(ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್) ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಸಾಗವಾನಿ ಮರಗಳ್ಳರ ಮೇಲೆ ದಾಳಿ!

 ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್


 ಶಿರಸಿ ತಾಲೂಕು ಶಿವಳ್ಳಿ ಗ್ರಾಮದ ಅರಣ್ಯ ಸ.ನಂ-139ರಲ್ಲಿ ಅನಧಿಕೃತವಾಗಿ ಸಾಗವಾನಿ ಜಾತಿಯ ಮರವನ್ನು ಕಡಿದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ  ಡಾ|| ಅಜ್ಜಯ್ಯ (ಜಿ ಆರ್, ಭಾ.ಅ.ಸೇ,) ಮತ್ತು ಎಸ್. ಎಸ್. ನಿಂಗಾಣಿ, (ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಶಿರಸಿ ಉಪ ವಿಭಾಗ, ಶಿರಸಿ) ಇವರ ಮಾರ್ಗದರ್ಶನದಲ್ಲಿ ಶ್ರೀಮತಿ ಭವ್ಯಾ ನಾಯ್ಕ, (ವಲಯ ಅರಣ್ಯಾಧಿಕಾರಿ, ಬನವಾಸಿ ವಲಯ, ಬನವಾಸಿ) ಇವರ ನೇತೃತ್ವದಲ್ಲಿ ಸ್ಥಳ ಪರಿಶೀಲಿಸಿ ಸಾಗವಾನಿ ಜಾತಿಯ 4 ತುಂಡುಗಳನ್ನು ಜಪ್ತಿ ಪಡಿಸಿ ಆರೋಪಿತರಾದ ಮಂಜುನಾಥ ಕೃಷ್ಣ ಮೋಗೇರ (39 ವರ್ಷ ಸಾ||ಕುದರೆಮನೆ, ಶಿವಳ್ಳಿ ಗ್ರಾಮ ಬೊಪ್ಪನಳ್ಳಿ, ತಾ|| ಶಿರಸಿ,),ಕೃಷ್ಣ ರಾಮಚಂದ್ರ ಪಟಗಾರ ( 33 ವರ್ಷ ,ಕುದರೆಮನೆ, ಶಿವಳ್ಳಿ ಗ್ರಾಮ, ಪೋ||ಬೊಪ್ಪನಳ್ಳಿ, ತಾ|| ಶಿರಸಿ), ಶಾಂತಪ್ಪ ರಾಮಣ್ಣ ತಳವಾರ ಅಂದಾಜು :45, ಸಾ|| ದಾಸನಕೊಪ್ಪ ಇವರ ಮೇಲೆ  ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಕಾರ್ತಿಕ್ ನಾರ್ವೆಕರ್ (ಉಪ ವಲಯ ಅರಣ್ಯಾಧಿಕಾರಿ, ಎಕ್ಕಂಬಿ  ಶಾಖೆ) ,  ಗಸ್ತು ಅರಣ್ಯ ಪಾಲಕರಾದ  ಮಲ್ಲಿಕಾರ್ಜುನ ಗುದಗಿ ,ಭೋಜು ಚವ್ಹಾಣ  ಹಾಗೂ ಸಿಬ್ಬಂದಿಗಳಾದ  ಶ್ರೀಧರ ನಾಯ್ಕ ವಾಹನ ಚಾಲಕ ನವೀನ ನಾಯ್ಕ  ಪಾಲುಗೊಂಡಿದ್ದರು.


PGK

Post a Comment

Previous Post Next Post