ಮಾಹಿತಿ ನಿರಾಕರಣೆ: ಸರ್ಕಾರದ ಕಾಯ್ದೆ ಪ್ರಕಾರವಾಗಿ ಸ್ಥಾಪನೆಯಾದ ಇಲಾಖೆ ಮಂಡಳಿ ಮಾಹಿತಿ ಹಕ್ಕು ಅಧಿನಿಯಮ 2005 (2)ರ ಪ್ರಕಾರವಾಗಿ ಅವುಗಳು ಸಾರ್ವಜನಿಕ ಪ್ರಾಧಿಕಾರವಾಗಿವೆ. (ಸಾರ್ವಜನಿಕರು ಕೋರುವ ಮಾಹಿತಿಯನ್ನು ನೀಡಬೇಕು) ನಾವು ಅನೇಕ ವರ್ಷಗಳಿಂದ ಮಾಹಿತಿಯನ್ನು ಕೇಳುತ್ತಿದ್ದೇವೆ. ಅವರು ಇದು ಸರ್ಕಾರಿ ಸಂಸ್ಥೆಯೇ ಅಲ್ಲ. ಒಂದು ಸ್ವತಂತ್ರ ಸಂಸ್ಥೆ, ಸರ್ಕಾರಕ್ಕೂ ಇದಕ್ಕೂ ಸಂಬಂಧವಿಲ್ಲ, ನಾವು ಸರ್ಕಾರದಿಂದ ಯಾವುದೇ ಅನುದಾನ ಪಡೆಯುವುದಿಲ್ಲ ಎಂದು ಹೇಳಿ ಮಾಹಿತಿ ನಿರಾಕರಿಸಿದ್ದಾರೆ ಎಂದು ಹೇಳಿದರು.
2023ರ ಅಕ್ಟೋಬರ್ನಲ್ಲಿ ಮಾಹಿತಿಗಾಗಿ ಅರ್ಜಿ:ಅರಮನೆಯ ಪ್ರಾಚ್ಯವಸ್ತುಗಳು ಹಾಗೂ ಮೌಲ್ಯಯುತ ವಸ್ತುಗಳು ಇರುವ ಮಾಹಿತಿಯನ್ನು ಒಳಗೊಂಡ ಇನ್ವೆಂಟ್ರಿ ಪಟ್ಟಿ ಇದೆ. ಅದರ ಬಗ್ಗೆ ಏನಿತ್ತು? ಏನಿಲ್ಲಾ? ಎಂಬುದರ ಬಗ್ಗೆ ಕುತೂಹಲವಿತ್ತು. 2023 ಅಕ್ಟೋಬರ್ನಲ್ಲಿ ಮಾಹಿತಿ ಹಕ್ಕು ಕಾಯ್ದೆ ಕೆಳಗಡೆ ಒಂದು ಅರ್ಜಿಯನ್ನು ಹಾಕಿದೆ, ಉತ್ತರ ಬರಲಿಲ್ಲ. ನಂತರ 30 ದಿನಗಳು ಕಾದು, ಜಿಲ್ಲಾಧಿಕಾರಿಗಳಿಗೆ ಪ್ರಥಮ ಅಫೀಲ್ ಹಾಕಿದೆ. ಒಂದು ವರ್ಷ ಕಾದೆ. ನಾನು ಕರ್ನಾಟಕ ಮಾಹಿತಿ ಹಕ್ಕು ಆಯೋಗಕ್ಕೆ 2ನೇ ಮನವಿ ಸಲ್ಲಿಸಿದೆ. ಅವರು 4 ಬಾರಿ ತಿರಸ್ಕಾರ ಮಾಡಿದ್ದಾರೆ ಎಂದು ತಿಳಿಸಿದರು.
