರುಗಳನ್ನು ಆಧರಿಸಿ ದಾಳಿ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
12 ಸ್ಥಳಗಳಲ್ಲಿ ದಾಳಿ ನಡೆಸಿದ್ದೇವೆ. ದಾಳಿ ವೇಳೆ ನಗದು, ಖಾಲಿ ಚೆಕ್ , ಬಾಂಡ್ ಮತ್ತು ರಿಜಿಸ್ಟಾರ್ ವಶಕ್ಕೆ ಪಡೆದಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಹಣ ವಸೂಲಾತಿಗೆ ಸಾಲಗಾರರಿಗೆ ಬೆದರಿಕೆ ಹಾಕುತ್ತಿದ್ದವರ ವಿರುದ್ಧವೂ ಕ್ರಮ ಕೈಗೊಂಡಿದ್ದೇವೆ. ವಿವರವಾದ ಪರಿಶೀಲನೆ ನಡೆಯುತ್ತಿದೆ ಎಂದು ಅಧಿಕಾರಿ ಸುದ್ದಿಗಾರರಿಗೆ ತಿಳಿಸಿದರು.
ಲೇವಾದೇವಿದಾರ ಸಂಗಮೇಶ ದೊಡ್ಡಣ್ಣನವರ್ ಅವರಿಂದ ರೂ. 26.57 ಲಕ್ಷ ರೂ. ನಗದು, ಖಾಲಿ ಚೆಕ್, ಬಾಂಡ್‌ಗಳು ಮತ್ತು ರಿಜಿಸ್ಟರ್ ವಶಕ್ಕೆ ಪಡೆಯಲಾಗಿದೆ.
ಲೇವಾದೇವಿದಾರ ಸಂಗಮೇಶ ದೊಡ್ಡಣ್ಣನವರ್ ಅವರಿಂದ ರೂ. 26.57 ಲಕ್ಷ ರೂ. ನಗದು, ಖಾಲಿ ಚೆಕ್, ಬಾಂಡ್‌ಗಳು ಮತ್ತು ರಿಜಿಸ್ಟರ್ ವಶಕ್ಕೆ ಪಡೆಯಲಾಗಿದೆ.
ಲೇವಾದೇವಿದಾರರಾದ ಯುವರಾಜ್ ಯಲ್ಲಪ್ಪ ಕರವೂರು, ರವಿ ಕೌಚಗೇರಿ ಮತ್ತು ಮಂಜುನಾಥ್ ಎಂಬುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಇವರಿಂದ ನಗದು, ಖಾಲಿ ಚೆಕ್, ಬಾಂಡ್, ರಿಜಿಸ್ಟರ್, ಬ್ಯಾಂಕ್ ಪಾಸ್ ಬುಕ್ ಪತ್ತೆಯಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಉತ್ತರ ಕನ್ನಡ ಪೊಲೀಸರೂ ಇದೇ ಕ್ರಮ ಕೈಗೊಂಡಿದ್ದಾರೆ. ಮೈಕ್ರೋ ಫೈನಾನ್ಸ್ ಕಂಪನಿಗಳ ಸಿಬ್ಬಂದಿಯಿಂದ ಚಿತ್ರಹಿಂಸೆ ನೀಡಿದ ಒಂಬತ್ತು ಪ್ರಕರಣಗಳಲ್ಲಿ 39 ಜನರನ್ನು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಡಗೋಡು ಪಟ್ಟಣದಲ್ಲಿ ಹೆಚ್ಚಿನ ಜನರನ್ನು ಬಂಧಿಸಲಾಗಿದೆ.