ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್..
ಲೋಕಾಯುಕ್ತ ಭರ್ಜರಿ ಬೇಟೆ; ಜಗನ್ನಾಥ್ ಮನೆಯಲ್ಲಿ 1 ಕೆಜಿಗೂ ಹೆಚ್ಚು ಚಿನ್ನಾಭರಣ, ಬೆಳ್ಳಿ ಪತ್ತೆ..!
ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಕಳಂಕಿತ ಅಧಿಕಾರಿಗಳ ಚಳಿ ಬಿಡಿಸಿದ್ದಾರೆ. ಒಟ್ಟು 8 ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿದ್ದು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಭ್ರಷ್ಟಾಧಿಕಾರಿಗಳ ಮನೆ, ಕಚೇರಿ ಹಾಗೂ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಅಂತೆಯೇ ಕಲಬುರಗಿಯ ಅಧಿಕಾರಿ ಜಗನ್ನಾಥ್ ಮನೆಯಲ್ಲಿ ಖಜಾನೆ ಪತ್ತೆ ಆಗಿದೆ. 1 ಕೆಜಿಗೂ ಹೆಚ್ಚು ಚಿನ್ನಾಭರಣ, ಬೆಳ್ಳಿ ವಸ್ತುಗಳು, ನಗದು ಪತ್ತೆಯಾಗಿದೆ. ಜಮೀನು, ಮನೆ, ಸೇರಿದಂತೆ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಜಗನ್ನಾಥ್ ರಾಜ್ಯ ಹೆದ್ದಾರಿ ಅಭಿವೃಧ್ದಿ ಯೋಜನಾಧಿಕಾರಿ ಆಗಿದ್ದಾರೆ.
ಎಲ್ಲೆಲ್ಲಿ ದಾಳಿ?
- ಡಿಪಿಎಆರ್ ಚೀಫ್ ಇಂಜಿನಿಯರ್ T.D ನಂಜುಂಡಪ್ಪ
- BBMP ಎಕ್ಸೀಕ್ಯೂಟಿವ್ ಇಂಜಿನಿಯರ್ H.B ಕಲ್ಲೇಶಪ್ಪ
- ಕೋಲಾರ ಟೌನ್ ಬೆಸ್ಕಾಂ ಎಇಇ ಜಿ.ನಾಗರಾಜ್
- ಕಲಬುರಗಿ ರಾ. ಹೆದ್ದಾರಿ ಅಭಿವೃದ್ಧಿ ಅಧಿಕಾರಿ ಜಗನ್ನಾಥ್
- ದಾವಣಗೆರೆ ಡಿಸ್ಟಿಕ್ ಸ್ಟ್ಯಾಟಿಕಲ್ ಆಧಿಕಾರಿ G.S ನಾಗರಾಜು
- ತುಮಕೂರು ತಾವರಕೆರೆ ಚೀಫ್ ಮೆಡಿಕಲ್ ಆಫೀಸರ್ ಡಾ.ಜಗದೀಶ್
- ಬಾಗಲಕೋಟೆ ಪಂ. ರಾಜ್ ಇಂಜಿನಿಯರಿಂಗ್ FDA ಮಲ್ಲಪ್ಪ ಸಾಬಣ್ಣ
- ವಿಜಯಪುರ ಹೌಸಿಂಗ್ ಬೋರ್ಡ್ FDA ಶಿವಾನಂದ್ ಶಿವಶಂಕರ್