ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್
ಉತ್ತರ ಕನ್ನಡ/ಸಿದ್ದಾಪುರ -: ಪಟ್ಟಣ ಪಂಚಾಯತ ವ್ಯಾಪ್ತಿಯ ಸಾರ್ವಜನಿಕರಿಗೆ ಶಾಶ್ವತ ಕುಡಿಯುವ ನೀರು ಪೂರೈಸುವ ಯೋಜನೆಗೆ ಶಾಸಕ ಭೀಮಣ್ಣ ನಾಯ್ಕ ಅವರ ವಿಶೇಷ ಪ್ರಯತ್ನದಿಂದಾಗಿ *51.50 ಕೋಟಿ ರೂ ಅನುದಾನ ಮಂಜೂರಾಗಿದೆ*.
ಸಿದ್ದಾಪುರ ಪಟ್ಟಣ ವಾಸಿಗಳಿಗೆ ತಾಲೂಕಿನ ಅರೆಂದೂರು ನಾಲಾದಿಂದ ನೀರು ಪೂರೈಸಲಾಗುತಿತ್ತು. ಕಳೆದ ಬೇಸಿಗೆಯಲ್ಲಿ ನೀರಿನ ಅಭಾವದಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಸಿದ್ದಾಪುರ ಪಟ್ಟಣದ ಜನತೆಗೆ ಶಾಸ್ವತ ಕುಡಿಯುವ ನೀರು ಒದಗಿಸುವ ಸಲುವಾಗಿ ಶರಾವತಿಯಿಂದ ನೀರು ತರುವ ಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ನಾಲ್ಕೈದು ವರ್ಷದಿಂದ ನೆನೆಗುದಿಗೆ ಬಿದಿದ್ದ ಯೋಜನೆಗೆ ಶಾಸಕ ಭೀಮಣ್ಣ ನಾಯ್ಕ ಅವರು ಮುತುವರ್ಜಿ ವಹಿಸಿ ನಗರಾಭಿವೃದ್ಧಿ ಇಲಾಖೆ ಸಚಿವರಾದ ಭೈರತಿ ಸುರೇಶ ಅವರ ಮೇಲೆ ಒತ್ತಡ ತಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಅನುದಾನ ಮಂಜೂರುಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅನುದಾನ ಮಂಜೂರಿಗೆ ಸೂಕ್ತ ನಿರ್ದೇಶನ ನೀಡಿ ಸಹಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ ಅವರಿಗೆ ಶಾಸಕ ಭೀಮಣ್ಣ ನಾಯ್ಕ ಕೃತಜ್ಷತೆ ಸಲ್ಲಿಸಿದ್ದಾರೆ.ನಿನ್ನೆ ಕಾನಸೂರ್ ನಲ್ಲಿ ಸಬ್ ಗ್ರಿಡ್ ನಿರ್ಮಿಸಲು 26.87 ಕೋಟಿ ಬಿಡುಗಡೆಗೊಳಿಸಿರುವದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.