ಕರ್ನಾಟಕ ಸರ್ಕಾರಿ ಭೂಮಿ ಉಳಿಸಿ ಹೋರಾಟ ಸಮಿತಿ ಪ್ರಯತ್ನಕ್ಕೆ ಫಲ:
ಚಿಕ್ಕಮಂಗಳೂರು, ಕಡೂರು ಮತ್ತು ಮೂಡಿಗೆರೆಯಲ್ಲಿ ನಡೆದಿದ್ದ ಆಕ್ರಮ ಭೂ ಮಂಜೂರಾತಿ ಪ್ರಕಣದಲ್ಲಿ 483 ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಿರುವ ಕಂದಾಯ ಇಲಾಖೆ. 1,412 ಎಕರೆಯಷ್ಟು ಭೂಮಿ ಸರ್ಕಾರದ್ದು ಎಂದು ಆದೇಶ ಹೊರಡಿಸಿದೆ ಇನ್ನೂ 3,682 ಪ್ರಕರಣಗಳ ವಿಚಾರಣೆಯನ್ನು ಇಲಾಖೆ ನಡೆಸುತ್ತಿದೆ.
ಎರಡು ತಾಲೂಕಿನಲ್ಲಿ ಅಕ್ರಮ ಭೂಮಂಜೂರಾತಿ ಬಗ್ಗೆ ತನಿಖೆ ನಡೆಸಲು 2023 ಆಗಸ್ಟ್ ನಲ್ಲಿ 13 ತಶೀಲ್ದಾರಗಳ ತಂಡವನ್ನು ಸರ್ಕಾರ ರಚನೆ ಮಾಡಿದ್ದು ತನಿಖೆ ನಡೆಸಿ ಸರ್ಕಾರಕ್ಕೆ ತಂಡ ವರದಿ ಸಲ್ಲಿಸಿದ್ದು, ಅದರ ಪ್ರಕಾರ 10,598 ಎಕರೆ ಅಕ್ರಮ ಮಂಜೂರಾತಿ ಎಂಬುದನ್ನು ಪತ್ತೆ ಮಾಡಿತು. ಕಡೂರು ತಾಲೂಕಿನಲ್ಲಿ 2,243 ಪ್ರಕರಣದಲ್ಲಿ 5,238 ಎಕರೆ ಮೂಡಿಗೆರೆ ತಾಲೂಕಿನ 1,961 ಪ್ರಕರಣಗಳಲ್ಲಿ 5,360 ಎಕರೆಯನ್ನು ಅಕ್ರಮ ಮಂಜೂರಾತಿ ಎಂದು ತನಿಕಾ ತಂಡ ಗುರುತಿಸಿತ್ತು.
ಎರಡು ತಾಲೂಕಿನಲ್ಲಿ ಪ್ರತಿಯೊಂದು ಮಂಜೂರಾತಿಯನ್ನು ಪ್ರತ್ಯೇಕವಾಗಿ ಇಬ್ಬರು ಉಪ ವಿಭಾಗಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ಪೈಕಿ 483 ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಿದ್ದಾರೆ. ಮೂಡಿಗೆರೆ ತಾಲೂಕಿನಲ್ಲಿ 404 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು 1,242 ಎಕರೆಯನ್ನು ಸರ್ಕಾರಿ ಜಾಗ ಎಂದು ಆದೇಶ ಹೊರಡಿಸಲಾಗಿದೆ. ಇದರಲ್ಲಿ 815 ಎಕರೆ ಅರಣ್ಯ ಇಲಾಖೆಯ ಜಾಗವಾಗಿದ್ದರೆ 427 ಎಕರೆ ಕಂದಾಯ ಜಾಗ ಎಂದು ಗುರುತಿಸಲಾಗಿದೆ.
ಕಡೂರು ತಾಲೂಕಿನಲ್ಲಿ 79 ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಲಾಗಿದ್ದು, 200 ಎಕರೆಯನ್ನು ಸರ್ಕಾರಿ ಜಾಗ ಎಂದು ಆದೇಶ ಹೊರಡಿಸಲಾಗಿದೆ . ಅಷ್ಟು ಕಂದಾಯ ಜಾಗವೇ ಆಗಿದ್ದು ಅರಣ್ಯ ಭೂಮಿಯಲ್ಲಿನ ಮಂಜೂರಾತಿ ಕುರಿತು ವಿಚಾರಣೆ ನಡೆಯುತ್ತಿದೆ.
ಕಡೂರು ತಾಲೂಕಿನಲ್ಲಿ 79 ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಲಾಗಿದ್ದು 200 ಎಕರೆಯನ್ನು ಸರ್ಕಾರಿ ಜಾಗ ಎಂದು ಆದೇಶ ಹೊರಡಿಸಲಾಗಿದೆ. ಅಷ್ಟು ಕಂದಾಯ ಜಾಗ ಆಗಿದ್ದು . ಅರಣ್ಯ ಭೂಮಿಯಲ್ಲಿನ ಮಂಜೂರಾತಿ ಕುರಿತು ವಿಚಾರಣೆ ನಡೆಯುತ್ತಿದೆ.
ಮತ್ತೊಂದಡೆ ಅಕ್ರಮ ಮಂಜೂರಾತಿ ಎಂಬುದನ್ನು ತನಿಕ ತಂಡ ಗುರುತಿಸಿರುವ ಅಷ್ಟು ಜಾಗದ ಪಹಣಿಗಳ ಕಾಲo 11 ರಲ್ಲಿ ಅಕ್ರಮ ಮಂಜೂರಾತಿ ವ್ಯಾಜ್ಯ ತನಿಕ ಹಂತದಲ್ಲಿದೆ ಎಂದು ನಮೂದಿಸಲಾಗುತ್ತಿದೆ. ಹೀಗೆ ನಮೂದಾದ ಪಹಣಿಗಳ ಜಾಗದ ಪರಬಾರೆ, ಖಾತೆ ಬದಲಾವಣೆ ಸೇರಿ ಎಲ್ಲ ರೀತಿಯ ವೈವಾಟಿಗೆ ತಡೆ ಬಿದ್ದಿದೆ .ಕಡೂರು ತಾಲೂಕಿನಲ್ಲಿ ಈ ರೀತಿಯ 4.341 ಎಕರೆಗೆ ಸಂಬಂಧಿಸಿದ 1.934 ಪಹಣಿ ಮೂಡಿಗೆರೆ ತಾಲೂಕಿನ 3196 ಎಕರೆಗೆ ಸಂಬಂಧಿಸಿದ 1,079 ವಿಶಿಷ್ಟ ಪಹಣಿಗಳ ಮೇಲೆ ವ್ಯಾಜ್ಯ ಎಂದು ನಮೂದಿಸಲಾಗಿದೆ .