ಮಾಹಿತಿ ಹಕ್ಕು ಆಯುಕ್ತರನ್ನು ಭೇಟಿಯಾಗಿ ಅವರಿಗೆ ವಿವರಿಸಿದೆ. ಅವರು ಒಪ್ಪಿಕೊಂಡು, ವಿಚಾರಣೆ ನಡೆಸಿದರು. ಮೂರು ಹಿಯರಿಂಗ್ ನಡೆದು, ಅವರು ಸುಮಾರು 12 ಇಲಾಖೆಗಳಿಂದ ಲಿಖಿತ ವಿವರಣೆಯನ್ನು ಕೇಳಿದರು. ಅರಮನೆ ಆಡಳಿತ ಮಂಡಳಿಯವರು ವಕೀಲರ ಮೂಲಕ ವಾದ ಮಂಡನೆ ಮಾಡಿ, ಇದು ಸ್ವತಂತ್ರ ಸಂಸ್ಥೆಯೆಂದು ಹೇಳಿದರು ಎಂದರು.
ನಾವು ನಮ್ಮ ವಾದದ ಮಂಡನೆ ಮಾಡಿದೆವು. ನಮ್ಮ ವಾದವನ್ನು ಪುರಸ್ಕರಿಸಿ, ಅರಮನೆ ಆಡಳಿತ ಮಂಡಳಿ ಸ್ವತಂತ್ರ ಸಂಸ್ಥೆಯಲ್ಲ ಎಂದು ಹೇಳಿದೆ. ಇದುವರೆಗೂ ಉದ್ದೇಶಪೂರ್ವಕವಾಗಿ ಅದು ಸ್ಥಾಪನೆಗೊಂಡ ವೇಳೆಯಿಂದ ಯಾರಿಗೂ ಮಾಹಿತಿ ಕೊಟ್ಟಿಲ್ಲ. ಹೈಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತರುತ್ತಾರೆ. ಅವರ ಬಳಿ ಹಣವಿದೆ, ಹೈಕೋರ್ಟ್, ಸುಪ್ರೀಂ ಕೋರ್ಟ್‌ಗೆ ಹೋಗುತ್ತಾರೆ ಎಂದು ಹೇಳಿದರು.
ದಂಡ ಕಟ್ಟಿ: ಸಾರ್ವಜನಿಕರ ಹಣದಿಂದ ಈ ರೀತಿ ಮಾಡುತ್ತಾರೆ. ಆಯೋಗ ಅರಮನೆ ಆಡಳಿತ ಮಂಡಳಿಗೆ 15 ದಿನಗಳ ಒಳಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದೆ. ಕರ್ತವ್ಯಲೋಪಕ್ಕೆ ಸರ್ಕಾರಕ್ಕೆ 25 ಸಾವಿರ ದಂಡ ಕಟ್ಟಬೇಕು. ಮಾಹಿತಿದಾರರಿಗೆ 50 ಸಾವಿರ ಪರಿಹಾರ ನೀಡಲು ಆದೇಶ ನೀಡಿದೆ. ಮಾಹಿತಿ ನೀಡದ ಅಧಿಕಾರಿ ವಿರುದ್ದ ಶಿಸ್ತು ಕ್ರಮಕ್ಕೆ ಆದೇಶ ಮಾಡಿದ್ದಾರೆ ಎಂದು ತಿಳಿಸಿದರು.
ಹೇಗೆ ಸ್ವಾಯತ್ತತೆ ಸಂಸ್ಥೆ?: ನಾನು ಸರ್ಕಾರಿ ಅಧಿಕಾರಿಯಾಗಿ ಕೆಲಸವನ್ನು ನಿರ್ವಹಿಸಿದ್ದೇನೆ. ನಾನು ಸರ್ಕಾರ ಹಾಗೂ ಸಾರ್ವಜನಿಕರಿಗೆ ಜವಾಬ್ದಾರಿಯಾಗಿದ್ದೇನೆ. ಅರಮನೆ ಆಡಳಿತ ಮಂಡಲಿ ಕನ್ನಡ ಸಂಸ್ಕೃತಿ ಇಲಾಖೆ ಅಡಿಯಲ್ಲಿ ಕೆಲಸ ಮಾಡುತ್ತದೆ. ಅಲ್ಲಿನ ಅಧಿಕಾರಿಗಳು ಇದನ್ನ ಸ್ವತಂತ್ರ ಸಂಸ್ಥೆ ಅಂದರೆ ಹೇಗೆ? ಹೇಗೆ ಸ್ವಾಯತ್ತ ಸಂಸ್ಥೆ? ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿ ನಮ್ಮ ಆಗ್ರಹ. ಮಹತ್ವದ ದಾಖಲೆಗಳನ್ನು ಪ್ರಕಟ ಮಾಡಬೇಕು, ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಆಯೋಗ ಈಗಾಗಲೇ ಘೋಷಣೆ ಮಾಡಿದೆ. ಇದೊಂದು ಸೂಕ್ಷ್ಮ ವಿಷಯವಾಗಿದೆ ಎಂದು ಹೇಳಿದರು.
