ಶಿರಸಿ ಕೇಂದ್ರ ಬಸ್ ನಿಲ್ದಾಣ ಉದ್ಘಾಟಿಸುವುದರ ಮೂಲಕ ಶಿರಸಿ ಜನತೆ ಕಂಡ ಕನಸನ್ನು ಇಡೇರಿಸಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ.ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ,ಶಾಸಕರುಗಳಾದ ಭೀಮಣ್ಣ ಟಿ ನಾಯ್ಕ,ಶಿವರಾಮ್ ಹೆಬ್ಬಾರ್ ಇತರರಿದ್ದರು.
ಶಿರಸಿ ಕೇಂದ್ರ ಬಸ್ ನಿಲ್ದಾಣ ಉದ್ಘಾಟಿಸಿ ಮೊದಲಿಗೆ ಮಾತನಾಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರವರು ಜನರು ಎನನ್ನು ನಂಬಿ ಕಾಂಗ್ರೆಸ್ ಪಕ್ಷವನ್ನು ಅದಿಕಾರಕ್ಕೆ ತಂದಿದ್ದಾರೊ ಅದನ್ನು ಪಕ್ಷ ಪ್ರಮಾಣಿಕವಾಗಿ ಇಡೇರಿಸಿದೆ ಎಂದರು.
ನಮ್ಮ ರಾಜ್ಯದಲ್ಲಿ ಈ ಮೊದಲು ಪ್ರತಿದಿನ ಸುಮಾರು 80 ಸಾವಿರ ಜನರು ಬಸ್ ಸಂಚಾರ ಮಾಡುತ್ತಿದ್ದರು.ಆದರೆ ಶಕ್ತಿ ಯೋಜನೆ ಬಂದ ಮೇಲೆ ಪ್ರತಿದಿನ ಒಂದು ಕೋಟಿಗೂ ಹೆಚ್ಚಿನ ಜನರು ಅದರಲ್ಲೂ ಮುಖ್ಯವಾಗಿ ಮಹಿಳೆಯರೇ ಹೆಚ್ಚು ಓಡಾಡುವಂತಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರು ಈಗಷ್ಟೇ ಶಿರಸಿ ಕೇಂದ್ರ ಬಸ್ ನಿಲ್ದಾಣ ಉದ್ಘಾಟಿಸಿ ಮಾತನಾಡುತ್ತಿದ್ದಾರೆ.ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಂಮಕಾಳ ವೈದ್ಯ, ಶಾಸಕರುಗಳಾದ ಭೀಮಣ್ಣ ನಾಯ್ಕ,ಶಿವರಾಮ್ ಹೆಬ್ಬಾರ್, ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ,ಸಹಾಯಕ ಆಯುಕ್ತರಾದ ಕು.ಕಾವ್ಯರಾಣಿ ಇತರರಿದ್ದರು