.* ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್* ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ (Dandeli) ಗಾಂಧಿನಗರದ ಅರ್ಷದ್ ಖಾನ್ ಎಂಬಾತನ ಮನೆಯಲ್ಲಿ 500 ರೂ. ಮುಖಬೆಲೆಯ 14 ಕೋಟಿ ರೂ.ನಷ್ಟು ನಕಲಿ ನೋಟುಗಳು (Duplicate Note) ಪತ್ತೆಯಾಗಿದೆ.
ಸ್ಥಳೀಯರೊಬ್ಬರು ನೀಡಿದ ಮಾಹಿತಿ ಮೇರೆಗೆ ದಾಂಡೇಲಿ ಪೊಲೀಸರು (Dandeli Police) ಅರ್ಷದ್ ಖಾನ್ ಎಂಬಾತನ ಮನೆಗೆ ತೆರಳಿ ಪರಿಶೀಲನೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದಾಗ ಭಾರತೀಯ ರಿಸರ್ವ್ ಬ್ಯಾಂಕ್ ಬರಹ ಇಲ್ಲದ, ಗವರ್ನರ್ ಸಹಿ ಇಲ್ಲದ ನೋಟುಗಳು ಪತ್ತೆಯಾಗಿದೆ. ಅಲ್ಲದೇ ನೋಟುಗಳ ಮೇಲೆ ʻಮೂವಿ ಶೂಟಿಂಗ್ ಪರ್ಪಸ್ʼ ಎಂದೂ ಸಹ ಬರೆದಿರುವುದು ಬೆಳಕಿಗೆ ಬಂದಿದೆ.
ಇನ್ನೂ ನೋಟಿನ ಸಂಖ್ಯೆಯಲ್ಲಿ ಸೊನ್ನೆ ಅಷ್ಟೇ ನಮೂದು ಮಾಡಲಾಗಿದ್ದು ಯಾವ ಉದ್ದೇಶಕ್ಕಾಗಿ ಈ ನೋಟುಗಳನ್ನು ಬಳಸಲಾಗುತ್ತಿದೆ ಅನ್ನೋದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೇ ಮನೆಯ ಮಾಲೀಕ ಅರ್ಷದ್ ಖಾನ್ ಕಳೆದ ಒಂದು ತಿಂಗಳಿಂದ ಘಟನಾ ಸ್ಥಳಕ್ಕೆ ಆಗಮಿಸಿಯೇ ಇಲ್ಲ. ಆದ್ದರಿಂಧ ಇಷ್ಟೊಂದು ನೋಟುಗಳು ಯಾವುದಕ್ಕೆ ಬಳಕೆ ಮಾಡಲು ಸಂಗ್ರಹಿಸಲಾಗಿದೆ ಎಂಬುದು ನಿಗೂಢವಾಗಿದೆ.