ಸರ್ಕಾರ ಸರ್ವೋಚ್ಛ: ಸರ್ಕಾರಕ್ಕೆ ಯಾವುದೂ ದೊಡ್ಡ ವಿಷಯವಲ್ಲ. ಅಲ್ಲಿರುವ ಉಪ ನಿರ್ದೇಶಕರು ಹಾಗೂ ಸಿಬ್ಬಂದಿಗೆ ಒಂದು ಚೌಕಟ್ಟನ್ನು ಸರ್ಕಾರವೇ ಹಾಕಿ ಕೊಟ್ಟಿರುತ್ತದೆ. ಕನ್ನಡ ಸಂಸ್ಕೃತಿ ಇಲಾಖೆ ಅಡಿಯಲ್ಲಿ ಕೆಲಸ ಮಾಡುತ್ತದೆ. ಅವರನ್ನು ವರ್ಗಾವಣೆಯನ್ನು ಮಾಡಬಹುದಾಗಿದೆ. ಯಾವುದೇ ಅಧಿಕಾರಿಯನ್ನ ಹಾಗೂ ಅರಮನೆಯಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಒಬ್ಬರನ್ನು ದೀರ್ಘವಾಗಿ ಇರುವಂತೆ ಬಿಡುವುದು ಸೂಕ್ತವಾದುದ್ದು ಅಲ್ಲ. ಸರ್ಕಾರ ಸರ್ವೋಚ್ಛ, ಅದಕ್ಕೆ ವರ್ಗಾವಣೆ ಮಾಡುವುದಕ್ಕೆ ಆಗುವುದಿಲ್ಲ ಎಂಬ ಭಾವನೆ ತಪ್ಪು ಎಂದರು.
ಸಾರ್ವಜನಿಕರ ಹಣ ಪೋಲಾಗಬಾರದು:ಅರಮನೆ ಆಡಳಿತ ಮಂಡಳಿ ಆಯೋಗದ ತೀರ್ಪಿನ ವಿರುದ್ದವಾಗಿ ಹೈಕೋರ್ಟ್ ಮೋರೆ ಹೋದರೆ ನಾವು ಕೇಳುತ್ತೇವೆ. ಇದು ಸಾರ್ವಜನಿಕರ ಹಣ, ಹೇಗೆ ಅನಾವಶ್ಯಕವಾಗಿ ದುಡ್ಡು ಖರ್ಚು ಮಾಡುತ್ತಾರೆ. ಜನರು ನೀಡಿರುವ ಟಿಕೆಟ್ ಹಣವನ್ನು ಪೋಲು ಮಾಡಲು ಸರ್ಕಾರ ಬಿಡಬಾರದು. ತಪ್ಪು ಮಾಡಿರುವಂತಹ ಅಧಿಕಾರಿಯ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಹೇಳಿದರು.
ಸಮಗ್ರ ತನಿಖೆಗೆ ಒತ್ತಾಯ:ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತೇನೆ. ಮಾಹಿತಿ ಆಯೋಗದ ಬಾಗಿಲು ತೆಗೆದಿದೆ. ಮುಂದಿನ ಹೋರಾಟವನ್ನು ಮಾಡುತ್ತೇವೆ. ಇದರ ಬಗ್ಗೆ ಸಮಗ್ರ ತನಿಖೆ ಮಾಡಲು ಸರ್ಕಾರವನ್ನು ಕೇಳುತ್ತೇವೆ ಎಂದು ತಿಳಿಸಿದರು.